ನಗರದ ಬಸ್ ನಿಲ್ದಾಣದಲ್ಲಿ ಕಿಸೆಗಳ್ಳರ ಹಾವಳಿ ಶಶಿಕಾಂತ ತೇರದಾಳ

Sashikantha Teradala is a victim of scumbags at the city's bus stand

ನಗರದ ಬಸ್ ನಿಲ್ದಾಣದಲ್ಲಿ ಕಿಸೆಗಳ್ಳರ ಹಾವಳಿ  ಶಶಿಕಾಂತ ತೇರದಾಳ 

ಜಮಖಂಡಿ 29: ನಗರದ ಬಸ್ ನಿಲ್ದಾಣದಲ್ಲಿ ಕಿಸೆಗಳ್ಳರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಪ್ರಯಾಣಿಕರು ಕಣ್ಣೀರಿನಲ್ಲಿ ಕೈ ತೊಳೆಯುವಂತ ಪರಿಸ್ಥಿತಿ ಉದ್ಭವಿಸಿದೆ. 

ಬೇರೆ ಊರುಗಳಿಗೆ ಪ್ರಯಾಣ ಮಾಡುವ ಪ್ರಯಾಣಿಕರು ಅವಸರದಲ್ಲಿ ಬಸ್ ಹತ್ತಿ ತಮ್ಮ ಸೀಟ್‌ಗಳನ್ನು ಹಿಡಿಕೊಳ್ಳಲು ಬಸ್ ಹತ್ತುವ ಸಮಯದಲ್ಲಿ ಕಿಸೆ ಕಳ್ಳರು ತಮ್ಮ ಕೈ ಚಳಕವನ್ನು ತೋರಿಸಿ ಅಟ್ಟಹಾಸವನ್ನು ಮೆರೆಯುತ್ತಿದ್ದಾರೆ. ಜಮಖಂಡಿ ನಗರದ ಪ್ರಶಾಂತ ನೀಲನಾಯಕವೆಂಬ ವ್ಯಕ್ತಿಯು ತನ್ನ ತಾಯಿಯನ್ನು ಜಮಖಂಡಿಯಿಂದ ಬಾಗಲಕೋಟಗೆ ಪ್ರಯಾಣ ಮಾಡಲು ಬಸ್ ನಿಲ್ದಾಣಕ್ಕೆ ಕರೆತಂದು. ಬಾಗಲಕೋಟ ಬಸ್ ನಿಲುಗಡೆ ಪ್ಲಾಟ್ ಫಾರಂನಲ್ಲಿ ನಿಲ್ಲುತ್ತಿದಂತೆ ಪ್ರಯಾಣಿಕರು ಬಸ್ ಹತ್ತಲು ಮುಂದಾಗಿದ್ದಾರೆ. ಅಷ್ಟರಲ್ಲಿ ವಯೋವೃದ್ಧೆಯಾದ ತನ್ನ ತಾಯಿಯನ್ನು ಬಸ್‌ನಲ್ಲಿ ಬಿಟ್ಟು. ಬಾಗಿಲಿನಲ್ಲಿ ನಿಂತು ಬ್ಯಾಗ್‌ವನ್ನು ಕೊಡಲು ಮುಂದಾದ ವ್ಯಕ್ತಿಯು ಅಷ್ಟರಲ್ಲಿ ಕಿಸೆಗಳ್ಳರು ಜೇಬಿನಲ್ಲಿ ಇರುವ ಬೆಲೆ ಬಾಳುವ ಮೊಬೈಲ್‌ವನ್ನು ಎತ್ತುಕೊಂಡಿದ್ದಾರೆ. ಇನ್ನೇನು ತನ್ನ ತಾಯಿ ಊರಿಗೆ ಬರುತ್ತಿದ್ದಾಳೆಂದು ಪೋನ್ ಕರೆ ಮೂಲಕ ತಿಳಿಸಲು ಜೇಬಿನಲ್ಲಿ ಮೊಬೈಲ್ ತೆಗೆದುಕೊಳ್ಳಲು ಮುಂದಾಗಿದ್ದು. ಅಷ್ಟರಲ್ಲಿ ಮೊಬೈಲ್ ಇಲ್ಲದಿರುವನ್ನು ಕಂಡು ಕಣ್ಣೀರು ಹಾಕುವ ಪ್ರಸಂಗ ನಡೆದಿದೆ ಎಂದು ತಮ್ಮ ಅಳಲನ್ನು ಮಾಧ್ಯಮದ ಮುಂದೆ ತೊಡಿಕೊಂಡಿದ್ದಾರೆ. 

ಮತ್ತೊರ್ವ ಮಹಿಳೆಯು ಪ್ರಯಾಣ ಮಾಡುವ ಸಮಯದಲ್ಲಿ ಮಹಿಳೆಯ ಬೆಲೆ ಬಾಳುವ ಮೊಬೈಲ್‌ವನ್ನು ಕಿಸೆಗಳ್ಳರು ಕಳ್ಳತನ ಮಾಡಿದ್ದು, ಮಹಿಳೆಯು ಸಹ ಕಣ್ಣೀರು ಹಾಕುವ ದೃಶ್ಯ ಸಾಮಾನ್ಯವಾಗಿತ್ತು. ಕಿಸೆಗಳ್ಳರ ಅಟ್ಟಹಾಸ ಪ್ರತಿನಿತ್ಯ ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವದು ಸರ್ವೇಸಮಾನ್ಯವಾಗಿದೆ ಎಂದು ಪ್ರಯಾಣಿಕರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. 

ಶಹರ ಪೊಲೀಸ್‌ರು ಬಸ್ ನಿಲ್ದಾಣದಲ್ಲಿ ತಮ್ಮ ಕಾರ್ಯವನ್ನು ನಿರ್ವಹಿಸಿದರು ಸಹ ಕಿಸೆಗಳ್ಳರು ಮಾತ್ರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಳ್ಳತನವನ್ನು ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಬಸ್ ನಿಲ್ದಾಣದಲ್ಲಿ ಪ್ರತಿಯೊಂದು ಕಡೆಗೆ ಸಿಸಿ ಕ್ಯಾಮರಾ ಅಳವಡಿಸಿದರೆ ಮಾತ್ರ ಕಡಿವಾಣ ಹಾಕಲು ಸಾಧ್ಯ. ಕಾಟಾಚಾರಕ್ಕೆ ಮಾತ್ರ ಬೆರಳೆಣಿಕೆ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ಆದರೆ ಪ್ರಯಾಣ ಮಾಡುವ ಪ್ರಯಾಣಿಕರು ಬಾಗಿಲಿನಲ್ಲಿ ನಿಂತು ಹತ್ತುವ ಸಮಯದಲ್ಲಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗುತ್ತಿಲ್ಲ. ಪ್ರತಿಯೊಬ್ಬರ ಚಲನವಲನಗಳು ಸೆರೆಯಾಗಬೇಕಾದರೆ ಸಿಸಿ ಕ್ಯಾಮರಾಗಳ ಅವಶ್ಯಕತೆ ಬಹಳ ಮುಖ್ಯವಾಗಿದೆ.