ಬೀಳಗಿ 20: ಸರ್ವಜ್ಞನ ವಚನಗಳು ಎಲ್ಲ ಕಾಲಕ್ಕೂ ಪ್ರಸ್ತುತ. ಅವರ ವಚನಗಳಲ್ಲಿ ನಾಗರಿಕ ಸಮಾಜಕ್ಕೆ ನೀತಿ ಬೋಧನೆ ಇದೆ ಎಂದು ಸಂತೋಷಕುಮಾರ ವೈದ್ಯ ಹೇಳಿದರು.
ತಹಶೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಗುರುವಾರ ತಾಲ್ಲೂಕಾ ಆಡಳಿತದ ವತಿಯಿಂದ ಏರಿ್ಡಸಿದ ದಾರ್ಶನಿಕ ಸರ್ವಜ್ಞ ಜಯಂತ್ಯೊತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸ್ವಾಸ್ಥ್ಯ ನಾಗರೀಕ ಸಮಾಜ, ಕುಟುಂಬ, ಆಹಾರ ವ್ಯವಸ್ಥೆ ಹೇಗೆ ಇರಬೇಕು ಎನ್ನುವುದನ್ನು ಅವರ ವಚನಗಳ ಮುಖಾಂತರ ಮನುಕುಲಕ್ಕೆ ತಿಳಿಸಿದರು.
ತಹಶೀಲ್ದಾರ್ ವಿನೋದ ಹತ್ತಳ್ಳಿ ಮಾತನಾಡಿ, ತ್ರಿಕಾಲ ಜ್ಞಾನಿ ಸರ್ವಜ್ಞ ಅವರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅಭಿವೃದ್ಧಿ ಹೊಂದೋಣ, ಉತ್ತಮ ಸಮಾಜ ಕಟ್ಟೋಣ ಎಂದರು.
ಇಒ ಅಭಯಕುಮಾರ ಮೊರಬ , ಗ್ರೇಡ್ 2 ತಹಶೀಲ್ದಾರ್ ಆನಂದ ಕೊಲಾರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದೇವಿಂದ್ರ ಧನಪಾಲ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಮುತ್ತು ಬೊರ್ಜಿ, ಸದಸ್ಯರಾದ ಸಿದ್ಧಲಿಂಗೇಶ ನಾಗರಾಳ, ಸಂತೋಷ ನಿಂಬಾಳಕರ, ಸಿದ್ದು ಮಾದರ,ಪರಶುರಾಮ ಮಮದಾಪೂರ, ಬಾಗವಾನ ಹಾಗೂ ಸಮಾಜದ ಮುಖಂಡರುಗಳಾದ ಕಾಡಪ್ಪ ಕುಂಬಾರ, ವೀರಣ್ಣ ಕುಂಬಾರ, ರಾವತ ಕುಂಬಾರ, ಮಲ್ಲಪ್ಪ ಕುಂಬಾರ, ಹುಚ್ಚೇಶ ಕುಂಬಾರ ಇದ್ದರು.
ಬೀಳಗಿ ತಹಶೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಗುರುವಾರ ಏರಿ್ಡಸಿದ ಸರ್ವಜ್ಞ ಜಯಂತಿ ಸಮಾರಂಭದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.