ಹಿಕ್ಕನಗುತ್ತಿ ಗ್ರಾಪಂ ಅಧ್ಯಕ್ಷರಾಗಿ ಸರಸ್ವತಿ ಆಯ್ಕೆ
Saraswati elected as Hikkanagutti Grama Panchayat President
ಸಿಂದಗಿ 26: ತಾಲೂಕಿನ ಹಿಕ್ಕನಗುತ್ತಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಸರಸ್ವತಿ ತಳವಾರ ಆಯ್ಕೆಯಾಗಿದ್ದಾರೆ ಎಂದು ದೇವರ ಹಿಪ್ಪರಗಿ ತಾಪಂ ಇಓ, ಚುನಾವಣಾಧಿಕಾರಿ ಬಾರತಿ ಚಲುವಯ್ಯ ಘೋಷಣೆ ಮಾಡಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಅವಿಶ್ವಾಸ ಗೊತ್ತುವಳಿಯಾಗಿ ಖಾಲಿ ಇರುವ ಅಧ್ಯಕ್ಷ ಸ್ಥಾನಕ್ಕೆ ಮೇ 19 ರಂದು ಚುನಾವಣೆ ಜರುಗಿತ್ತು. ಚುನಾವಣಾ ವಿಷಯವು ಉಚ್ಚ ನ್ಯಾಯಾಲಯ ಕಲಬುರ್ಗಿ ಯಲ್ಲಿ ಇರುವುದರಿಂದ ಘೋಷಣೆ ಮಾಡಲು ಆಗಿರಲಿಲ್ಲ. ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನಂತರ ಉಚ್ಚ ನ್ಯಾಯಾಲಯ ಕಲಬುರ್ಗಿ ಇವರ ಆದೇಶದ ಮೇರೆಗೆ ಮೇ 20 ರಂದು ಹಿಕ್ಕನಗುತ್ತಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಸರಸ್ವತಿ ತಳವಾರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದರು.
ಅಧಿಕಾರ ಸ್ವಿಕರಿಸಿದ ನೂತನ ಅಧ್ಯಕ್ಷೆ ಸರಸ್ವತಿ ತಳವಾರ ಮಾತನಾಡಿ, ಪಂಚಾಯತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ವಾರ್ಡ್‌ಗಳಲ್ಲಿ ಸಂಚರಿಸಿ ಸಾರ್ವಜನಿಕರು ಮತ್ತು ಸದಸ್ಯರ ವಿಶ್ವಾಸಕ್ಕೆ ತಗೆದುಕೊಂಡು ಅಭಿವೃದ್ಧಿ ಕಾರ್ಯ ಮಾಡುತ್ತೇನೆ ಎಂದು ಹೇಳಿದರು.
ಉಪಾಧ್ಯಕ್ಷ ಪ್ರಕಾಶ ಅಡವಿ, ಸದಸ್ಯರಾದ ವಿ.ವಾಯ್. ಬಿರಾದಾರ, ಚಂದ್ರಕಾಂತ ಸಣಮನಿ, ಶಿವಾನಂದ ಮರಬದ, ಕಸ್ತೂರಿಬಾಯಿ ಸಾತಲಗಾಂವ, ಗಿರಿಜಾಬಾಯಿ ಬಡಿಗೇರ, ಪರಮೇಶ್ವರ ದೇಸಾಯಿ, ಅರ್ಜುನ ದೊಡ್ಮನಿ, ಮಾನಂದ ಮಾದರ, ಹಾಗೂ ಮುಖಂಡರಾದ ರವಿಕಾಂತ ನಾಯ್ಕೋಡಿ, ಸಿದ್ದು ಸಾತಲಗಾಂವ, ನಾಗಣ್ಣ ಬಿರಾದರ, ಶಂಕರ ಬೊಮ್ಮನಹಳ್ಳಿ ಇತರರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 