ಸರಸ್ವತಿ ಹಡಪದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 90.08 ಸಾಧನೆ

ಸರಸ್ವತಿ ಹಡಪದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 90.08 ಸಾಧನೆ Saraswati Hadapada scores 90.08 in SSLC exam

ಲೋಕದರ್ಶನ ವರದಿ 

 ಲಕ್ಷ್ಮೇಶ್ವರ" ಪಟ್ಟಣದ ಪಿ ಎಸ್ ಬಿ ಡಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಸರಸ್ವತಿ ಹಡಪದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 90.08 ಪರ್ಸೆಂಟ್ ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದು ಶಾಲೆಯ ಶಿಕ್ಷಕ ವೃಂದದವರಿಗೆ ಮತ್ತು ವಿದ್ಯಾರ್ಥಿನಿಯ ಪಾಲಕರಾದ ವೀರಭದ್ರ​‍್ಪ ಕಮಲವ್ವ ಹಡಪದ ಅವರು ತಮ್ಮ ಮಗಳ ಸಾಧನೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಸರಸ್ವತಿ ಹಡಪದ ವಿದ್ಯಾರ್ಥಿನಿಯ ತಂದೆ ತಾಯಿಗಳು ಹೆಚ್ಚಿನ ವಿದ್ಯಾಭ್ಯಾಸ ಮಾಡದೆ ಇದ್ದರು ಸಹ ಸರಸ್ವತಿ ಹಡಪದ ಹೆಚ್ಚಿನ ವಿದ್ಯಾಭ್ಯಾಸದ ಕಡೆಗೆ ಒಲವು ಕೊಟ್ಟು ಬಡತನದ ತಮ್ಮ ಕುಟುಂಬದ ಮನವರಿಕೆಯನ್ನು ಮಾಡಿಕೊಂಡು ನಮ್ಮ ತಂದೆ ತಾಯಿಯವರು ಇಷ್ಟು ಕಷ್ಟ ಪಡುತ್ತಿದ್ದಾರೆ ಅವರು ನಮ್ಮಗೋಸ್ಕರ ಪಡುತ್ತಿರುವ ಕಷ್ಟಕ್ಕೆ ನಾವು ಉತ್ತಮ ವಿದ್ಯಾಭ್ಯಾಸ ಮಾಡಿ ಉನ್ನತ ಶ್ರೇಣಿಯಲ್ಲಿ ಪಾಸ್ ಆಗಬೇಕು ಎಂದು ಸಾಕಷ್ಟು ಶ್ರಮಪಟ್ಟು ರಾತ್ರಿ ಹಗಲು ಎನ್ನದೆ ವಿದ್ಯಾಭ್ಯಾಸ ಮಾಡಿದೆ ಆದರೆ ನನಗೆ 95, -98,-ಪರ್ಸೆಂಟ್ ಬರಬೇಕಾಗಿತ್ತು ಆದರೂ 90.08 ಬಂದಿದೆ ನನಗೆ ತೃಪ್ತಿ ತಂದಿದೆ ಮುಂದೆ ಇನ್ನೂ ಹೆಚ್ಚಿನ ಶ್ರಮಪಟ್ಟು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಆಸೆ ಇದೆ ಎಂದು ವಿದ್ಯಾರ್ಥಿನಿ ಸರಸ್ವತಿ ಹಡಪದ ತಿಳಿಸಿದ್ದಾರೆ