ಕಾರವಾರ ಕ್ಷೇತ್ರದಲ್ಲಿ ಎಸ್.ವಿ.ಸಂಕನೂರ್ ರಿಂದ ಪದವೀಧರರಲ್ಲಿ ಮತಯಾಚನೆ

Sanknuru s.v.at karwar

ಕಾರವಾರ ಕ್ಷೇತ್ರದಲ್ಲಿ  ಎಸ್.ವಿ.ಸಂಕನೂರ್ ರಿಂದ ಪದವೀಧರರಲ್ಲಿ  ಮತಯಾಚನೆ

•••••••••••••••••••••

 ಕಾರವಾರ , ಅ.21 :ಇಂದು ಕಾರವಾರ ವಿಧಾನಸಭಾ ಕ್ಷೇತ್ರದ ಪಶ್ಚಿಮ ಪದವಿಧರ ಮತಕ್ಷೇತ್ರದ ಚುನಾವಣೆ ಪ್ರಯುಕ್ತ ಉತ್ತರ ಕನ್ನಡ ಜಿಲ್ಲೆಯ ಕಾರವಾರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಹಾವಿದ್ಯಾಲಯಗಳಾದ ಕಾರವಾರದ ಸರಕಾರಿ ಡಿಪ್ಲೊಮಾ, ಕಾರವಾರದ ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ,ಸೆಂಟ್ ಮಿಲಾಗ್ರಿಸ್ ಕೋ ಒಪರಟಿವ್ ಬ್ಯಾಂಕ್, ಕಿಶೋರ ರಾಣೆ ಮನೆಯಲ್ಲಿ   ಬಿಜಿವಿಎಸ್ ನ ಉದ್ಯೋಗಿಗಳೊಂದಿಗೆ, ಬಾಡ ಶಿವಾಜಿ ಮಹಾವಿದ್ಯಾಲಯ ಹಾಗು ದೈವಜ್ನ್ಯ ಕೋ ಒಪೆರಟಿವ್ ಬ್ಯಾಂಕ್ ಕಾರವಾರದ  ಪದವಿಧರ ಮತದಾರರನ್ನು ಬಿಜೆಪಿ ಬೆಂಬಲಿತ ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿಯಾದ ಎಸ್.ವಿ.ಸಂಕನೂರ್ ರವರು ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ  ರೂಪಾಲಿ ನಾಯ್ಕ   ಜೊತೆಯಲ್ಲಿ ಮತಯಾಚನೆ ಮಾಡಿದರು ಹಾಗೆಯೇ  ಕಾರವಾರ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಕಾರ್ಯಕರ್ತರ ಸಭೆಯನ್ನು ನಡೆಸಲಾಯಿತು, ಈ ಸಂದರ್ಭದಲ್ಲಿ ಪಶ್ಚಿಮ ಪದವಿಧರ ಮತಕ್ಷೇತ್ರದ ಚುನಾವಣೆ ಅಭ್ಯರ್ಥಿ  ಎಸ್,ವಿ,ಸಂಕನೂರ ಕಾರವಾರ  ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್ ನಾಯ್ಕ , ಮಾಜಿ ಶಾಸಕ ಗಂಗಾಧರ ಭಟ್ಟ, ಜಿಲ್ಲಾ ಉಪಾಧ್ಯಕ್ಷರು ಹಾಗೂ ಜಿಲ್ಲಾ ವಕ್ತಾರರಾದ 

ನಾಗರಾಜ, ಜಿಲ್ಲಾ ಮಾಧ್ಯಮ ಸಂಚಾಲಕರಾದ  ರಾಜೇಶ್  ಸಿದ್ಧರ, ಪ್ರಮುಖರಾದ  ಗಣಪತಿ ಉಳ್ವೇಕರ, ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಕಿಶನ್ ಕಾಂಬಳೆ ಒಳಗೊಂಡಂತೆ ಬಿಜೆಪಿಯ  ಪದಾಧಿಕಾರಿಗಳು, ಕಾರ್ಯಕರ್ತರು ಹಾಗು ಅನೇಕ ಪದವೀಧರರು ಹಾಗು ಹಿರಿಯರು ಉಪಸ್ಥಿತರಿದ್ದರು.