ವಿಜಯಪುರದ ಸಂಕೇತ ಬಗಲಿ ಮತ್ತು ರಘು ಸಾಲೋಟಗಿ ಕೋಲ್ಕತ್ತಾದಲ್ಲಿ ನಡೆದ ಟಾಟಾ ಸ್ಟೀಲ್ 21 ಕಿ. ಮೀ. ಮ್ಯಾರಾಥಾನ್ ನಲ್ಲಿ ಪಾಲ್ಗೊಳ್ಳುವಿಕೆ
ವಿಜಯಪುರ 17: ಬಸವನಾಡಿನ ಇಬ್ಬರು ಓಟಗಾರರು ರವಿವಾರ ಕೋಲ್ಕತ್ತಾದಲ್ಲಿ ನಡೆದ ಟಾಟಾ ಸ್ಟೀಲ್ 21 ಕಿ. ಮೀ. ಒಟದಲ್ಲಿ ಪಾಲ್ಗೊಳ್ಳುವ ಮೂಲಕ ಪ್ರೊಕ್ಯಾಮ್ ಸ್ಲ್ಯಾಮ್ ಮ್ಯಾರಾಥಾನ್ ಪೂರ್ಣಗೊಳಿಸಿ ಇತರ ಓಟಗಾರರಿಗೆ ಸ್ಪೂರ್ತಿಯಾಗಿದ್ದಾರೆ.ನಗರದ ಉದ್ಯಮಿ ಸಂಕೇತ ಬಗಲಿ(46) ಮತ್ತು ಚಡಚಣ ತಾಲೂಕಿನ ದೇವರ ನಿಂಬರಗಿ ಮೂಲದ ಮತ್ತು ಈಗ ಬೆಂಗಳೂರಿನಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿರುವ ರಘು ಸಾಲೋಟಗಿ(44) ಈ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.ಪ್ರೊಕ್ಯಾಮ್ ಸ್ಲ್ಯಾಮ್ ನಾಲ್ಕು ಮ್ಯಾರಾಥಾನ್ ಗಳನ್ನು ಒಳಗೊಂಡಿರುವ ವಿಶಿಷ್ಠವಾದ ಓಟವಾಗಿದೆ. ಒಂದು ವರ್ಷದಲ್ಲಿ ಟಾಟಾ ಮುಂಬೈ ಮ್ಯಾರಾಥಾನ್ 42 ಕಿ. ಮೀ., ಬೆಂಗಳೂರು ಟಿಸಿಎಸ್ ವರ್ಲ್ಡ 10 ಕಿ. ಮೀ, ದೆಹಲಿ ವೇದಾಂತ 21 ಕಿ. ಮೀ ಹಾಫ್ ಮ್ಯಾರಾಥಾನ್ ಹಾಗೂ ಕೊಲ್ಕತ್ತಾ ಟಾಟಾ ಸ್ಟೀಲ್ 25 ಕಿ. ಮೀ. ಮ್ಯಾರಾಥಾನ್ ಗಳಲ್ಲಿ ಪಾಲ್ಗೊಂಡು ಓಟಗಳನ್ನು ಪೂರ್ಣಗೊಳಿಸುವುದು ಇದರ ವಿಶೇಷವಾಗಿದೆ.ಸಂಕೇತ ಬಗಲಿ ಈಗಾಗಲೇ 12ಕ್ಕೂ ಹೆಚ್ಚಿ ಹಾಫ್ ಮ್ಯಾರಾಥಾನ್, 3 ಫುಲ್ ಮ್ಯಾರಾಥಾನ್ ಹಾಗೂ ಅಲ್ಟ್ರ ಮ್ಯಾರಾಥಾನ್ ಗಳಲ್ಲಿ ಪಾಲ್ಗೊಂಡು ದೈಹಿಕ ಮತ್ತು ಮಾನಸಿಕ ಸದೃಢತೆಗೆ ಇತರರಿಗೆ ಸ್ಪೂರ್ತಿಯಾಗಿದ್ದಾರೆ.ರಘು ಸಾಲೋಟಗಿ ಅವರು ಕೂಡ ಈಗಾಗಲೇ ಸಾಕಷ್ಟು ಫುಲ್ ಮ್ಯಾರಾಥಾನ್, ಹಾಪ್ ಮ್ಯಾರಾಥಾನ್, ಅಲ್ಟ್ರ ಮ್ಯಾರಾಥಾನ್ ಮತ್ತು ಇತ್ತೀಚೆಗೆ ನಡೆದ ಮಲೆನಾಡು ಮ್ಯಾರಾಥಾನ್ ನಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ.ಸಂಕೇತ ಬಗಲಿ ಮತ್ತು ರಘು ಸಾಲೋಟಗಿ ಅವರ ಈ ಸಾಧನೆಗೆ ವೃಕ್ಷಥಾನ್ ಹೆರಿಟೇಜ್ ರನ್- 2024 ಕೋರ್ ಕಮಿಟಿ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.