ಸಂಕೇಶ್ವರ ಸೌಹಾರ್ದ ಕ್ರೆಡಿಟ್ ಸಹಕಾರಿ 27 ನೇ ವಾರ್ಷಿಕ ಸರ್ವ ಸಾಧಾರಣ ಸಭೆ
Sankeshwar Souharda Credit Cooperative 27th Annual General Meeting
ಲೋಕದರ್ಶನ ವರದಿ
ಸಂಕೇಶ್ವರ: ಸೌಹಾರ್ದ ಕ್ರೆಡಿಟ್ ಸಹಕಾರಿ ಲಿ., ಸಂಕೇಶ್ವರ ಈ ಸಂಘದ 27 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯು ಸಾಯಿ ಭವನದಲ್ಲಿ ಆಯೋಜಿಸಲಾಗಿತ್ತು ಸಂಘದ ಚೇಅರಮನ್ ಅಮರ ಮಧುಕರ ನಲವಡೆ ಇವರು ತಾವು ಸನ್ 2003-04 ರಲ್ಲಿ ಈ ಸಂಘವನ್ನು ಸಂಸ್ಥಾಪಕರಾದ ದಿ. ಮಧುಕರ ಡಿ. ನಲವಡೆ ಇವರು ಸ್ಥಾಪಿಸಿ ಎಲ್ಲ ಚಿಕ್ಕ ಪುಟ್ಟ ವ್ಯಾಪಾರಸ್ಥರಿಗೆ ನೆರವುಆಗಲೆಂದು ಈ ಸಂಸ್ಥೆಯನ್ನು ಹುಟ್ಟು ಹಾಕಿದರು ಈ ಸಂಘವು 2025-26 ರಲ್ಲಿ ರೂ. 91,76,102.29 ಗಳನ್ನು ಲಾಭ ಗಳಿಸಿ ದಾಪುಗಾಲು ಹಾಕಿ ಹೆಮ್ಮರವಾಗಿ ಬೆಳೆಯುತ್ತಿರುವುದು ಇದಕ್ಕೆಲ್ಲ ಸಂಘದ ಯಾವತ್ತೂ ಸದಸ್ಯರು ಈ ಸಂಘಕ್ಕೆ ಪ್ರೇರಣಾ ಶಕ್ತಿಯಾಗಿ ನಿಂತಿದ್ದು ತಮ್ಮ ಸುದೈವವೆಂದು ತಮ್ಮ ಅಧ್ಯಕ್ಷರ ಭಾಷಣದಲ್ಲಿ ಒತ್ತಿ ಹೇಳಿದಲ್ಲದೇ, ಹಲವಾರು ವರ್ಷಗಳ ಹಿಂದೆ ಗ್ಯಾಸ ಸಿಲೆಂಡರ ಕನೆಕ್ಷನ ಸಿಗುವುದು ತುಂಬಾ ಕಷ್ಟವಾಗಿತ್ತು ಇದೆ ಸಂದರ್ಭದಲ್ಲಿ ತಮ್ಮ ಆತ್ಮೀಯ ಸಹೋದರರಾದ ಅಭೀಜೀತ ಅಶೋಕ ಕುರಣಕರ ಅವರು ಗ್ಯಾಸ ಸಿಲೆಂಡರ್ ವಿತರಕರಾಗಿದ್ದು ಅವರಿಗೆ ತಾವು ಮನವಿ ಮಾಡಿಕೊಂಡಾಗ ಸುಮಾರು 1000 ಕನೆಕ್ಷನ ಕೊಟ್ಟಿದ್ದೇವೆ ಮತ್ತು ಸದಸ್ಯರು ತಾವು ಸಂಚಾಲಕ ಮಂಡಳಿಯವರು ತಪ್ಪು ಮಾಡಿದರೇ ಅದನ್ನು ತಮ್ಮ ಕಡೆಗೆ ಹೇಳಿದರೆ ತಾವು ತಕ್ಷಣ ಸುಧಾರಿಸಿಕೊಳ್ಳುತ್ತೇವೆ ಮತ್ತು ಸದಸ್ಯರು ಯಾವಾಗಲೂ ಸರ್ವೋಚ್ಚ ತೀರ್ುಗಾರರಾಗುತ್ತಾರೆ.
ಆರ್ಥಿಕ ಸೌಲಭ್ಯ ಮತ್ತು ವ್ಯಾಪಾರಸ್ಥರಿಗೆ ಆರ್ಥಿಕವಾಗಲೆಂದು ಮಹಾರಾಷ್ಟ್ರದ ಹಮಿದವಾಡಾದ ಸದಾಶಿವರಾವ ಮಂಡಲಿಕ ಸಕ್ಕರೆ ಕಾರ್ಖಾನೆಗೆ ಈ ಭಾಗದಿಂದ 70 ಸಾವಿರ ಟನ್ ಕಬ್ಬನ್ನು ಪೂರೈಸಲಾಗುತ್ತಿದ್ದು ರೈತರಿಗೆ ಕಡಿಮೆ ಬಡ್ಡಿಯಲ್ಲಿ 12ಅ ರಷ್ಟು ಬಡ್ಡಿ ಆಕರಣೆ ಮಾಡಲಾಗುವುದು ರೈತರು ಇದರ ಲಾಭವನ್ನು ಪಡೆದುಕೊಂಡು ಆರ್ಥಿಕ ಮುಗ್ಗಟ್ಟದಿಂದ ಹೊರಬರಬೇಕು ರೈತರು ಆರ್ಥಿಕವಾಗಿ ಸದೃಢರಾಗಬೇಕೆಂದು ತಮ್ಮೆಲ್ಲ ನಿರ್ದೇಶಕರ ಬಯಕೆಯಾಗಿರುತ್ತದೆ ಎಂದು ಸದಸ್ಯರನ್ನು ಉದ್ದೇಶಿಸಿ ಮಾತನಾಡಿದಲ್ಲದೇ ಗ್ರಾಮೀಣ ಭಾಗದಲ್ಲಿ ಮತ್ತೊಂದು ಶಾಖೆಯನ್ನು ಆರಂಭಿಸಿ ಅಲ್ಲಿಯ ವ್ಯಾಪಾರಸ್ಥರಿಗೆ ರೈತರಿಗೆ ಅನುಕೂಲವಾಗುವ ಸೌಲಭ್ಯವನ್ನು ಕಲ್ಪಿಸುವುದು ಮತ್ತು ಬೆಳಗಾವಿಯಲ್ಲಿ ಇನ್ನೊಂದು ಶಾಖೆಯನ್ನು ಸ್ಥಾಪಿಸಲಾಗುವದು ಎಂದು ಎಲ್ಲ ನಿರ್ದೇಶಕರ ಸಂಕಲ್ಪವಾಗಿದೆ ಎಂದು ಅಮರ ನಲವಡೆ ಇವರು ತಮ್ಮ ಭಾಷಣದಲ್ಲಿ ಹೇಳಿದರು.
ಸಿ.ಈ.ಓ. ವಿಜಯ ಡಿ. ಬೋಟೆ, ಇವರು ಸಂಘದ ಅಢಾವೆ ಪತ್ರಿಕೆಯನ್ನು ಓದಿ ದೃಢೀಕರಿಸಿದರು, ಜಯಪ್ರಕಾಶ ಸಾವಂತ, ಅಪ್ಪಾಸಾಹೇಬ ಚೌಗಲೆ ಈ ಸಂಘದ ಏಳಿಗೆಯ ಬಗ್ಗೆ ಸಂಘದ ಸದಸ್ಯರಿಗೆ ಮಾಹಿತಿಯನ್ನು ನೀಡಿದರು, ಪ್ರಾರಂಭದಲ್ಲಿ ದಿ. ಮಧುಕರ ನಲವಡೆ ಇವರಿಗೆ ಎಲ್ಲ ನಿರ್ದೇಶಕರು ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದರು, ವೇದಿಕೆಯ ಮೇಲೆ ಮಹಾದೇವ ಕ್ಷಿರಸಾಗರ, ಬಸಗೌಡಾ ಬಿ. ಪಾಟೀಲ, ಕೃಷ್ಣಾ ಎಸ್. ಸುಗಂಧಿ, ಜಯಪ್ರಕಾಶ ಕೆ. ಖಾಡೆ, ರವೀಂದ್ರ ಈ. ಕಾಂಬಳೆ, ಪಿಂಟೂ ದತ್ತಾ ಪರೀಟ, ಜಾಕೀರ ಎ. ಬೆಟಗೇರಿ, ಪ್ರಮೋದ ಡಿ. ಜಾಧವ, ಆರ್ಯನ ಅಮರ ನಲವಡೆ, ಬೆಳಗಾವಿ ಶಾಖೆಯ ಸಲಹಾ ಕಮೀಟಿ ಚೇರಮನ ಈಶಾನ ಅಮರ ನಲವಡೆ, ವೈಸ್ ಚೇರಮನ್ ರತನ ಎಸ್. ಪಂಡಿತ, ಸದಸ್ಯರು ಶಶಾಂಕ ಬಾ. ಮೋಹಿತೆ, ಶಕೀಲ ಸಿಕಂದರ ಜಮಾದರ, ಶಿವರಾಯಿ ಸಿ. ತೇಲಿ, ಮಿಹೀರ ಅ. ಹೇರೆಕರ, ಸಿದ್ಧಾಂತ ಹ. ಜಾಧವ, ಉಪಸ್ಥಿತರಿದ್ದರು. ಆರಂಭದಲ್ಲಿ ಕುಮಾರ ಕಿವಂಡಾ ಇವರು ಪ್ರಾಸ್ತಾವಿಕ ಭಾಷಣ ಮತ್ತು ಪರಿಚಯ ನೀಡಿದರು, ಕೊನೆಗೆ ಸಂದೀಪ ಕದಮ ಆಭಾರ ಮನ್ನಿಸಿ ವಾರ್ಷಿಕ ಸರ್ವಸಾಧಾರಣ ಸಭೆಯು ಮುಕ್ತಾಯಗೊಂಡಿತು.
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ 