ಕೆಎಸ್‌ಒಯು ನಲ್ಲಿ ಏಕಕಾಲಕ್ಕೆ ಎರಡು ಪದವಿಗಳನ್ನು ಪಡೆಯಲು ಅವಕಾಶವಿದೆ : ವಿ. ಸಿ ಜ್ಞಾನ ಪ್ರಕಾಶ್

ಕೆಎಸ್‌ಒಯು ನಲ್ಲಿ ಏಕಕಾಲಕ್ಕೆ ಎರಡು ಪದವಿಗಳನ್ನು ಪಡೆಯಲು ಅವಕಾಶವಿದೆ  : ವಿ. ಸಿ  ಜ್ಞಾನ ಪ್ರಕಾಶ್   Opportunity exists to pursue two degrees simultaneously at KSOU: VC Jnana Prakash


ಬಳ್ಳಾರಿ. ಸೆ. 23 : ನಗರದ ನಲಚರವು ಪ್ರದೇಶದಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ದೂರ ಶಿಕ್ಷಣ ತರಗತಿಗಳಿಗೆ ಪ್ರವೇಶವನ್ನು ಸೆಪ್ಟೆಂಬರ್ 31ರವರೆಗೆ ಪಡೆದುಕೊಳ್ಳಬಹುದು ಎಂದು ವಿಶ್ವವಿದ್ಯಾಲಯದ ಕುಲಪತಿ ಜ್ಞಾನ ಪ್ರಕಾಶ್ ತಿಳಿಸಿದರು. ಈ ಕುರಿತು ಅವರು ಇಂದು ಪತ್ರಿಕಾ ಭವನದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿ,  ರಾಜ್ಯದಲ್ಲಿ ದೂರ ಶಿಕ್ಷಣ ನೀಡುವ ಏಕೈಕ ವಿಶ್ವವಿದ್ಯಾಲಯ ಕೆಎಸ್‌ಒಯು ಆಗಿದೆ ನಮ್ಮ ವಿಶ್ವವಿದ್ಯಾಲಯದಲ್ಲಿ ಉದ್ಯೋಗಸ್ಥರು  ಕಾಲೇಜುಗಳಿಗೆ ರೆಗ್ಯುಲರ್ ಆಗಿ ಹಾಜರಾಗಲು ಸಾಧ್ಯವಾಗದವರು ಮಹಿಳೆಯರು ಸೇರಿದಂತೆ  ಎಲ್ಲರೂ ಬಿಕಾಂ ಬಿಎ ಸೇರಿದಂತೆ ವಿವಿಧ ರೀತಿಯ ಪದವಿಗಳು  ಮತ್ತು  ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಳ್ಳಬಹುದು,  

ಎಲ್ಲರಿಗೂ ಎಲ್ಲಾ ಕಡೆ ಉನ್ನತ ಶಿಕ್ಷಣ ಎಂಬ ಧ್ಯೆಯ ವಾಕ್ಯದೊಂದಿಗೆ  ರಾಜ್ಯದಲ್ಲಿ ಸುಮಾರು 38 ಪ್ರಾದೇಶಿಕ ಕೇಂದ್ರಗಳಿದ್ದು 75 ಪರೀಕ್ಷಾ ಕೇಂದ್ರಗಳಿವೆ ಆನ್ಲೈನ್ ಮೂಲಕ  ಎಲ್ಲಿಂದಲಾದರೂ ಪ್ರವೇಶವನ್ನು ಪಡೆದು ಪದವಿಗಳನ್ನು ಪಡೆಯಬಹುದು ಮತ್ತು ನಮ್ಮ ವಿಶ್ವವಿದ್ಯಾಲಯದಲ್ಲಿ ಆನ್ಲೈನ್ ತರಗತಿಗಳನ್ನು ಸಹ ಆರಂಭಿಸಲಾಗಿದೆ ಅಷ್ಟೇ ಅಲ್ಲದೆ ಪ್ರತ್ಯೇಕವಾದ ಯುಟ್ಯೂಬ್ ಹೊಂದಿರುವ ನಮ್ಮ ವಿವಿಯ ಎಲ್ಲಾ ಪಠ್ಯಕ್ರಮಗಳನ್ನು ಪಡೆದುಕೊಂಡು ಪರೀಕ್ಷೆ ತಯಾರಿಯನ್ನು ನಡೆಸಬಹುದಾಗಿದೆ ಅದಕ್ಕಿಂತ ಮುಖ್ಯವಾಗಿ ಸಕಾಲದಲ್ಲಿ ಮತ್ತು ಅತ್ಯಂತ ಉಪಯುಕ್ತವಾದ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುವುದು . 

ಇದರಿಂದ ಉನ್ನತ ಗುಣಮಟ್ಟದ ವಿದ್ಯೆಯನ್ನು ಪಡೆದುಕೊಳ್ಳಬಹುದು ನಮ್ಮಲ್ಲಿ ಪಡೆಯುವ ಪದವಿಗಳು ಎಲ್ಲಾ ರೆಗುಲರ್ ಕಾಲೇಜುಗಳ ಪದವಿಗೆ ಸಮಾನವಾಗಿರುತ್ತದೆ ಖಾಸಗಿ ಮತ್ತು ಸರ್ಕಾರಿ ಹುದ್ದೆ ಪಡೆಯಲು ಸಹ ನಮ್ಮ ಪದವಿಗಳು ಅರ್ಹವಾಗಿರುತ್ತವೆ ನಮ್ಮಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಕೆಎಎಸ್ ಮತ್ತು ಐಎಎಸ್ ಸೇರಿದಂತೆ ಹಲವಾರು ಉನ್ನತ ಹುದ್ದೆಗಳನ್ನು ಪಡೆದುಕೊಂಡಿದ್ದಾರೆ ಎಂದರು. ಮ್ಯಾಕ್ ಮಾನ್ಯತೆ ಹೊಂದಿರುವ ನಮ್ಮ ವಿಶ್ವವಿದ್ಯಾಲಯದಲ್ಲಿ ರಾಜ್ಯ ಮತ್ತು ಹೊರರಾಜ್ಯದಲ್ಲಿ 12800 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ ಇದರಿಂದ ನಮ್ಮ ವಿಶ್ವವಿದ್ಯಾಲಯ ದೂರ ಶಿಕ್ಷಣ ನೀಡುವಲ್ಲಿ ಇಡೀ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ, ಬಳ್ಳಾರಿ ಕೇಂದ್ರವನ್ನು ಉತ್ತರ ಕರ್ನಾಟಕದ ನೋಡಲ್ ಕೇಂದ್ರವನ್ನಾಗಿ ಮಾಡಲಾಗುವುದು ಎಂದರು.

ದಾರಿಯ ಯಾವುದಯ್ಯ  ಕೆಎಸ್‌ಒಯುಗೆ  ನಲ್ಲ ಚರವು ಪ್ರದೇಶದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸುಸಜ್ಜಿತವಾದ ಉತ್ತಮ ಸೌಲಭ್ಯಗಳ ಕಟ್ಟಡವಿದ್ದು ಈ ಕೇಂದ್ರಕ್ಕೆ ಹೋಗಿ ಬರಲು ರಸ್ತೆಯ ಅನಾನುಕೂಲವಿದ್ದು ಯುವ ಸಬಲೀಕರಣ ಇಲಾಖೆಯವರು ಆ ರಸ್ತೆಯನ್ನು ಬಂದ್ ಮಾಡುತ್ತಾರೆ ಎನ್ನುವುದು ತಿಳಿದು ಬಂದಿದೆ, ಇದರಿಂದಾಗಿ ವಿದ್ಯಾರ್ಥಿಗಳಿಗೆ ಕೇಂದ್ರಕ್ಕೆ ಹೋಗಿ ಬರಲು ಸಮಸ್ಯೆ ಆಗಿರುತ್ತದೆ  ದಯವಿಟ್ಟು ಜಿಲ್ಲಾಧಿಕಾರಿಗಳು ಕೆ ಎಸ್ ಓ ಯು ಗೆ ಹೋಗಿ ಬರಲು ರಸ್ತೆಯ ಸಮಸ್ಯೆಯನ್ನು ಪರಿಹರಿಸಿ ಕೊಡಬೇಕೆಂದು ಜ್ಞಾನಪ್ರಕಾಶ್ ಮನವಿ ಮಾಡಿದರು. ಈ ಪತ್ರಿಕಾಗೋಷ್ಠಿಯಲ್ಲಿ ಡಾಕ್ಟರ್ ಎನ್ ಆನಂದ ಗೌಡ ಅರುಣ್ ಸುರೇಶ್ ಮೈತ್ರಿ ಸೇರಿದಂತೆ ಇತರರಿದ್ದರು.