ನವದೆಹಲಿ, ಡಿಸೆಂಬರ್ 14 ಕಾಂಗ್ರೆಸ್
ಮುಖಂಡ ,ಇಂದಿಗಾಂಧಿ ಅವರ ಪುತ್ರ ಸಂಜಯ್ ಗಾಂಧಿ ಅವರ
73 ನೇ ಜನ್ಮ ದಿನಾಚರಣೆಯಂದು ಪತ್ನಿ ಮೇನಕಾ ಗಾಂಧಿ
ಮತ್ತು ಪುತ್ರ ವರುಣ್ ಗಾಂಧಿ ಶನಿವಾರ ಗೌರವ ನಮನ ಸಲ್ಲಿಸಿದ್ದಾರೆ
ಈ ಕುರಿತು ಮೈಕ್ರೋ ಬ್ಲಾಗಿಂಗ್ ನಲ್ಲಿ ವರುಣ್,ನನ್ನ
ತಂದೆ ಸಂಜಯ್ ಗಾಂಧಿ ಹುಟ್ಟುಹಬ್ಬದ ಅಂಗವಾಗಿ ಗೌರವ ಸಲ್ಲಿಸುತ್ತಿರುವುದಾಗಿ ಬರೆದುಕೊಂಡಿದ್ದಾರೆ.
1946 ರ ಡಿಸೆಂಬರ್ 14 ರಂದು ಜನಿಸಿದ್ದ ಸಂಜಯ್ ಗಾಂಧಿ
ನಂತರ ಭೀಕರ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಘಟನೆಯ ಬಳಿಕ ರಾಜೀವ್ ಗಾಂಧಿ
ಅವರು ಒಲ್ಲದ ಮನಸ್ಸಿನಿಂದಲೇ ರಾಜಕೀಯ ಪ್ರವೇಶ
ಮಾಡಿ, ಮುಂದೆ ಪ್ರಧಾನಿ ಆಗಿದ್ದರು ಆದರೆ ಅವರು ಚುನಾವಣಾ
ಪ್ರಚಾರ ಸಮಯದಲ್ಲಿ ಎಲ್ ಟಿಟಿ ಇ ಮಾನವ ಬಾಂಬ್ ದುರಂತಕ್ಕೆ
ಬಲಿಯಾಗಿದ್ದರು.