ಮಚ್ಚೆ ಪ. ಪಂ ವ್ಯಾಪ್ತಿಯ ಲಕ್ಷ್ಮೀ ನಗರದಲ್ಲಿ ಕೊನೆಗೂ ಸ್ವಚ್ಛತಾ ಕಾರ್ಯ

 ಮಚ್ಚೆ ಪ. ಪಂ ವ್ಯಾಪ್ತಿಯ ಲಕ್ಷ್ಮೀ ನಗರದಲ್ಲಿ ಕೊನೆಗೂ ಸ್ವಚ್ಛತಾ ಕಾರ್ಯ  Sanitation work finally underway in Lakshmi Nagar, within the limits of the Macche Town Panchayat

ಲೋಕದರ್ಶನ ವರದಿಗೆ ಸಿಕ್ತು ಫಲ 

ಬೆಳಗಾವಿ 01: ಜನಪರ ಪತ್ರಿಕೋದ್ಯಮಕ್ಕೆ ಸಂದ ಜಯ ಎಂಬಂತೆ ಮಚ್ಚೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಲಕ್ಷ್ಮೀ ನಗರದ ನಿವಾಸಿಗಳ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿದೆ. ಕಸ ವಿಲೇವಾರಿ ಸಮರ​‍್ಕವಾಗಿ ಆಗದೆ, ಇಡೀ ಬಡಾವಣೆ ಕೊಳಚೆ ಪ್ರದೇಶವಾಗಿ ಮಾರ​‍್ಪಟಟಿರುವ ಕುರಿತು ಲೋಕದರ್ಶನ ಪತ್ರಿಕೆಯಲ್ಲಿ ಪ್ರಕಟವಾದ ವರದಿಗೆ ತಕ್ಷಣ ಸ್ಪಂದನೆ ದೊರೆತಿದೆ.  

ಲಕ್ಷ್ಮೀ ನಗರದಲ್ಲಿ ಕಳೆದ ಹಲವು ದಿನಗಳಿಂದ ಚರಂಡಿಗಳಲ್ಲಿ ಹೂಳು ಸಂಗ್ರಹವಾಗಿ ದುರ್ವಾಸನೆ ಬೀರುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿತ್ತು. ಈ ಸಮಸ್ಯೆಯನ್ನು ಲೋಕದರ್ಶನ ತಂಡವು ಸ್ಥಳಕ್ಕೆ ಭೇಟಿ ನೀಡಿ ವರದಿ ಪ್ರಕಟಿಸಿತ್ತು.  

ವರದಿಯ ಪರಿಣಾಮ: ಲೋಕದರ್ಶನ ಪತ್ರಿಕೆಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಮಚ್ಚೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.

ನಂತರ ತುರ್ತಾಗಿ ಸ್ವಚ್ಛತಾ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಕಾರ್ಯಾಚರಣೆ ಆರಂಭಿಸಿದರು. ಚರಂಡಿಗಳಲ್ಲಿ ಸಂಗ್ರಹವಾಗಿದ್ದ ಹೂಳು ಮತ್ತು ತ್ಯಾಜ್ಯವನ್ನು ತೆಗೆದು ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆ. ರಸ್ತೆಗಳು ಕೂಡ ಸ್ವಚ್ಛವಾಗಿ ಕಾಣಿಸುತ್ತಿದೆ ಮತ್ತು ಹಾಳಾಗಿರುವ ರಸ್ತೆಗಳನ್ನು ಸಧ್ಯದಲ್ಲೇ ಸರಿಪಡಿಸುತ್ತೇವೆ ಎಂದು ಅಧಿಕಾರಿಗಳು ಸ್ಥಳೀಯರಿಗೆ ತಿಳಿಸಿದ್ದಾರೆ.  

ನಿವಾಸಿಗಳ ಮೆಚ್ಚುಗೆ: ಅಧಿಕಾರಿಗಳ ಈ ತ್ವರಿತ ಕಾರ್ಯಕ್ಕೆ ಲಕ್ಷ್ಮೀ ನಗರದ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಮಸ್ಯೆಯನ್ನು ಬೆಳಕಿಗೆ ತಂದ ಲೋಕದರ್ಶನ ಪತ್ರಿಕೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇನ್ನು ಮುಂದೆ ನಿಯಮಿತವಾಗಿ ಕಸ ವಿಲೇವಾರಿ ಮಾಡುವಂತೆ ಪಂಚಾಯಿತಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.  ಒಟ್ಟಾರೆ, ಜನರ ಧ್ವನಿಯಾಗಿ ಕೆಲಸ ಮಾಡಿದ ಲೋಕದರ್ಶನ ವರದಿಗೆ ಸಿಕ್ಕ ಈ ಫಲ, ಜವಾಬ್ದಾರಿಯುತ ಪತ್ರಿಕೋದ್ಯಮಕ್ಕೆ ಸಾಕ್ಷಿಯಾಗಿದೆ.