ಮಹಿಳೆಯರ ಯೋಗಕ್ಷೇಮ ಮತ್ತು ಬದ್ಧತೆಗಾಗಿ ನೈರ್ಮಲ್ಯ ಪ್ಯಾಡ್ ವಿತರಣೆ
ಕೊಪ್ಪಳ 23: ಮಹಿಳೆಯರಿಗಾಗಿ ಮುಟ್ಟಿನ ನೈರ್ಮಲ್ಯ ಪ್ಯಾಡನ್ನು ಅವಶ್ಯಕವಾಗಿದೆ ಅವರ ಯೋಗ ಕ್ಷೇಮ ಮತ್ತು ಆದ್ಯತೆಗಾಗಿ ನಮ್ಮ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಸದಾ ಸೇವೆಗಾಗಿ ಬದ್ಧವಾಗಿದೆ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಜಿಲ್ಲಾ ಚೇರ್ಮನ್ ಸುಷ್ಮಾ ಪತಂಗೆ ಅಭಿಪ್ರಾಯ ಪಟ್ಟರು, ಅವರು ನಗರದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ವತಿಯಿಂದ ಏರಿ್ಡಸಿದ ಮಹಿಳೆಯರಿಗಾಗಿ ಮತ್ತು ಯುವತಿ ಯರಿಗಾಗಿ ನೈರ್ಮಲ್ಯ ಪ್ಯಾಡ್ ಉಚಿತವಾಗಿ ವಿತರಣೆ ಮಾಡಿ ಮಾತನಾಡಿದರು, ಪ್ಯಾಡ್ ಗಳಿಗೆ ಸುಲಭ ಪ್ರವೇಶವನ್ನು ಒದಗಿಸುವ ಮೂಲಕ ಪ್ರಯೋಜನವನ್ನು ನೀಡುವ ನೈರ್ಮಲ್ಯ ಕರ ವಸ್ತ್ರ ಮಾರಾಟ ಯಂತ್ರವನ್ನು ದೇಣಿಗೆ ನೀಡುವುದಾಗಿ ಘೋಷಿಸಿದರು, ಈ ಚಿಂತನಶೀಲ ಕೊಡುಗೆ ಯುವತಿಯರಿಗೆ ಅನುಕೂಲ ನೀಡುತ್ತದೆ ಅವರಲ್ಲಿ ಜಾಗೃತಿ ಉತ್ತೇಜಿಸುತ್ತದೆ ಮತ್ತು ಆರೋಗ್ಯಕರ ವಾತಾವರಣವನ್ನು ಬೆಂಬಲಿಸುವಂತಾಗುತ್ತದೆ ಅದರ ಬದ್ಧತೆಗಾಗಿ ಮತ್ತು ಮಹಿಳೆಯರ ಯೋಗ ಕ್ಷೇಮಕ್ಕಾಗಿ ನಮ್ಮ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಸದಾ ಬ ದ್ದವಾಗಿದೆ ಎಂದು ಕೊಪ್ಪಳ ಜಿಲ್ಲಾ ಚೇರ್ಮನ್ ಸುಷ್ಮಾ ಪತಂಗೆ ಹೇಳಿದರು. ಈ ಸಂದರ್ಭದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ, ಕಾರ್ಯದರ್ಶಿ ಮೀನಾಕ್ಷಿ ಬಣ್ಣದ ಬಾವಿ ಉಪಾಧ್ಯಕ್ಷರಾದ ಮಧು ಶೆಟ್ಟರ್, ಖಜಾಂಚಿ ಆಶಾ ಕವಲೂರು , ಐಎಸ್‌ಒಮಧು ನಿಲೋಗಲ್ ,ಸಂಪಾದಕಿ ನಾಗವೇಣಿ ಕಾರ್ಯಕಾರಣಿ ಸಮಿತಿ ಸದಸ್ಯರಾದ ಡಾ,ರಾಧಾ ಕುಲಕರ್ಣಿ ಸುಜಾತಾ ಪಟ್ಟಣಶೆಟ್ಟಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.