ಕೊರೊನಾ ಜಾಗೃತಿಗೆ ಸ್ಯಾಂಡಲ್ ವುಡ್ ಸಾಥ್
ಬೆಂಗಳೂರು, ಮೇ 23, ಸ್ಯಾಂಡಲ್ವುಡ್ ನ ಹಲವು ತಾರೆಯರು ಈಗಾಗಲೇ ಮಾಹಾಮಾರಿ ಕೊರೊನಾ ವಿರುದ್ಧದ ಹೋರಾಟಕ್ಕೆ ಸಾಥ್ ನೀಡಿದ್ದು, ಇದೀಗ ಹಾಡೊಂದರ ಮೂಲಕ ಜಾಗೃತಿ ಮೂಡಿಸಲು ಸಜ್ಜಾಗಿದ್ದಾರೆ.ವೈದ್ಯಕೀಯ ಶಿಕ್ಷಣ ಇಲಾಖೆ ಈ ವಿಡಿಯೋವನ್ನು ನಿರ್ಮಿಸಿದ್ದು, ಸ್ಯಾಂಡಲ್ ವುಡ್ ನಿರ್ದೇಶಕ ಪವನ್ ಒಡೆಯರು ನಿರ್ದೇಶನ ಮಾಡಿದ್ದು, ಹಾಡಿಗೆ ಪ್ರದ್ಯಮ್ನ ಸಾಹಿತ್ಯ ಬರೆದಿದ್ದಾರೆ. ವಿ ಹರಿಕೃಷ್ಣ ಅವರು ಸಂಗೀತ ಸಂಯೋಜನೆ ಮಾಡಿದ್ದು, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಿದ್ದಾರೆ.
‘ಬದಲಾಗು ನೀನು… ಬದಲಾಯಿಸು ನೀನು' ಎಂಬ ಹಾಡಿನ ಮೂಲಕ ಕೋವಿಡ್-19 ವಿರುದ್ಧ ಎಚ್ಚರಿಕೆ ಸಂದೇಶ ನೀಡಲು ಕಲಾವಿದರು ಮುಂದಾಗಿದ್ದಾರೆ.ಮೇ. 25 ರಂದು ಸಂಜೆ 5 ಗಂಟೆಗೆ ಈ ಹಾಡು ಯೂಟ್ಯೂಬ್ನಲ್ಲಿ ಡಿಬೀಟ್ಸ್ ಚಾನಲ್ನಲ್ಲಿ ಈ ವಿಡಿಯೋ ಬಿಡುಗಡೆಗೊಳ್ಳಲಿದೆ.ಎಂಟು ನಿಮಿಷಗಳ ಈ ಹಾಡಿನಲ್ಲಿ ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಸೇರಿ ನಟರಾದ ಉಪೇಂದ್ರ, ದರ್ಶನ್, ರವಿಚಂದ್ರನ್, ಗಣೇಶ್, ರಕ್ಷಿತ್ ಶೆಟ್ಟಿ, ರವಿಶಂಕರ್, ರಮೇಶ್ ಅರವಿಂದ್, ವಿಜಯ್ ಪ್ರಕಾಶ್,ರಾಕ್‌ಲೈನ್ ವೆಂಕಟೇಶ್, ಕ್ರಿಕೆಟಿಗ ಅನಿಲ್ ಕುಂಬ್ಳೆ ಹಾಗೂ ನಟಿಯರಾದ ಸುಮಲತಾ ಅಂಬರೀಶ್, ಶಾನ್ವಿ ಶ್ರೀವಾತ್ಸವ್, ಹರ್ಷಿಕಾ ಪೂಣಾಚ್ಛ, ಆಸಿಕಾ ರಂಗನಾಥ್, ಮುಂತಾದವರು ಅಭಿನಯಿಸಿದ್ದಾರೆ.
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ 