ಇಂದಿನಿಂದ ಕೊಡ್ಲಿ ದಗರ್ಾದಲ್ಲಿ ಸಂದಲ್,ಉರುಸ್

ಲೋಕದರ್ಶನ ವರದಿ

ದಾಂಡೇಲಿ 16: ನಗರದ ಹಜರತ್ ಸೈಯದ್ ಮಿರ್ ಮಹಮ್ಮಹ ಷಾ ಕಾದ್ರಿ ಷರೀಫ್ ಸಂಸ್ಥೆಯ ಸಂದಲ್ ಹಾಗೂ ಉರುಸ್ ಕಾರ್ಯಕ್ರಮ ಇಂದು ಹಾಗೂ ನಾಳೆ ಕೊಡ್ಲಿ ಗ್ರಾಮದಲ್ಲಿ ಭಕ್ತಿ ಪೂರ್ವಕವಾಗಿ ನಡೆಯಲಿದೆ. ಬುಧವಾರ ರಾತ್ರಿ 8 ಗಂಟೆಗೆ ಸಂದಲ್ ಕಾರ್ಯಕ್ರಮದ ಜೊತೆಯಲ್ಲಿ ಅನ್ನ ಪ್ರಸಾದ ವಿತರಣೆ ಕಾರ್ಯಕ್ರಮ ಇರುತ್ತದೆ ಎಂದು ಮಂಗಳವಾರ ಸಂತೋಷ ಹೋಟೆಲ್ ಸಬಾಭವನದಲ್ಲಿ ನಡೆದ ಪತ್ರಿಕಾಗೊಷ್ಟಿಯಲ್ಲಿ ಸಂಸ್ಥೆಯ ಅಧ್ಯಕ್ಷ ಇಸ್ತಿಯಾಕ ಮಿಸ್ರಿಕೊಟಿ ಹೇಳಿದರು. ದಿ. 18 ರಂದು ಗುರುವಾರ ಮಧ್ಯಾಹ್ನ 11:00 ಗಂಟೆಗೆ ಉರುಸ್ ಕಾರ್ಯಕ್ರಮ ಜರುಗಲಿದೆ ಹಾಗೆಯೇ ಭಕ್ತಾದಿಗಳಿಗೆ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಖಚರ್ಿನ ಒಟ್ಟು ಮೊತ್ತದಲ್ಲಿ 75% ಪ್ರತಿಷತ ಹಣವನ್ನು ಸಂಸ್ಥೆಯ ಪದಾಧಿಕಾರಿಗಳೆ ಭರಿಸುತ್ತಾರೆ ಉಳಿದ ಹಣವನ್ನು ದಾನಿಗಳಿಂದ ವಿವಿಧ ರೂಪದಲ್ಲಿ ಪಡೆಯಲಾಗುತ್ತದೆ ಎಂದ ಅವರು ಉರುಸ್ ಹಾಗೂ ಸಂದಲ್ ಕಾರ್ಯಕ್ರಮದಲ್ಲಿ ಸಕಲ ಧಮರ್ಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.

ಅನಂತರ ಮಾತನಾಡಿದ ಮೊಜಿದೆ ಆಜಮ್ ಮೀಶನ್ ಸಂಸ್ಥೆಯ ಅಧ್ಯಕ್ಷ ಬಾಬಾ ಮುಲ್ಲಾ 20 ವರ್ಷದಿಂದ ಕೊಡ್ಲಿಯ ದಗರ್ಾವು ಉರುಸ್ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದೆ. ಈ ಕಾರ್ಯಕ್ರಮದಲ್ಲಿ ಸಮಾಜದ ಎಲ್ಲಾ ಭಕ್ತಾದಿಗಳು ಭಾಗವಹಿಸುತ್ತಾರೆ 5000 ಕ್ಕೂ ಹೆಚ್ಚು ಭಕ್ತರು ದೇವರ ಆಶಿವರ್ಾದ ಪಡೆಯುತ್ತಾರೆ ಎಂದರು. ಪತ್ರಿಕಾಗೊಷ್ಟಿಯಲ್ಲಿ ಸಂಸ್ಥೆಯ ಕಾಯರ್ಾದಕ್ಷರ ಮಜೀದ್ ಸನದಿ ಉಪಾಧ್ಯಕ್ಷ, ಇಸ್ಮಾಯಿಲ್ ಖಾನ್ ಮುಗುದ, ಕಾರ್ಯದಶರ್ಿ ರಫೀಕ್ ಹುದ್ದಾರ, ಸೈಯದ್ ಉಸ್ಮನ್, ಅಬ್ದುಲ್ ವಹಾಬ್ ಬಾಂಸರಿ ಮೊದಲಾದವರು ಉಪಸ್ಥಿತರಿದ್ದರು.