ಸನಾತನ ಪರಂಪರೆ ಧರ್ಮಜಾಗೃತಿಯಲ್ಲಿ ಅಗ್ರಗಣ್ಯರಾಗಿದ್ದರು: ಶ್ರವಣಬೆಳಗೊಳ ಸ್ವಾಮೀಜಿ

 ಹಾಸನ, ಡಿ 29      ಪೇಜಾವರ ಶ್ರೀಗಳು ಸನಾತನ ಪರಂಪರೆ ಧರ್ಮಜಾಗೃತಿಯಲ್ಲಿ ಅಗ್ರಗಣ್ಯರಾಗಿದ್ದರು ಎಂದು ಶ್ರವಣಬೆಳಗೊಳ ಶ್ರೀ ಕ್ಷೇತ್ರದ ಸ್ವಸ್ತಿಶ್ರೀ ಚಾರುಕೀತರ್ಿ ಭಟ್ಟಾರಕ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.     ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೇಜಾವರ ಶ್ರೀಗಳು ಇಂದು ವಿಧಿವಶರಾಗಿರುವುದು ದುಃಖದ ವಿಷಯ. ನಮಗೂ ಕೂಡ ತುಂಬಾ ನೋವಾಗಿದೆ.ಕ್ಷೇತ್ರ ಮತ್ತು ಸಮಾಜದ ಪ್ರಗತಿಗೆ ಸದಾ ಶ್ರಮಿಸುತ್ತಿದ್ದರು ಎಂದು ಅವರು ಸ್ಮರಿಸಿಕೊಂಡರು.    ಅವರ ರಾಷ್ಟ್ರಸೇವೆ, ಸಮಾಜಸೇವೆ ಗಣನೀಯವಾಗಿದ್ದು, ರಾಷ್ಟ್ರೀಯ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಪರಿಹಾರ ಕಾರ್ಯಕ್ಕೆ ಕಾರ್ಯ ತತ್ಪರರಾಗಿದ್ದರು ಎಂದರು.    ಶ್ರೀಗಳು ಎಲ್ಲಾ ಮಠಾಧೀಶರಿಗೆ ಆದರ್ಶಪ್ರಾಯರಾಗಿದ್ದರು. ಕೃಷ್ಣಮಠದಲ್ಲಿ ಐದು ಪಯರ್ಾಯಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ ಎಂದರು.     ಪೂಜ್ಯರ ಸಾಧನೆ ಸ್ವಣರ್ಾಕ್ಷರಗಳಲ್ಲಿ ಬರೆಯುವಷ್ಟು ಮಹತ್ವ ಪಡೆದಿದೆ ಎಂದ ಅವರು, ಶ್ರೀಗಳ ಸರಳತೆ, ಕ್ಷೇತ್ರನಿಷ್ಠೆ ಸರ್ವರಿಗೂ ಆದರ್ಶವಾಗಿದೆ ಎಂದರು.    ಶ್ರೀಕೃಷ್ಣನ ಭಕ್ತರಾಗಿದ್ದ ಅವರ ಸಾಧನೆ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ. ಧರ್ಮಜಾಗೃತಿ ಕಾರ್ಯಕ್ರಮದಲ್ಲಿ ಅವರು ಸದಾ ಮುಂಚೂಣಿಯಲ್ಲಿರುತ್ತಿದ್ದರು. ಅವರನ್ನು ನಾವು ಎಂದೂ ಮರೆಯುವಂತಿಲ್ಲ ಅಭಿಪ್ರಾಯ ಪಟ್ಡರು.    ಶ್ರೀಗಳ ಮಹತ್ ಕಾರ್ಯ ಈ ದೇಶದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಅವರ ಆತ್ಮಕ್ಕೆ ಸದಾ ಶಾಂತಿ ದೊರೆಯಲಿ.     ಅವರು ನಿಜವಾಗಿಯೂ ಇತಿಹಾಸ ಪುರುಷರು ಎಂದು ಶ್ಲಾಘಿಸಿದರು.