ಸನಾತನ ಧರ್ಮ ಸಾವಿಲ್ಲದ್ದು: ಹಾರಿಕಾ ಮಂಜುನಾಥ
Sanatan Dharma is immortal: Harika Manjunath
ಸನಾತನ ಧರ್ಮ ಸಾವಿಲ್ಲದ್ದು: ಹಾರಿಕಾ ಮಂಜುನಾಥ
ಲೋಕದರ್ಶನ ವರದಿ
ಇಂಡಿ 15: ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಪೋಷಕರ ಆದ್ಯತೆಯಾಗಿದ್ದು, ಮಗುವಿನ ಬೆಳವಣಿಗೆಯಲ್ಲಿ ತಾಯಿ ಪಾತ್ರ ಮುಖ್ಯವಾಗಿದೆ. ಮನೆಯೇ ಮೊದಲ ಪಾಠಶಾಲೆಯಾಗಿರಬೇಕು. ಚಿಕ್ಕಂದಿನಿಂದಲೇ ಉತ್ತಮ ನಡತೆ, ಮೌಲ್ಯಗಳು, ಪ್ರಾಮಾಣಿಕತೆ, ಸ್ನೇಹ, ಹಾಗೂ ಸಾಮರಸ್ಯವನ್ನು ಕಲಿಸಬೇಕು, ಏಕೆಂದರೆ ಬಾಲ್ಯದಲ್ಲಿ ಕಲಿತ ಸಂಸ್ಕಾರಗಳು ಜೀವನಪರ್ಯಂತ ಉಳಿಯುತ್ತವೆ. ಪೋಷಕರು ತಮ್ಮ ನಡವಳಿಕೆಯ ಮೂಲಕ ಒಳ್ಳೆಯದನ್ನು ಕಲಿಸಬೇಕು ಮತ್ತು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಬೇಕು ಎಂದು ಬಾಲವಾಗ್ಮಿ ಹಾರಿಕಾ ಮಂಜುನಾಥ ಅವರು ಹೇಳಿದರು.
ಅವರು ಇಂಡಿ ತಾಲೂಕಿನ ಸುಕ್ಷೇತ್ರ ತಡವಲಗಾ (ಜೋಡಗುಡಿ) ಗ್ರಾಮದ ಮರುಳಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಮಹಿಳಿಯರಿಗೆ ಉಂಡಿ ತುಂಬುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು ಭಾರತ ಭವ್ಯ ಪರಂಪರೆ ಬಿಂಬಿಸುವ ರಾಷ್ಟ್ರವಾಗಿದೆ ಭಾರತದಲ್ಲಿ ಮಹಿಳೆಯರ ಸಂಸ್ಕೃತಿಯು ವೈವಿಧ್ಯಮಯ ಮತ್ತು ಸಂಕೀರ್ಣವಾಗಿದ್ದು, ಆಧುನಿಕತೆ ಮತ್ತು ಸಾಂಪ್ರದಾಯಿಕತೆಯ ಸಂಯೋಜನೆಯಾಗಿದೆ. ಭಾರತೀಯ ಮಹಿಳೆಯರು ಗೃಹ ಕಾರ್ಯಗಳಿಂದ ಹಿಡಿದು ವೃತ್ತಿಪರ ಕ್ಷೇತ್ರದಲ್ಲಿಯೂ ಪ್ರಮುಖ ಪಾತ್ರವಹಿಸುತ್ತಾರೆ. ಸಾಂಸ್ಕೃತಿಕವಾಗಿ, ಅವರು ಸಾಂಪ್ರದಾಯಿಕ ಉಡುಗೆ, ಆಭರಣಗಳನ್ನು ಧರಿಸುತ್ತಾರೆ ಮತ್ತು ಶಾಸ್ತ್ರೀಯ ನೃತ್ಯಗಳಂತಹ ಕಲೆಗಳನ್ನು ಅಭ್ಯಾಸ ಮಾಡುತ್ತಾರೆ. ಆದಾಗ್ಯೂ, ಪಿತೃಪ್ರಭುತ್ವದ ಸಂಸ್ಕೃತಿಯ ಕಾರಣದಿಂದಾಗಿ ಅವರು ಇನ್ನೂ ಲಿಂಗ ತಾರತಮ್ಯ, ಶೈಕ್ಷಣಿಕ ಮತ್ತು ಭೂಮಿ ಹಕ್ಕುಗಳ ಸವಾಲುಗಳನ್ನು ಎದುರಿಸುತ್ತಿದ್ದಾರೆ.
ಭಾರತದ ವೀರ ಮಹಿಳೆಯರ ಪಟ್ಟಿಯಲ್ಲಿ ಅಕ್ಕಮಹಾದೇವಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಓಬವ್ವ, ಹಂತವರ ಚೆರಿತ್ರೆಯನ್ನು ಮಕ್ಕಳಿಗೆ ಹೇಳಬೇಕು ಅವಾಗ ಹಿಂದೂ ಧರ್ಮದ ಬಗ್ಗೆ ನಮ್ಮ ಸನಾತನ ಧರ್ಮದ ಉಳಿವಿಗಾಗಿ ಹಿಂದೂಗಳಾಗಿ ನಾವು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.
ಖೇಡಗಿ ಶಿವಬಸವರಾಜೇಂದ್ರ ಮಹಾಸ್ವಾಮಿಗಳು ನಾದ ಗ್ರಾಮದ ಶಿವಾನಂದ ಶಿವಾಚಾರ್ಯರು ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯರು ವಿಎಸ್‌ಎಸ್ ಸಂಘದ ಅಧ್ಯಕ್ಷರು ಹಾಗೂ ಅನೇಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 