ಲೋಕದರ್ಶನ ವರದಿ
ರಾಯಬಾಗ 14: ತಾಲೂಕಿನ ಎಲ್ಲ ಪ್ರೌಢಶಾಲೆಗಳು ಈ ಬಾರಿ ಶೇ.100 ಫಲಿತಾಂಶ ಪಡೆಯಲು ವಿದ್ಯಾಥರ್ಿಗಳನ್ನು ಸಜ್ಜುಗೊಳಿಸಬೇಕೆಂದು ಪ್ರಭಾರಿ ಬಿಇಒ ಎಚ್.ಎ.ಭಜಂತ್ರಿ ತಿಳಿಸಿದರು.
ಇತ್ತಿಚೆಗೆ ಪಟ್ಟಣದ ಆರ್.ವಿ.ಆರ್. ಶಾಲೆಯಲ್ಲಿ ರಾ.ವಿ.ಸಂಯುಕ್ತ ಪದವಿ ಪೂರ್ವಮಹಾವಿದ್ಯಾಲಯ (ಪ್ರೌಢಶಾಲೆ ವಿಭಾಗ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 2019-20 ನೇ ಸಾಲಿನ ಎಸ್ಎಸ್ಎಲ್ಸಿ ಹಿಂದಿ ವಿಷಯದ ಮಾದರಿ ಪ್ರಶ್ನೆ ಪತ್ರಿಕೆ ತಯಾರಿಕೆ ಕಾಯರ್ಾಗಾರ ಉದ್ಘಾಟಸಿ ಮಾತನಾಡಿದ ಅವರು, ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಸಂಪೂರ್ಣವಾಗಿ ಪಾರದರ್ಶಕ ಮತ್ತು ನಕಲು ಮುಕ್ತವಾಗಿ ನಡೆಸಲಾಗುವುದು ಎಂದರು.
ಎಸ್.ಎಸ್.ಹಚಡದ, ವಿ.ಎಸ್.ಕಾಂಬಳೆ, ಕೆ.ರಾಮನಗೌಡ, ಜಿ.ಬಿ.ಕಲ್ಲೋಳ ಸೇರಿದಂತೆ ತಾಲೂಕಿನ ಸರಕಾರಿ ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢಶಾಲೆಗಳ ಶಿಕ್ಷಕರು ಭಾಗವಿಸಿದ್ದರು. ಶಿಕ್ಷಕ ಪಿ.ಎಸ್.ಅಲಗೂರ ಸ್ವಾಗತಿಸಿದರು, ಡಿ.ಎನ್.ನದಾಫ ನಿರೂಪಿಸಿ, ವಂದಿಸಿದರು.