ಸಮೀರವಾಡಿ ಸಕ್ಕರೆ ಕಾರ್ಖಾನೆಯ ಹೆಲ್ಪ್- ಎ- ಚೈಲ್ಡ್ ಸ್ಕಾಲರ್ಶಿಪ್ ಕಾರ್ಯಕ್ರಮ
Samirwadi Sugar Factory's Help-A-Child Scholarship Program
ಮಹಾಲಿಂಗಪುರ 24: ದೀಪದಿಂದ ದೀಪ ಹೇಗೆ ಮನ, ಮನೆಗಳನ್ನು ಬೆಳುಗುತ್ತದೆಯೋ ಹಾಗೆ, ಕಷ್ಟಕಾಲದಲ್ಲಿರುವವರಿಗೆ ನಿರಂತರ ಸುಮಾರು 24 ವರ್ಷಗಳಿಂದ ಸೋಮಯ್ಯ ಗ್ರೂಪ್ಸ್ ಆರ್ಥಿಕ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಲ್ಪ್ ಎ ಚೈಲ್ಡ್ ಮೂಲಕ ಶಿಷ್ಯವೇತನ ನೀಡಿ ಅವರ ನೂತನ ಬದುಕಿಗೆ ಆಶ್ರಯ ನೀಡಿದೆ ಎಂದರೆ ತಪ್ಪಾಗಲಾರದು ಎಂದು ಕಾರ್ಮಿಕ ವಿಭಾಗದ ದಿನೇಶ್ ಶರ್ಮಾ ಹೇಳಿದರು.
ಗುರುವಾರ ಸೈದಾಪುರ್ ಸಮೀರವಾಡಿ ಸಕ್ಕರೆ ಕಾರ್ಖಾನೆಯ ಶಿವಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಹೆಲ್ಪ್- ಎ- ಸ್ಕಾಲರ್ಶಿಪ್ ಅವಾರ್ಡ್ 2025 ನೇ ಸಾಲಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹಿಮಾತನಾಡಿದ ಅವರು, ಸಂಸ್ಥೆಯ ಸಮೀರ್ ಬಾಯ್ ಸೋಮಯ್ಯಾಜಿ 2001 ರಲ್ಲಿ ಕೃಷಿ ಪ್ರದೇಶಕ್ಕೆ ಭೇಟಿ ನೀಡಿದಾಗ, ಓರ್ವ ಬಡ ವಿದ್ಯಾರ್ಥಿನಿಯ ಮುಂದಿನ ವ್ಯಾಸಂಗಕ್ಕೆ ಪಡುತ್ತಿರುವ ಕಷ್ಟದ ಅಳಲನ್ನು ಗಮನಿಸಿ ಮತ್ತು ಅವಳ ಸಲಹೆ ಸೂಚನೆಯನ್ನು ಆಲಿಸಿ, ನಮ್ಮ ಸಂಸ್ಥೆಯಿಂದ ಸಮಾಜಕ್ಕೆ ಒಳಿತಾಗುತ್ತದೆ ಮತ್ತು ಬಡ ಮಕ್ಕಳ ಬದುಕು ಉಜ್ವಲವಾಗುತ್ತದೆ ಎಂದರಿತರು.
ಪ್ರಾಸ್ತಾವಿಕವಾಗಿ ಕಾರ್ಮಿಕ ವಿಭಾಗದ ಡಾ.ವಿಜಯಕುಮಾರ ಕಣವಿ ಮಾತನಾಡಿ,ಅಂದು ಸಂಸ್ಥೆಯಿಂದ ಕೇವಲ ಇಬ್ಬರು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ ವಿತರಣೆಯಾಗಿ ಅಂದಿನಿಂದ ಇಂದಿನ ವರೆಗೆ ಪ್ರಸಕ್ತ 854 ಸೇರಿ 11.554 ವಿದ್ಯಾರ್ಥಿಗಳಿಗೆ ಅಂದಾಜು ಲ್ಯಾಪ್ ಟಾಪ್, ಬುಕ್ಸ್ ಮತ್ತು ಇನ್ನಿತರ ಕಲಿಕಾ ಸಾಮಗ್ರಿಗಳು ಶಿಷ್ಯ ವೇತನ ರೂಪದಲ್ಲಿ 9 ಕೋಟಿಯಷ್ಟು ನಗದು ಸೋಮಯ್ಯ ಸಂಸ್ಥೆಯಿಂದ ವ್ಯಯವಾಗಿದೆ.ಇಲ್ಲಿ ಅಷ್ಟೇ ಅಲ್ಲ ಸಾಕರವಾಡಿ,ಮುಂಬೈ ಮತ್ತು ಮಧ್ಯೆ ಪ್ರದೇಶ (ಭೂಪಾಲ್) ಗಳಲ್ಲಿಯೂ ಸ್ಕಾಲರ್ಶಿಪ್ ವಿತರಣೆಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸ್ಕಾಲರ್ಶಿಪ್ ಪಡೆದ ಸೌಂದರ್ಯ ಹುನಶ್ಯಾಳ, ಭಾಗಿರಥಿ, ಪ್ರಿಯಾ ಪ್ರಸಾದ ಮತ್ತು ಚೇತನ್ ಕಪ್ಪಲಗುದ್ದಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ನಮ್ಮ ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕುಗೊಳ್ಳುವ ಆತಂಕ ಎದುರಾಗಿತ್ತು.ಈ ಸಂದರ್ಭದಲ್ಲಿ ಕಾಮಧೇನು ಕಲ್ಪವೃಕ್ಷದಂತೆ ಸೋಮಯ್ಯ ಗ್ರಾಮೀಣ ವಿಕಾಸ ಮತ್ತು ಸೋಮಯ್ಯ ವಿದ್ಯಾ ವಿಹಾರ ನಮ್ಮ ಸಹಾಯಕ್ಕೆ ಓಡಿ ಬಂತು.ಇವತ್ತೆನಾದರೂ ಹೆಚ್ಚಿನ ವ್ಯಾಸಂಗ ಮಾಡಿ ನಮ್ಮ ಪರಿವಾರಕ್ಕೆ ಆಶ್ರಯ ಒದಗಿಸಲು ಕಾರ್ಯ ಪ್ರವರ್ತರಾಗಿದ್ದೇವೆ ಎಂದರೆ ಈ ಸಂಸ್ಥೆಯ ಉಪಕಾರ ನಮ್ಮ ಮೇಲೆ ಬೆಟ್ಟದಷ್ಟಿದೆ, ನಾವೆಲ್ಲರೂ ಸೋಮಯ್ಯಾಜೀ ಸಂಸ್ಥೆಗೆ ಚಿರ ಋಣಿಯಾಗಿದ್ದೇವೆ ಎಂದರು.
ಈ ಸಂಸ್ಥೆಯಿಂದ ಸ್ಕಾಲರ್ಶಿಪ್ ಪಡೆದ ಶೋಭಾ ಗಿರಮಲ್ಲನ್ನವರ ಪದವಿಯಲ್ಲಿ ಕನ್ನಡ ವಿಷಯದಲ್ಲಿ 94.84ಅ ಪಡೆದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಬಂಗಾರ ಪದಕ ಪಡೆದಿರುವುದರಿಂದ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಬ್ಬು ವಿಭಾಗದ ವಿ. ಎಸ್. ಕೊಣ್ಣೂರ ಮಾತನಾಡಿದರು. ವ್ಯವಸ್ಥಾಪಕ ಸಿಬ್ಬಂದಿ ರಾಮಚಂದ್ರ ಸೋನಾವಾಲ್ಕರ್, ಸೋಮಶೇಖರ್ ಪೇಟಿಮನಿ, ರಮೇಶ ಶೆಟ್ಟರ್, ಕೃಷ್ಣಗೌಡರ, ಸಂಜು ಬ್ಯಾಳಿ, ರವೀಂದ್ರ ಬಾಗೋಜಿ, ರವಿ ಕುರಬರ, ಶ್ವೇತಾ ಜಾಧವ್, ರೇಖಾ ಮಠಪತಿ ಮತ್ತು ಹಿರೇಮಠ ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 