ಸಮರ್ಥ ರಾಮದಾಸರು ಸರ್ವಶ್ರೇಷ್ಠ ಸದ್ಗುರು : ಸಹಜಾನಂದ ಸ್ವಾಮೀಜಿ
Samartha Ramdas is the greatest Sadhguru: Sahajananda Swamiji
ಲೋಕದರ್ಶನ ವರದಿ
ಮಹಾಲಿಂಗಪುರ 24: ಭಾರತೀಯ ಹಿಂದೂ ಸಂತ, ತತ್ವಜ್ಞಾನಿ, ಕವಿ, ಅತಿಂದ್ರೀಯ ಮತ್ತು ಆಧ್ಯಾತ್ಮಿಕ ಅವರು ಹಿಂದೂ ದೇವತೆಗಳಾದ ರಾಮ ಮತ್ತು ಹನುಮಂತನ ಪರಮ ಭಕ್ತರಗಿದ್ದರು. ಎಂದು ಸ್ಥಳೀಯ ಬ್ರಹ್ಮ ವಿದ್ಯಾಶ್ರಮದ ಸಹಜ ಯೋಗಿ ಸಹಜಾನಂದ ಮಹಾಸ್ವಾಮಿಗಳು ಹೇಳಿದರು. ಅವರು ಸಿದ್ದಾರೂಢ ಆಶ್ರಮದಲ್ಲಿ ನಡೆದ ಸಿದ್ದಾರೂಢರ 267 ನೇ ಸತ್ಸಂಗ ಹಾಗೂ 190 ನೇ ಸಿದ್ದಾರೂಢರ ಜಯಂತೋತ್ಸವದ ನಿಮಿತ್ಯ ಇಂದಿನಿಂದ 7 ದಿನಗಳ ಪೂಜ್ಯರಿಂದ ಪ್ರವಚನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಏಕದೇವತಾ ಉಪಾಸನೆಗಳನ್ನೂ ಭಕ್ತಿಮಾರ್ಗದ ಮೂಲಕ ಪರಮಾತ್ಮನ ಕಡೆಗೆ ಚಿತ್ತವನ್ನು ಹರಿಸಲು ಅವಶ್ಯವಾದ ಪದ್ಧತಿಯನ್ನೂ ನಿರೂಪಿಸಿದ. ಇದನ್ನು ರಾಮದಾಸೀ ಸಂಪ್ರದಾಯ, ಶ್ರೀ ಸಂಪ್ರದಾಯ, ಸಮರ್ಥಸಂಪ್ರದಾಯ, ದಾಸ ಸಂಪ್ರದಾಯ, ಮಹಾರಾಷ್ಟ್ರಧರ್ಮ ಮತ್ತು ರಾಘವನ ಧರ್ಮ ಮುಂತಾದ ಹಲವು ಹೆಸರುಗಳಿಂದ ಗುರುತಿಸಲಾಗುತ್ತದೆ ಎಂದರು.
ಮಲ್ಲಪ್ಪ ಕಟಗಿ ಬಸವರಾಜ್ ಶಾಸ್ತ್ರೀಗಳು ಮಾರುತಿ ಶರಣರು ಮಾತನಾಡಿದರು ಯೋಗಗುರು ಸದಾಶಿವ ಗುರೂಜಿ, ಮಹೇಶ ಇಟಕನ್ನವರ ,ವೇದಿಕೆ ಮೇಲೆ ಉಪಸ್ಥಿತರಿದ್ದರು ತುಲಾಭಾರ : ಸಿದ್ದಾರೂಢರ ಮೂರ್ತಿಗೆ ಭಕ್ತರು ಬರೆದ ಓಂ ನಮಃ ಶಿವಾಯ ಮಂತ್ರ ಗ್ರಂಥಗಳಿಂದ ತುಲಾ ಭಾರ ಸೇವೆ ಮಾಡಿ ಕ್ರತಾರ್ಥರಾದರು. ಮುಖಂಡರಾದ ಕಲ್ಲಪ್ಪ ಚಿಂಚಲಿ, ಯಲ್ಲನಗೌಡ ಪಾಟೀಲ್ ಮೆಹಬೂಬ ಸನದಿ, ಬಸವರಾಜ ಮೇಟಿ, ಶ್ರೀಶೈಲಪ್ಪ ಉಳ್ಳೆಗಡ್ಡಿ, ವೀರೇಶ ಆಸಂಗಿ, ಉದ್ದಪ್ಪ ನಿಲಾರಿ, ಮಲ್ಲಪ್ಪ ಮುದಕಪ್ಪಗೋಳ, ಶಂಕರ ನಾಗರಾಳ, ಕುಮಾರ ವಾಲಿ, ಮಹಾಂತೇಶ್ ಘಟ್ನಟ್ಟಿ ಮಹಾಲಿಂಗ ಕರೆಹೊನ್ನ,ಹಣಮಂತ ಮೇರಾಪಟ್ಟಿ, ಶಿವಾನಂದ ಮರೆಗುದ್ದಿ, ಮಹದೇವ್ ಮರೆಗುದ್ದಿ. ಶಂಕರ ನಿಲಾರಿ, ಚನ್ನಪ್ಪ ಗೂಗಾಡ,ಭೀಮಪ್ಪ ಗಜಾಗೋಳ,ಮಹದೇವ್ ದಡುತಿ ಅರ್ಜುನ್ ಆನೆಪ್ಪಗೋಳ,ಶ್ರೀಮತಿ ಜಯಶ್ರೀ ಸೊರಗಾವಿ 43 ನೇ ಅಧ್ಯಾಯ ಪಠಣ ಮಾಡಿದರು. ಮಹೇಶ ಇಟಕನ್ನವರ ಪ್ರಸಾದ ವ್ಯವಸ್ಥೆ ಮಾಡಿದರು ಕಾರ್ಯಕ್ರಮವನ್ನು ಹುಮಾಯಿನ್ ಸುತಾರ ನಿರೂಪಿಸಿದರು. ಎಸ್ ಕೆ ಗಿಂಡೆ ಗುರುಗಳು ಸ್ವಾಗತಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 