ನವದೆಹಲಿ, ಫೆ 6, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರಮೋದಿ, ‘ಮೋದಿಗೆ ಹೊಡೆಯಿರಿ’ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ‘ಟ್ಯೂಬ್ ಲೈಟ್’ ಎಂದು ಜರಿದಿದ್ದಾರೆ. ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತ ಚರ್ಚೆಗೆ ಉತ್ತರಿಸಿದ ಪ್ರಧಾನಿ ಮೋದಿ,’ ನಾನು 30 ರಿಂದ 40 ನಿಮಿಷಗಳಿಂದ ಮಾತನಾಡುತ್ತಿದ್ದೇನೆ. ಆದರೆ ಕರೆಂಟ್ ತಲುಪುವುದಕ್ಕೆ ಬಹಳ ಸಮಯ ತೆಗೆದುಕೊಂಡಿದೆ. ಕೆಲ ಟ್ಯೂಬ್‌ಲೈಟ್‌ಗಳು ಸಮಯ ತೆಗೆದುಕೊಳ್ಳುತ್ತವೆ .’ ಎಂದು ಹೇಳಿದ್ದಾರೆ. ‘ಆರು ತಿಂಗಳಲ್ಲಿ ಮೋದಿಯನ್ನು ಕೋಲಿನಿಂದ ಹೊಡೆಯುತ್ತೇನೆ ಎಂದು ಕಾಂಗ್ರೆಸ್ ನಾಯಕ ಬೆದರಿಕೆ ಹಾಕಿದ್ದಾರೆ. ಇದನ್ನು ಎದುರಿಸಲು ನಾನು ಇನ್ನಷ್ಟು ಸೂರ್ಯ ನಮಸ್ಕಾರಗಳನ್ನು ಮಾಡುವ ಮೂಲಕ ಸಿದ್ಧನಾಗುತ್ತೇನೆ. ಮುಂಚಿತವಾಗಿ ಎಚ್ಚರಿಸಿದ್ದಕ್ಕಾಗಿ ಗಾಂಧಿ ಅವರಿಗೆ ಧನ್ಯವಾದ ಸಲ್ಲಿಸುತ್ತಿದ್ದೇನೆ.’ ’ ಎಂದು ಮೋದಿ ಹೇಳಿದ್ದಾರೆ. ‘70 ವರ್ಷಗಳಲ್ಲಿ, ಯಾವುದೇ ಕಾಂಗ್ರೆಸ್ ನ ಯಾವುದೇ ನಾಯಕರು ಸ್ವಾವಲಂಬಿಗಳಾಗಿಲ್ಲ. ಒಬ್ಬ ನಾಯಕನ ಹೇಳಿಕೆಯನ್ನು ನಾನು ಕೇಳಿದ್ದೇನೆ. ಆರು ತಿಂಗಳಲ್ಲಿ ನಾವು ಮೋದಿಯನ್ನು ಕೋಲಿನಿಂದ ಹೊಡೆಯುತ್ತೇವೆ ಎಂದು ಅವರು ಹೇಳಿದ್ದಾರೆ. ಹೌದು, ಇದು ಕಷ್ಟದ ಕೆಲಸ. ಹೊಡೆಯುವುದಕ್ಕೆ ಸಿದ್ಧವಾಗಲು ಅವರಿಗೆ ಆರು ತಿಂಗಳು ತೆಗೆದುಕೊಳ್ಳುತ್ತದೆ.’ ಲೋಕಸಭೆಯು ರಾಷ್ಟ್ರಪತಿ ಭಾಷಣ ಮೇಲಿನ ವಂದನಾ ನಿರ್ಣಯವನ್ನು ಧ್ವನಿಮತದಿಂದ ಅಂಗೀಕರಿಸಿತು