ಕಾಗವಾಡ: ಭಾರತ ದೇಶ, ಅಖಂಡ ದೇಶವಾಗಿದ್ದು, ರಾಜ್ಯಗಳಲ್ಲಿಯ ಬೇರೆ ಭಾಷೆಗಳಿದ್ದರೂ ನಾವೆಲ್ಲರು ಭಾರತೀಯರು. ಅದರಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಮಧ್ಯೆ ವಾದವಿವಾದ ಇದ್ದರೂ, ಕರ್ನಾಟಕದ ಕಾಗವಾಡದಲ್ಲಿ ಮಹಾರಾಷ್ಟ್ರ ನಿರಾಶ್ರಿತರನ್ನು 10 ದಿನಗಳಿಂದ ಪಾಲನ-ಪೋಷಣ ಮಾಡಿದ ಮುಖಂಡರಿಗೆ, ಮತ್ತು ರಾಜ್ಯದ ಜನತೆಗೆ ನನ್ನೊಂದು ಸಲ್ಯೂಟ್ ಎಂದು ಮಾಜಿ ಸಂಸದರು ಮತ್ತು ಸ್ವಾಭಿಮಾನಿ ರೈತ ಸಂಘಟನೆಯ ಆಧ್ಯಕ್ಷ ರಾಜು ಶೆಟ್ಟಿ ಕಾಗವಾಡದಲ್ಲಿ ಹೇಳಿದರು.
ಗುರುವಾರರಂದು ಕಾಗವಾಡದ ಕಾಳಜಿ ಕೇಂದ್ರದಲ್ಲಿ ನಿರಾಶ್ರಿತ ಮಕ್ಕಳ ಹಸ್ತೆಯಿಂದ ಧ್ವಜಾರೋಹಣ ನೆರವೇರಿಸಿ, ಅವರೊಂದಿಗೆ ಬೆರೆತು ಮಹಾರಾಷ್ಟ್ರದಲ್ಲಿ ಓದುತ್ತಿರುವ ಶಾಲೆಯ ವಿದ್ಯಾರ್ಥಿಗಳಿಂದ ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಿ,ನಾವೆಲ್ಲರೂ ಒಂದೇ. ಇದು ಕಾಗವಾಡದಲ್ಲಿ ಬಿಂಬಿಸಿದರು.
ಕಾಗವಾಡ ತಹಸೀಲ್ದಾರ ಶ್ರೀಮತಿ ಪ್ರಮೀಳಾ ದೇಶಪಾಂಡೆ, ಕಾಗವಾಡ ಬಿಇಒ ಎ.ಎಸ್.ಜೋಡಗೇರಿ, ಪಿಎಸ್ಐ ಹನಮಂತ ಶಿರಹಟ್ಟಿ, ತಾಲೂಕಾ ವೈದ್ಯಾಧಿಕಾರಿ ಡಾ. ಪುಷ್ಪಲತಾ, ಸಿಡಿಪಿಒ ಡಾ. ಸುರೇಶ ಕದ್ದು, ಸೇರಿದಂತೆ ಕಾಗವಾಡ ಹೊಸ ತಾಲೂಕಿನ ಎಲ್ಲ ಅಧಿಕಾರಿಗಳನ್ನು ಕಾಳಜಿ ಕೇಂದ್ರದಲ್ಲಿ ಒಂದುಗುಡಿಸಿ, ಬಾಬನಗೌಡಾ ಸಂಸ್ಥೆಯ ಆಧ್ಯಕ್ಷ ಸಿದ್ದಗೌಡಾ ಪಾಟೀಲ ಈ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಮಾಜಿ ಸಂಸದ ರಾಜು ಶೆಟ್ಟಿಯವರು ಮಾತನಾಡುವಾಗ, ಕೃಷ್ಣಾ ನದಿ ತೀರದ ಶಿರೋಳ ತಾಲೂಕಿನ 7 ಗ್ರಾಮಗಳು ಜಲಾವೃತ್ತಗೊಂಡಿದ್ದು, ಅವರನ್ನು ನದಿ ಆಚೆ ವೈದು, ಸೌರಕ್ಷಿಸವಾಗುತ್ತಿರಲಿಲ್ಲಾ. ಅವರಿಗೆ ಕಾಗವಾಡ ಕಾಳಜಿ ಕೇಂದ್ರದಲ್ಲಿ ಉಳಿಸಿ, 10 ದಿನಗಳಿಂದ ಭಾಷೆ, ಜಾತಿ, ರಾಜ್ಯ ಈ ಯಾವುದೇ ಭೇದ ಮನದಲ್ಲಿ ತರದೆ ಬಂಧುಗಳಂತೆ ಪೋಷಿಸಿದ್ದೀರಿ. ನಾವೇಲ್ಲರು ಭಾರತೀಯರು. ಮತ್ತು ಮಾನವೀಯತೆ ಅರಿತವರುಯೆಂದು ಹೇಳಿ, ಕರ್ನಾಟಕದ ಮತ್ತು ಕಾಗವಾಡದ ಜನತೆಗೆ ಮಹಾರಾಷ್ಟ್ರ ರಾಜ್ಯದ ಜನತೆ ಋಣಿಯಾಗಿದೆ ಎಂದು ಹೇಳಿದರು.
ಬಾಬನಗೌಡಾ ಶಿಕ್ಷಣ ಸಂಸ್ಥೆಯ ಆಧ್ಯಕ್ಷ ಸಿದ್ದಗೌಡಾ ಪಾಟೀಲ ಮಾತನಾಡುವಾಗ, ಕೃಷ್ಣಾ ನದಿಯ ಮಹಾಪೂರ ನೀರಿನಲ್ಲಿ ಎರಡು ರಾಜ್ಯಗಳ ಜನರು ನೊಂದಿದ್ದಾರೆ. ಕಾಗವಾಡದ ಕಾಳಜಿ ಕೇಂದ್ರದಲ್ಲಿ ಶಿರೋಳ ತಾಲೂಕಿನ ನಿರಾಶ್ರಿತರು ವಾಸವಾಗಿದ್ದಾರೆ. ಅವರಿಗೆ ಕರ್ನಾಟಕ ರಾಜ್ಯದ ಅನೇಕ ಸಂಘ, ಸಂಸ್ಥೆಗಳಿಂದ ಸೇವೆ ನೀಡಿದ್ದೇವೆ.
ಮಹಾಪೂರ ನೀರು ಇಳಿಮುಖವಾಗಿ ಎಲ್ಲ ವ್ಯವಸ್ಥೆಯಾಗುವರೆಗೆ ಕಾಳಜಿ ಕೇಂದ್ರದಲ್ಲಿ ವಾಸಿಸಿರಿ ಎಂದು ಹೇಳಿ, ನಿರಾಶ್ರಿತರಿಗೆ ಸಂಸಾರಕ್ಕೆ ಅಗತ್ಯಯಿರುವ ವಸ್ತುಗಳ ಕೀಟ್ ನೀಡಿದರು.
ಕಾರ್ಯಕ್ರಮದಲ್ಲಿ ಮುಂಬೈಯಿಯ ಪ್ರೇರಣಾ ವೈದ್ಯಕೀಯ ತಂಡದ ವೈದ್ಯರು ಉಚಿತ ತಪಾಸಣೆ ಮಾಡಿದರು.ಬೇರೆ ಸಂಘದ ಕಾರ್ಯಕರ್ತರು, ಯುವಕರು, ಅಧಿಕಾರಿಗಳು ಪಾಲ್ಗೊಂಡಿದ್ದರು.