ಮಹಿಳೆಯರ ರಕ್ಷಣೆಯಲ್ಲಿ ಸರ್ಕಾರದ ಅಸಹಾಯಕತೆ: ಪೂರ್ಣಿಮಾ

ಲೋಕದರ್ಶನವರದಿ

ಬ್ಯಾಡಗಿ: ಮಹಿಳೆಯನ್ನು ಕೇವಲ ಭೋಗದ ವಸ್ತುವನ್ನಾಗಿ ಕಾಣುತ್ತಿರುವ ಪುರುಷ ಪ್ರಧಾನ ಸಮಾಜಕ್ಕೆ ಧಿಕ್ಕಾರವಿರಲಿ, ಪೂಜ್ಯನೀಯ ಎಂದು ಕಾಣುವ ದೇಶದಲ್ಲೇ ಹೆಣ್ಣುಭ್ರೂಣ ಹತ್ಯೆ ನಿಷೇಧ ಕಾನೂನು ರಚಿಸಲು ಮುಂದಾಗುತ್ತಿರುವ ಸಕರ್ಾರ ಮಹಿಳೆಯ ರಕ್ಷಣೆಯ ವಿಷಯದಲ್ಲಿ ಅಸಹಾಯಕತೆಯ ಪ್ರದಶರ್ಿಸುತ್ತಿದೆ, ಆಕೆಯನ್ನು ನೋಡುವ ದೃಷ್ಟಿಕೋನ ಬದಲಾಗದಿದ್ದರೇ ದೇಶಕ್ಕೆ ಭವಿಷ್ಯವಿಲ್ಲ ಎಂದು ನ್ಯಾಯವಾದಿ ಪೂಣರ್ಿಮಾ ಹಿರೇಮಠ ಹೇಳಿದರು. 

   ಮೋಟೆಬೆನ್ನೂರ ಬಿಆರ್ಈ ಶಿಕ್ಷಣ ಸಂಸ್ಥೆ ಪದವಿಪೂರ್ವ ಮಹಾವಿದ್ಯಾಲಯವು, ತಾಲೂಕಿನ ಶಂಕ್ರೀಪುರ ಗ್ರಾಮದಲ್ಲಿ ಆಯೋಜಿಸಿರುವ 'ರಾಷ್ಟ್ರೀಯ ಸೇವಾ ಯೋಜನೆ' ಘಟಕದ ವಿಶೇಷ ಶಿಬಿರದಲ್ಲಿ ಮಹಿಳೆ ಮತ್ತು ಮಕ್ಕಳ ಕಾನೂನಿನ ಕುರಿತು ಅವರು ಮಾತನಾಡಿದರು.

  ಮಹಿಳೆ ಸಮಾಜದ ಅವಿಭಾಜ್ಯ ಅಂಗವೆಂಬುದರಲ್ಲಿ ಎರಡು ಮಾತಿಲ್ಲ, ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಗಳೊಂದಿಗೆ ಸುಭದ್ರ ಅಡಿಪಾಯ ಹಾಕುತ್ತಿರುವ ಆಕೆ ರಾಷ್ಟ್ರಪ್ರೇಮ, ಸಹೋದರತ್ವ, ಧರ್ಮಪ್ರಜ್ಞೆ, ದೂರದೃಷ್ಠಿ ವಿಚಾರ ಸೇರಿದಂತೆ ಮಕ್ಕಳಿಗೆ ಬದುಕಿನ ಭದ್ರತೆ ನೀಡುತ್ತಿದ್ದಾಳೆ, ಆದರೆ ಪ್ರಸ್ತುತ ಸಮಾಜದಿಂದ ಆಕೆಗೆ ರಕ್ಷಣೆ ಸಿಗದಿರುವುದು ದುರದೃಷ್ಟಕರ ಸಂಗತಿ ಎಂದರು.

      ಅಪಹರಣ ಪ್ರಕರಣಗಳಿಗೆ ಕಡಿವಾಣ: ಹದಿಹರೆಯದ ಯುವತಿಯರ ಅಪಹರಣ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಮಹಿಳಾ ಸಮಾಜವನ್ನೇ ಅಸ್ಥಿರಗೊಳಿಸುವ ಸನ್ನಿವೇಷ ನಿಮರ್ಾಣವಾಗಿದೆ, ಇದರ ಹಿಂದಿರುವ ಶಕ್ತಿಗಳ ಉದ್ದೇಶ ಇಂದಿಗೂ ಅಸ್ಪಷ್ಟ, ತನಿಖಾ ಸಂಸ್ಥೆಗಳು ನರಸತ್ತಂತೆ ವತರ್ಿಸುತ್ತಿದ್ದು, ಅದರ ವರದಿಗಳು ಇಂದಿಗೂ ಗುಪ್ತ, ಸಾಕ್ಷಿಗಳನ್ನೇ ನಾಶಪಡಿಸುವ ಮೂಲಕ ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.

ಎಂದರು. 

 ಗಲಿಬಿಲಿಗೊಳ್ಳುತ್ತಿರುವ ಮಹಿಳೆ: ಇತ್ತೀಚಿನ ದಿನದಲ್ಲಿ ಮಹಿಳೆಯರ ಮನಸ್ಸು ಗಲಿಬಿಲಿಗೊಳ್ಳುತ್ತಿದೆ, ವಾಸ್ತವಿಕತೆ ಮಹತ್ವ ಅರಿಯಲಾರದ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ, ಸಂದಿಗ್ಧಮಯ ಸಂಕ್ರಮಣದ ಕಾಲದಲ್ಲಿ ತಮ್ಮಲ್ಲಿರುವ ಸಾತ್ವಿಕಶಕ್ತಿ ಪ್ರದಶರ್ಿಸುತ್ತಿಲ್ಲ ಈ ನಿಟ್ಟಿನಲ್ಲಿ ಮಹಿಳೆ ರಕ್ಷಣೆಗೆ ಬಿಗಿಯಾದ ಕಾನೂನಿನ ಜೊತೆಗೆ ಸಮಾಜದ ಜನರಿಂದ ಆಕೆಗೆ ರಕ್ಷಣೆ ಸಿಗದಿರುವುದು ದುರುದೃಷ್ಟಕರ ಸಂಗತಿ.

  ವೇದಿಕೆಯಲ್ಲಿ ಗ್ರಾಪಂ.ಅಧ್ಯಕ್ಷ ಲಕ್ಷಣ ಮೇಗಳಮನಿ, ಸದಸ್ಯೆ ಸಾವಿತ್ರ ಬಡಿಗೇರ, ವೀರಭದ್ರಪ್ಪ ಎಲಿಗಾರ, ಪ್ರೊ.ವಿರೇಶ ಮುಗದೂರ, ಯೋಜನಾಧಿಕಾರಿ ಮಂಜಪ್ಪ ಬಾರಕೇರ, ಪ್ರವೀಣ ಚೂರಿ, ಪಿ.ವಿಕ್ರಮ್, ಉಮೇಶ ಪಾಟೀಲ, ಪ್ರವೀಣ ಬಡಾಯಿ, ವಿನಯ ಬಾರಂಗಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.