ಸರ್ಕಾರ ಗುರುಕುಲ ಮಾದರಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು: ನಿರಂಜಾನನಂದಶ್ರೀ

ಬ್ಯಾಡಗಿ29: ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ ಪಾಲಕರೇ ಇಂದು ಅನಾಥಾಶ್ರಮಗಳ ಬಾಗಿಲನ್ನು ತಟ್ಟುತ್ತಿದ್ದು ಪ್ರಸ್ತುತ ದಿನಗಳಲ್ಲಿ ಶಿಕ್ಷಣವಷ್ಟೇ ಅಲ್ಲ ಜೊತೆಗೆ ಧರ್ಮ ಸಂಸ್ಕಾರವು ಕೂಡ ಅತ್ಯಗತ್ಯ ಹೀಗಾಗಿ ಸರ್ಕಾರಗಳು ಗುರುಕುಲ ಮಾದರಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜಾನನಂದಶ್ರೀ ಪ್ರತಿಪಾದಿಸಿದರು.

 ಕಾಗಿನೆಲೆ ಕನಕಗುರುಪೀಠದ ಹಕ್ಕಬುಕ್ಕ ಸ್ವತಂತ್ರ್ಯ ಪದವಿಪೂರ್ವ ಮಹಾವಿದ್ಯಾಲಯ ಹಾಗೂ ಪ್ರೌಢಶಾಲೆಗಳ ಸಂಯುಕ್ತಾ ಶ್ರಯದಲ್ಲಿ ಏರ್ಪಡಿಸಿದ್ದ ವಾರ್ಷಿಕ  ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮ ಮತ್ತು ಶಿಕ್ಷಣ ವ್ಯಕ್ತಿಯ ಬದುಕಿನ ಅವಿಭಾಜ್ಯ ಅಂಗಗಳಿದ್ದಂತೆ, ಆದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣದಲ್ಲಿ ಮೌಲ್ಯಗಳು ಕುಸಿಯುತ್ತಿದ್ದು ಪ್ರಸ್ತುತ ಸಮಾಜ ನೈತಿಕವಾಗಿ ಅಧಃಪತನ ಕ್ಕಿಳಿಯುತ್ತಿದೆ ಎಂದರು.

ಗುರುಕುಲ ಮಾದರಿ ಶಿಕ್ಷಣ ಬೇಕು: 'ಶಿಕ್ಷಣ'ವು ಜ್ಞಾನದ ಮಾರ್ಗ ತೋರಿಸಿದರೇ 'ಧರ್ಮ' ಬದುಕಿನ ಮಾರ್ಗ ತೋರಿಸಲಿದೆ, ಗುರುಕುಲದಲ್ಲಿ ಅಭ್ಯಸಿಸಿದ ಭಕ್ತಪ್ರಹ್ಲಾದ ತಂದೆ ಹಿರಣ್ಯಕಶ್ಯಪುವಿಗೆ ಬುದ್ಧಿ ಹೇಳಿದ್ದನ್ನು ಪುರಾಣಗಳಿಂದ ತಿಳಿದುಕೊಂಡಿ ದ್ದೇವೆ, ರಾಮಕೃಷ್ಣ ಪರಮಹಂಸರ ಗುರುಕುಲದಲ್ಲಿ ಬೆಳೆದ ಸ್ವಾಮಿ ವಿವೇಕಾನಂದರು ಭಾರತದ ಶಕ್ತಿಯನ್ನು ಇಡೀ ವಿಶ್ವಕ್ಕೆ ತೋರಿಸಿದ ಉದಾಹರಣೆ ನಮ್ಮ ಕಣ್ಣೆದೆರುಗಿದೆ ಎಂದರು.

ಧರ್ಮ ಸಂಸ್ಕಾರದಿಂದ ದೇಶದ ಅಭಿವೃದ್ಧಿ: ಡಯಟ್ ಉಪನಿದರ್ೇಶಕ ಬಸವಲಿಂಗಪ್ಪ ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕ್ಕೆ ಧರ್ಮ ಸಹಕಾರಿಯಾಗಿದ್ದು, ಉತ್ತಮ ಧರ್ಮ ಸಂಸ್ಕಾರ ಪಡೆದ ವ್ಯಕ್ತಿ ಎಂದಿಗೂ ನೀಚ ಕೆಲಸಕ್ಕಿಳಿಯಲು ಸಾಧ್ಯವಿಲ್ಲ್ಲ, ಅದೇ ರೀತಿ ಉತ್ತಮ ಶಿಕ್ಷಣ ಪಡೆದಂತಹ ವ್ಯಕ್ತಿಯೂ ಸಹ ತನ್ನ ಸಾಮಥ್ರ್ಯಕ್ಕನುಗುಣವಾಗಿ ದೇಶಕ್ಕಾಗಿ ಆತನ ಸೇವೆ ತಲುಪಲಿದ್ದು ಇದರಿಂದ ದೇಶದ ಭವಿಷ್ಯವೂ ಕೂಡ ಉಜ್ವಲವಾಗಲಿದೆ ಎಂದರು.

ಸಮಾಜ ಜಾಗೃತಿಗೆ ಧರ್ಮಶಿಕ್ಷಣ ಬೇಕು:ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿದರ್ೇಶಕ ಪೀರಜಾದೆ ಮಾತನಾಡಿ, ಸಮಾಜ ಜಾಗೃತಗೊಳ್ಳಲು ದಾರ್ಶನಿಕರು ಶರಣರು, ಸಂತರು, ಸ್ವಾಮಿಜಿಗಳ ಕೊಡುಗೆ ಅಪಾರ, ಭಾರತದಂತಹ ಸಾಂಸ್ಕೃತಿಕ ನೆಲದಲ್ಲಿ ಅಂತಹವರೆಲ್ಲಾ ದೈವೀ ಸ್ವರೂಪರಾಗಿದ್ದಾರೆ, ಶೈಕ್ಷಣಿಕ ಅರ್ಹತೆ ಇಲ್ಲದೆಯೇ ನೂರಾರು ವರ್ಷಗಳ ಹಿಂದೆ ಭವ್ಯ ಭಾರತದ ಬಗ್ಗೆ ಕನಸು ಕಟ್ಟಿಕೊಂಡಿದ್ದ ಅವರು, ಮೌಢ್ಯಯುತ ಸಮಾಜಕ್ಕೊಂದು ಮಾರ್ಗದಶರ್ಿ ಶಿಕ್ಷಣ ನೀಡಿ ಹೋಗಿದ್ದು ಇದೀಗ ಇತಿಹಾಸ ಎಂದರು.

 ವೇದಿಕೆಯಲ್ಲಿ ಕನಕಗುರುಪೀಠದ ಕಿರಿಯಶ್ರೀ ಅಮೋಘಾನಂದಶ್ರೀ ಸೇರಿದಂತೆ ಮಾಜಿ ಆಡಳಿತಾಧಿಕಾರಿ ಎಸ್.ಎಫ್.ಎನ್. ಗಾಜಿಗೌಡ್ರ, ಸದಾನಂದಗೌಡ ಪಾಟೀಲ, ಪ್ರಾಚಾರ್ಯ ಎಂ.ಬೀರಪ್ಪ, ಪ್ರೌಢಶಾಲೆ ಮುಖ್ಯಶಿಕ್ಷಕ ರವಿ ಆನ್ವೇರಿ ಇನ್ನಿತರರು ಉಪ ಸ್ಥಿತರಿದ್ದರು.