ಶೋಷಿತರಿಗೆ ದೇವರನ್ನು ಕಾಣಿಸಿದ ಸಂತಶ್ರೇಷ್ಠ ನಾರಾಯಣ ಗುರುಗಳು
Saint Narayana Guru laid great emphasis on education
ಹೂವಿನಹಡಗಲಿ 9: ಸಂತ. ಶ್ರೇಷ್ಠ ನಾರಾಯಣ ಗುರುಗಳು ಕೇರಳದಲ್ಲಿ ಸಮಾಜ ಸುಧಾರಣೆಗೆ ಶಿಕ್ಷಣ ಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು ಎಂದು ಶಾಸಕ ಕೃಷ್ಣ ನಾಯಕ ಹೇಳಿದರು.
ಪಟ್ಟಣದಲ್ಲಿ ತಾ.ಪಂ.ರಾಜೀವ್ ಗಾಂಧಿ ಸಭಾಂಗಣದಲ್ಲಿ ಮಂಗಳವಾರ ಈಡಿಗರ ಸಮಾಜದಿಂದ ದಿಂದ ಸಂತ ಶ್ರೇಷ್ಠ ಬ್ರಹ್ಮ ನಾರಾಯಣ ಗುರುಗಳು ಜಯಂತಿ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿ ಒಂದೇ ಜಾತಿ, ಒಂದೇ ಮತ, ಒಂದೇ ದೇವರು’ ಎಂದು ಇಡೀ ಮನುಕುಲಕ್ಕೇ ಸಾರಿದವರು ಸಂತಶ್ರೇಷ್ಠ ನಾರಾಯಣಗುರುಗಳು. ಇಂದಿನ ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಜಾತೀಯ ವಿಷ ಭಾವನೆಗಳನ್ನು ಬಿತ್ತಿ, ’ನಮ್ಮ ಧರ್ಮ’, ’ನಮ್ಮ ಸಿದ್ಧಾಂತ’ ಎನ್ನುತ್ತಾ ಮತಭ್ರಾಂತಿಯಿಂದ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾರೆ. ಇಂಥಹ ಸಂದರ್ಭದಲ್ಲಿ ನಾರಾಯಣಗುರುಗಳ ಸಂದೇಶವು ಅತ್ಯಂತ ಪ್ರಸ್ತುತವಾಗಿದೆ ಎಂದರು.
ಉಪನ್ಯಾಸ ಕ ಈಡಿಗರ ಅಶೋಕ ಉಪನ್ಯಾಸ. ನೀಡಿದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ.ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಐಗೋಳ ಚಿದಾನಂದ ಮಾತನಾಡಿದರು. ಈಡಿಗರ ಸಮಾಜದ ತಾಲೂಕು ಅದ್ಯಕ್ಷ ಮಾರುತಿ ಕೃಷ್ಣ ಪ್ಪ. ಮಹಿಳಾ ಅದ್ಯಕ್ಷೆ ತಾರಾಮತಿ. ಬಿ.ಜಯಲಕ್ಷ್ಮಿ.ಪುರಸಭೆ ಅದ್ಯಕ್ಷೆ ಜಮಾಲಾ ಬಿ. ಉಪಾಧ್ಯಕ್ಷ ಸೊಪ್ಪಿನ ಮಂಜುನಾಥ ಈಡಿಗರ. ಸಮಾಜದ ಜಿಲ್ಲಾ ಉಪಾಧ್ಯಕ್ಷ ಕೆ.ಅಯ್ಯನಗೌಡ.ತಾ.ಪಂ.ಇಒ ಪರಮೇಶಪ್ಪ.ಮುಖಂಡ ಗುರುಮೂರ್ತಿ. ಬಿಜೆಪಿ ಅದ್ಯಕ್ಷ ಮಲ್ಲಿಕಾರ್ಜುನ. ಈಟಿ.ಲಿಂಗರಾಜ.ಹೆಚ್.ಪೂಜಪ್ಪ ಇದ್ದರು. ಇದಕ್ಕೂ ಮೊದಲು ಬ್ರಹ್ಮ ನಾರಾಯಣ ಗುರುಗಳ ಭಾವಚಿತ್ರ ಮೆರವಣಿಗೆ ನಡೆಯಿತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 