ಎನ್‌ಕೌಂಟರ್: ಹೈದರಾಬಾದ್ ಪೊಲೀಸರ ಕ್ರಮಕ್ಕೆೆ ಸೈನಾ ನೆಹ್ವಾಲ್ ಸಲ್ಯೂಟ್

Saina Nehwal

ನವದೆಹಲಿ, ಡಿ 6- ಪಶುವೈದ್ಯ ಮೇಲೆ ಅತ್ಯಚಾರವೆಸಗಿ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ ಹೈದರಾಬಾದ್ ಪೊಲೀಸರನ್ನು ಹಿರಿಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್  ಶ್ಲಾಘಿಸಿದರು.

‘ಹೈದರಾಬಾದ್ ಪೊಲೀಸರಿಂದ ಅದ್ಭುತ ಕಾರ್ಯ.. ನಾವು ನಿಮಗೆ ನಮಸ್ಕರಿಸುತ್ತೇವೆ,’’ ಎಂದು ಸೈನಾ ಟ್ವೀಟ್ ಮಾಡಿದ್ದಾರೆ. ಭಾರತ ಹಾಗೂ ವೆಸ್ಟ್‌ ಇಂಡೀಸ್ ನಡುವಿನ ಮೊದಲನೇ ಟಿ-20 ಪಂದ್ಯದಲ್ಲಿ ಇಂದು ಮುಖಾಮುಖಿಯಾಗುತ್ತಿವೆ. 

ಟಿ-20 ಪಂದ್ಯ ಆರಂಭವಾಗುವುದಕ್ಕೂ ಒಂದು ವಾರದ ಹಿಂದೆಯೇ ಹೈದರಾಬಾದ್ ನಗರದಲ್ಲಿ ಈ ಭಯಾನಕ ಘಟನೆ ನಡೆದಿತ್ತು. ಆರೋಪಿಗಳನ್ನು ಬಂಧಿಸಿದ್ದ ಹೈದರಾಬಾದ್ ಪೊಲೀಸರು, ಇಷ್ಟು ದಿನ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಆರೋಪಿಗಳು ಎಲ್ಲ ತಪ್ಪುು ಒಪ್ಪಿಿಕೊಂಡಿದ್ದರು. 

ಇಂದು ಸ್ಥಳ ಪರಿಶೀಲನೆ ಮಾಡಲು ಪೊಲೀಸರು ಆರೋಪಿಗಳೊಂದಿಗೆ ಘಟನೆ ನಡೆದಿದ್ದ ಶಾದ್‌ನಗರ್ ಕ್ಕೆೆ ಆಗಮಿಸಿದ್ದರು. ಈ ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಈ ವೇಳೆ ಪೊಲೀಸರು ಆ ನಾಲ್ವರು ಆರೋಪಿಗಳ ಮೇಲೆ ಗುಂಡು ಹಾರಿಸಿ ಎನ್‌ಕೌಂಟರ್ ಮಾಡಲಾಗಿದೆ.

 ಹೈದರಾಬಾದ್ ಪೊಲೀಸರ ಕ್ರಮದ ಬಗ್ಗೆೆ ಸಾಮಾಜಿಕ ಜಾಲಾತಾಣದಲ್ಲಿ  ಸಾಕಷ್ಟು ಚರ್ಚೆ ನಡೆಯುತ್ತಿದೆ. ಎನ್‌ಕೌಂಟರ್ ಕ್ರಮವನ್ನು ಕೆಲವರು ಸಮರ್ಥಿಸಿಕೊಂಡರೆ, ಇನ್ನು, ಕೆಲವರು ದೇಶಾದ್ಯಂತ ನಡೆದಿರುವ ಅತ್ಯಚಾರ ಪ್ರಕರಣಗಳ ಆರೋಪಿಗಳು ಇದೇ ರೀತಿ ಶಿಕ್ಷೆೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಮತ್ತೊಂದು ಗುಂಪು, ಆರೋಪಿಗಳ ಸ್ಥಾನದಲ್ಲಿ ಶ್ರೀಮಂತರಿದ್ದರೆ ಎನ್‌ಕೌಂಟರ್ ಮಾಡುತ್ತಿರಲಿಲ್ಲ. ಹೈದರಾಬಾದ್ ಪೊಲೀಸರು ಮಾಡಿದ ರೀತಿಯೇ ಅತ್ಯಚಾರ ಪ್ರಕರಣಗಳ ಆರೋಪ ಸ್ಥಾನದಲ್ಲಿರುವ ಎಲ್ಲರಿಗೂ ಇದೇ ರೀತಿ ಈ ಹಿಂದೆ ಎನ್‌ಕೌಂಟರ್ ಏಕೆ ಮಾಡಲಾಗಲಿಲ್ಲ ಎಂದು ಪ್ರಶ್ನಿಸಿದ್ದಾರೆ.