ದೇವನೊಬ್ಬ ನಾವು ಹಲವು ಸಂದೇಶ ಸಾರಿದ ಸಾಯಿಬಾಬಾ : ಪ್ರೊ. ಖೊದ್ನಾಪೂರ
Sai Baba, who preached many messages, is a god: Prof. Khodnapur
ವಿಜಯಪುರ 28 : ದೈವಸ್ವರೂಪಿ ಸಂತ, ಫಕೀರ, ಅವತಾರ ಪುರುಷ ಮತ್ತು ಸದ್ಗುರು ಸಾಯಿಬಾಬಾ ಅವರು ಜನಹಿತ, ಸಮಾಜ ಕಲ್ಯಾಣಕ್ಕಾಗಿ ಅನೇಕ ಕಷ್ಟ-ಸಂಕಷ್ಟಗಳನ್ನು ಎದುರಿಸಿ, ತಮ್ಮ ಪವಾಡಗಳ ಮೂಲಕ ವಿಶ್ವದೆಲ್ಲೆಡೆ ಆರಾಧಿಸುವ ದೇವರಾದರು. ಅಧ್ಯಾತ್ಮಿಕ ಸಾಧಕರಾಗಿದ್ದ ಸಾಯಿಬಾಬಾ ಅವರು ದೇವನೊಬ್ಬ ನಾಮ ಹಲವು ಎಂಬ ಸಂದೇಶ ಸಾರುತ್ತಾ, ಭಕ್ತಿಯೋಗ, ಜ್ಞಾನ ಯೋಗ, ಕರ್ಮಯೋಗ ಮತ್ತು ಆತ್ಮ ಸಾಕ್ಷಾತ್ಕಾರಗಳ ಮೂಲಕ ಸರ್ವೇ ಜನಾಃ ಸುಖಿನೋ ಭವಂತು ಎಂಬ ಸಾಮಾಜಿಕ ಕಲ್ಯಾಣಕ್ಕಾಗಿ ಧಾರ್ಮಿಕ ಚಿಂತನೆ ನಡೆಸಿದ ಶ್ರೇಷ್ಠ ಸಂತರಾಗಿದ್ದರು ಪ್ರೊ. ಎಂ.ಎಸ್.ಖೊದ್ನಾಪೂರ ಅಭಿಪ್ರಾಯಪಟ್ಟರು.ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಎನ್.ಜಿ.ಓ ಕಾಲನಿಯಲ್ಲಿ ರಾಮ ನವಮಿ ಉತ್ಸವದ ಅಂಗವಾಗಿ ಸಾಯಿಬಾಬಾ ದೇವಸ್ಥಾನದಲ್ಲಿ ನಡೆದ ಹೋಮ-ಹವನ, ಮಹಾಪೂಜೆ ಮತ್ತು ಮಹಾಪ್ರಸಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ಶ್ರದ್ಧಾ ಮತ್ತು ಸಬೂರಿ ಎಂಬ ಸಂದೇಶ ಸಾರಿದ ಸಾಯಿಬಾಬಾ ಇಂದು ವಿಶ್ವದೆಲ್ಲೆಡೆ ಭಕ್ತಿ-ಭಾವದಿಂದ ಪೂಜಿಸುವ ದೇವರಾಗಿದ್ದಾರೆ. ನಮ್ಮಲ್ಲಿರುವ ಕಾಮ, ಕ್ರೋಧ, ಮದ, ಮೋಹ, ಲೋಭ ಮತ್ತು ಮತ್ಸರಗಳೆಂಬ ಅರಿಷಡ್ವರ್ಗಗಳನ್ನು ತ್ಯಜಿಸಿ ಜೀವನದಲ್ಲಿ ಪ್ರೀತಿ, ಶಾಂತಿ, ನೆಮ್ಮದಿ, ಸಮಾನತೆ, ಸಾಮರಸ್ಯತೆ, ಸಂಸ್ಕೃತಿ-ಸಂಸ್ಕಾರ, ಧರ್ಮಸಹಿಂಷ್ಣುತೆ, ನಾವೆಲ್ಲರೂ ಒಂದೇ ಎಂಬ ಭಾವ ಒಡಮೂಡಲು ಧಾರ್ಮಿಕ ಮತ್ತು ಅಧ್ಯಾತ್ಮಿಕತೆಯ ಕಾರ್ಯದಲ್ಲಿ ತೊಡಗಬೇಕು. ಕೋವಿಡ್ ನಂತಹ ಕಾಲಘಟ್ಟದಲ್ಲಿ ಸಾವು-ನೋವುಗಳಿಂದ ಕಂಡ ಮನುಜ ಹಣ, ಆಸ್ತಿ ಮತ್ತು ಸಂಪತ್ತು ಎಷ್ಟೇ ಗಳಿಕೆ ಮಾಡಿದರೂ ಜೀವನದಲ್ಲಿ ಏನು ಇಲ್ಲವೆಂಬುದನ್ನು ಮನಗಂಡು ದೇವರು, ಧಾರ್ಮಿಕತೆ ಮತ್ತು ಅಧ್ಯಾತ್ಮಿಕತೆಯತ್ತ ಮುಖ ಮಾಡುತ್ತಿರುವದು ಉತ್ತಮ ಬೆಳವಣಿಗೆಯಾಗಿದೆ. ಸಾಯಿಬಾಬಾ ಅವರು ನಮಗೆಲ್ಲ ಸುಖ-ಶಾಂತಿ, ನೆಮ್ಮದಿ, ಆರೋಗ್ಯ ಭಾಗ್ಯ ದಯಪಾಲಿಸಲೆಂದು ಪ್ರಾರ್ಥಿಸೋಣ ಎಂದರು.
ಇದೇ ಸಂದರ್ಭದಲ್ಲಿ ಉಮೇಶ ವಂದಾಳ, ಕಾರ್ೋರೇಟರ್ ರಾಜಶೇಖರ ಕುರಿ, ಬಸಪ್ಪ ಬಾಗೇವಾಡಿ, ರಾವಸಾಬ ಮೆಣಸಂಗಿ, ಮಡಿವಾಳ ಮಾಕೊಂಡ ಇನ್ನಿತರನ್ನು ಸನ್ಮಾನಿಸಲಾಯಿತು.ಈ ಸಮಾರಂಭದಲ್ಲಿ ಸಾಯಿಬಾಬಾ ಸೇವಾ ಸಮೀತಿಯ ಸದಸ್ಯರಾದ ಪಂಕಜ ಪೋಳ, ಸಂಪತ್‌ಕುಮಾರ ಕುಲಕರ್ಣಿ, ಅಪ್ಪು ಇಂಗಳೆ, ನಾರಾಯಣ ಇಂಗಳೆ, ಧನರಾಜ ಪೋಳ, ಪ್ರಭು ಬಳೂಲಗಿಡದ, ಶರತ ಬಾಗೇವಾಡಿ, ರಾಜೇಂದ್ರ ಕಬಾಡೆ, ಗೋಲ್ಲಾಳ ಎಚ್ಚಿ, ದೇವಸ್ಥಾನದ ಸಮೀತಿ ಸದಸ್ಯರು ಉಪಸ್ಥಿತರಿದ್ದರು.
ಸಾಯಿಬಾಬಾ ದೇವಸ್ಥಾನದಲ್ಲಿ ಮುಂಜಾನೆ ಅಭಿಷೇಕ, ಹೋವ-ಹವನ ಮತ್ತು ಮಹಾಮಂಗಳಾರತಿಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು, ಮಡಿವಾಳ ಮಾಕೊಂಡ ಹಾಗೂ ಸರೋಜಾ ಬಾಗಲಕೋಟ ಇವರಿಂದ ದೇವರ ನಾಮಸ್ಮರಣೆ, ದೈವ, ಭಕ್ತಿ-ಗೀತೆ ಮತ್ತು ಸಾಯಿನಾಮ ಗೀತೆಗಳ ಸಂಗೀತ ಸುಧೆ ಜನರ ಮನರಂಜಿಸಿತು. ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನವರಸಪುರದ ವಿವಿಧ ಬಡಾವಣೆಗಳ ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ಸದ್ಭಕ್ತರು ಮಹಾಪ್ರಸಾದ ಸೇವಿಸಿ ಸಾಯಿಬಾಬಾ ಅವರ ಅನುಗ್ರಹ ಪಡೆದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 