ಲೋಕದರ್ಶನ ವರದಿ
ಬಸವನಬಾಗೇವಾಡಿ 20: ದೀಪದ
ಬೆಳಕಿನಲ್ಲಿ ದೇವರನ್ನು ಕಂಡುಕೊಂಡಲ್ಲಿ ಅಜ್ಞಾನ ಅಂಧಕಾರ ದೂರವಾಗುತ್ತದೆ ಎಂದು ಸ್ಥಳೀಯ ಹಿರೇಮಠದ
ಶಿವಪ್ರಕಾಶ ಶಿವಾಚಾರ್ಯ ಹೇಳಿದರು.
ಸ್ಥಳೀಯ ಶ್ರೀ ಮರಗಮ್ಮ ದೇವಿ
ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ನವರಾತ್ರಿ ಉತ್ಸವದ
ಅಂಗವಾಗಿ ಶ್ರೀ ಮರಗಮ್ಮ ದೇವಿ
ದೇವಸ್ಥಾನದ ಸೇವಾ ಸಮಿತಿ ಅವರು
ಆಯೋಜಿಸಿದ ಸಹಸ್ರ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಾನಿಧ್ಯವಹಿಸಿ ಮಾತನಾಡಿದ
ಅವರು ಕತ್ತಲೆಯಿಂದ
ಬೆಳಕಿನಡೆಗೆ ಸಾಗುವುದರ ಮೂಲಕ ಸುಂದರ ಜೀವನವನ್ನು
ನಡೆಸಬೇಕು ಎಂದು ಹೇಳಿದರು.
ಬೆಳಕು ಜ್ಞಾನ ಸಂಕೇತವಾಗಿದ್ದು ದಸರಾ ಹಬ್ಬವು ಐತಿಹಾಸಿಕ
ಹಿನ್ನೆಲೆ ಹೊಂದಿದ್ದು ದಸರೆಯು ಮನುಷ್ಯನ ಮನಸ್ಸಿನಲ್ಲಿರುವ ದುಷ್ಟಶಕ್ತಿಗಳನ್ನು ದೂರಗೊಳಿಸಿ ಸುಂದರ ಬದುಕು ನಿಮರ್ಿಸಲು ಸಹಾಯಕವಾಗಿದ್ದು ಧಾಮರ್ಿಕ ಕಾರ್ಯಕ್ರಮದಿಂದ ಸಮಾಜದಲ್ಲಿ ಸಾಮರಸ್ಯ ಮೂಡುತ್ತದೆ ಭಕ್ತಿ ಜೊತೆಗೆ ಧಾಮರ್ಿಕ ಮನೋಭಾವ ಅಡಗಿದಾಗ ಸಮಾಜದಲ್ಲಿ ಪರಿವರ್ತನೆ ಸಾಧ್ಯವಿದೆ ಎಂದು ಹೇಳಿದರು.
ಈ ವೇಳೆಯಲ್ಲಿ ಭಕ್ತರು
ದೇವಾಲಯ ಮುಂಭಾಗದಲ್ಲಿ ಸಹಸ್ರ ದೀಪೊತ್ಸವ ನಿಮಿತ್ಯ ದೀಪಗಳನ್ನು ಹಚ್ಚಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ
ಮೆರೆದರು, ಈ ಸಂದರ್ಭದಲ್ಲಿ ಸಂಗಮೇಶ
ಕುಂಬಾರ, ಚಂದ್ರಕಾಂತ ಗೋಡಿಕಟ್ಟಿ, ಪ್ರಕಾಶ ಮಾಲಗಾರ, ಸಂತೋಷ ಚಿಂಚೋಳಿ, ಅಮೀತ ಶಿಂಧೆ, ಪರಸುರಾಮ
ಪವಾರ, ಮಹಾಂತೇಶ ಚಿಂಚೋಳಿ, ಅಡಿವೆಪ್ಪ ಕುಂಬಾರ, ಶಂಕರ ಮಾಲಗಾರ, ಪ್ರಕಾಶ
ಶಿಂಧೆ, ದೇವಸ್ಥಾನದ ಅರ್ಚಕ ಮಲ್ಲು ಹಾದಿಮನಿ, ಕಸ್ತೂರಿ ಕುಂಬಾರ, ಜ್ಯೋತಿ ಕುಂಬಾರ, ರೇಣುಕಾ ನಾಯ್ಕೋಡಿ, ಅನ್ನಕ್ಕ ಚಿಂಚೋಳಿ, ಮಂಜುಳಾ ರೇವಡಿ, ನೀಲಮ್ಮ ಗೋಡಿಕಟ್ಟಿ, ರೇಖಾ ಮಾಲಗಾರ, ಕಲ್ಲವ್ವ
ಹಿಟ್ನಳ್ಳಿ, ತುಳಾಸಬಾಯಿ ಕುಂಬಾರ ಸೇರಿದಂತೆ ಇತರರು ಇದ್ದರು.