ಸುರಕ್ಷಿತ ಅಂತರ್ಜಾಲ ದಿನ ಜವಾಬ್ದಾರಿಯುತ ಬಳಕೆಯೇ ಡಿಜಿಟಲ್ ಭದ್ರತೆಯ ಮಂತ್ರ
Safer Internet Day: Responsible use is the mantra of digital security
ಗದಗ 11 : ಇಂದಿನ ಡಿಜಿಟಲ್ ಯುಗದಲ್ಲಿ ಅಂತರ್ಜಾಲ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಸುರಕ್ಷಿತ ಹಾಗೂ ಜವಾಬ್ದಾರಿಯುತ ಅಂತರ್ಜಾಲ ಬಳಕೆಯ ಕುರಿತು ಜಾಗೃತಿ ಮೂಡಿಸಲು ಸುರಕ್ಷಿತ ಅಂತರ್ಜಾಲ ದಿನವನ್ನು ಆಚರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ತಿಳಿಸಿದರು. ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ದಲ್ಲಿ ಮಂಗಳವಾರ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಗದಗ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಗದಗ ಇವರುಗಳ ಸಹಯೋಗದಲ್ಲಿ ಸುರಕ್ಷಿತ ಅಂತರ್ಜಾಲ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಂತರ್ಜಾಲವು ಶಿಕ್ಷಣ, ಮಾಹಿತಿ ವಿನಿಮಯ ಹಾಗೂ ಸಂವಹನ ಕ್ಷೇತ್ರದಲ್ಲಿ ಮಹತ್ತರ ಕ್ರಾಂತಿ ತಂದಿದ್ದರೂ, ಅದರ ದುರುಪಯೋಗದಿಂದ ಸೈಬರ್ ಅಪರಾಧಗಳು ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ನಕಲಿ ವೆಬ್‌ಸೈಟ್‌ಗಳು, ಫಿಷಿಂಗ್, ಹ್ಯಾಕಿಂಗ್, ಸೈಬರ್ ಬಲಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ವಂಚನೆಗಳಿಂದ ಎಚ್ಚರಿಕೆಯಿಂದಿರಬೇಕು ಎಂದು ತಿಳಿಸಿದರು.
ಈ ಹಿಂದೆ ಡೈರಿ ಬರೆಯುವಂತ ಹವ್ಯಾಸವಿತ್ತು. ಆದರೆ ಈಗಿನ ಕಾಲದ ಜನರಿಗೆ ಡೈರಿ ಬರೆಯುವ ಹವ್ಯಾಸ ಕಡಿಮೆಯಾಗಿದೆ. ಇದಕ್ಕೆ ಕಾರಣ ಅಂತರ್ಜಾಲವಾಗಿದೆ. ಮೊಬೈಲ್ ಫೋನ್ ಗಳಲ್ಲಿ ಹಲವಾರು ರೀತಿಯ ಆ್ಯಪ್ ಗಳಿವೆ. ಪ್ರತಿಯೊಂದಕ್ಕೂ ಸೆಕ್ಯೂರಿಟಿ ಪಾಸ್ವರ್ಡ್ ಮತ್ತು ಐಡಿ ಪ್ರೈವಸಿ ನೋಟಿಫಿಕೇಶನ್ ಳನ್ನು ಆಫ್ ಮಾಡಬೇಕು. ಆಗ ಮಾತ್ರ ನಮ್ಮ ಮೊಬೈಲ್ ಸುರಕ್ಷಿತವಾಗಿರಲಿಕ್ಕೆ ಸಾಧ್ಯ ಎಂದರು. ಜೀವನದಲ್ಲಿ ಮೋಸ ಹೋಗುವವರು ಹೆಚ್ಚಾಗಿರುವುದರಿಂದಲೇ ಮೋಸ ಮಾಡುವವರು ಹೆಚ್ಚಾಗಿದ್ದಾರೆ. ಹಾಗಾಗಿ ನಾವು ಮೊಬೈಲ್‌ಗಳಲ್ಲಿ ಸುರಕ್ಷತೆ ಕಾಪಾಡುವುದು ಬಹಳ ಮುಖ್ಯ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.
ಡಿವೈಎಸ್ಪಿ ಮಹಾಂತೇಶ ಸಜ್ಜನ್ ಮಾತನಾಡಿ ಸೈಬರ್ ಅಪರಾಧಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಸುರಕ್ಷಿತ ಅಂತರ್ಜಾಲ ದಿನವನ್ನು ಉದ್ದೇಶಿಸಿ ಅಧಿಕಾರಿಗಳಿಗೆ ಸೈಬರ್ ವಂಚನೆಗಳಲ್ಲಿ ಆಗುವ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಿಕೊಟ್ಟರು. ಆದಷ್ಟು ಮೊಬೈಲ್ ನಲ್ಲಿ ಬರುವ ಎಲ್ಲಾ ನೋಟಿಫಿಕೇಟಿನ್‌ಗಳನ್ನ ಆಫ್‌ಮಾಡಿ ಆಗ ಅಂತರ್ಜಾಲದಿಂದ ಸುರಕ್ಷಿತವಾಗಿರಲು ಸಾಧ್ಯ. ಸಾಮಾಜಿಕ ಮಾದ್ಯಗಳಾದ ಫೇಸ್ಬುಕ್,ಟ್ವಿಟ್ಟರ, ಇನ್ಸಾ-್ಟಗ್ರಾಮ್, ಯೂಟ್ಯೂಬ್ ವಾಟ್ಸಪ್ಪ್ ಅಕೌಂಟ್ ಕ್ರಿಯೇಟ್ ಮಾಡುವಾಗ ಬಹಳ ಎಚ್ಚರಿಕೆ ವಹಿಸುವುದು ಅಗತ್ಯ. ಮೊಬೈಲ್‌ನಲ್ಲಿ ನಿಮ್ಮ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಹಂಚಿಕೊಳ್ಳದಿರಿ. ಯಾವುದೇ ಪಾಸ್ವರ್ಡ್ ಆಗಲಿ 3 ತಿಂಗಳಿಗೊಮ್ಮೆ ಬದಲಿಸಿ ಎಐ ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತದೆ. ಸುರಕ್ಷಿತ ಅಂತರ್ಜಾಲದ ಮಾಹಿತಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಿಗುವಂತಾಗಬೇಕು ಎಂದರು.
ಜಿಲ್ಲಾ ಸಾಂಖಿಕ ಮತ್ತು ಮಾಹಿತಿ ಅಧಿಕಾರಿ ಸತೀಶ ನಾಯಕ ಮಾತನಾಡಿ ಸುರಕ್ಷಿತ ಇಂಟರ್ನೆಟ್ ಒಂದು ಮಾಧ್ಯಮ. ಒಂದು ಡಿವೈಸ್‌ನಿಂದ ಇನ್ನೊಂದು ಡಿವೈಸ್ ಗೆ ಡಿಜಿಟಲ ಸಾಮಾಜಿಕ ಮಾಧ್ಯಮ ಮುಖಾಂತರ ಮಾಹಿತಿಯನ್ನು ಸಂಗ್ರಹಣೆ ರವಾನಿಸುತ್ತದೆ. ಸುರಕ್ಷಿತ ಅಂತರ್ಜಾಲದ ಆಯ್ಕೆಗಳು, ಮತ್ತು ಎಐನ ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಯ ಅಂಶಗಳ ಬಗ್ಗೆ ಅಧಿಕಾರಿಗಳಿಗೆ ಅರಿವು ಮತ್ತು ಜಾಗೃತಿ ಮೂಡಿಸಿದರು ಹಾಗೂ ( ಎಐ ) ಕೃತಿಕ ಬುದ್ಧಿಮತ್ತೆ ಕುರಿತು ವಿವರವಾಗಿ ತಿಳಿಸಿಕೊಟ್ಟರು. ಮೊಬೈಲ್ ಕರೆಗಳಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಬಾರದು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 