ಬೆಂಗಳೂರು: ಹೆಚ್ಚುತ್ತಿರುವ ಮಾಲಿನ್ಯ ತಡೆಯಲು ಮುಂದಾಗಿರುವ ಸಕರ್ಾರ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ನೀಡಲು ಚಿಂತನೆ ನಡೆಸುತ್ತಿದೆ ಎಂದು ಶುಕ್ರವಾರ ತಿಳಿದುಬಂದಿದೆ.
ಅಧಿಕಾರಿಗಳಿಗೆ ಎಲೆಕ್ಟ್ರಿಕ್ ವಾಹನಗಳ ನೀಡುವಿಕೆ ಕುರಿತಂತೆ ನಿನ್ನೆಯಷ್ಟೇ ಸಕರ್ಾರದ ಮುಖ್ಯ ಕಾರ್ಯದಶರ್ಿ ಟಿ.ಎಂ.ವಿಜಯಭಾಸ್ಕರ್ ಅವರು ಸಭೆ ನಡೆಸಿದ್ದು, ಸಭೆಯಲ್ಲಿ ಸಕರ್ಾರಿ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ವಾಹನಗಳ ನೀಡುವಿಕೆ ಕುರಿತಂತೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.
ಮಾಲಿನ್ಯವನ್ನು ಗಮನದಲ್ಲಿಟ್ಟುಕೊಕಂಡು ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳಿಗೆ ಬದಲಾಗಿ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ಸಭೆಯಲ್ಲಿ ವಿಜಯ ಭಾಸ್ಕರ್ ಅವರು ತಿಳಿಸಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿ, ಎಲೆಕ್ಟ್ರಿಕ್ ವಾಹನಗಳಿಂದ ಎದುರಾಗುವ ಸಾಧಕ ಹಾಗೂ ಬಾಧಕಗಳ ಕುರಿತಂತೆ ಅಧ್ಯಯನ ನಡೆಸುವಂತೆಯೂ ಸಕರ್ಾರ ಸೂಚಿಸಿದೆ.
ಇದಲ್ಲದೆ ಸಕರ್ಾರಿ ಇಲಾಖೆಗಳಲ್ಲಿ ವಾಹನಗಳ ಹೊರಗುತ್ತಿಗೆ ಸೇವೆಗಳನ್ನೂ ರದ್ದುಗೊಳಿಸಲು ಸಕರ್ಾರ ಚಿಂತನೆ ನಡೆಸಿದೆ. ಹೊರಗುತ್ತಿಗೆ ವಾಹನಗಳ ಬದಲಾಗಿ ನಗರದಲ್ಲೇ ಇರುವ ಖಾಸಗಿ ಕ್ಯಾಬ್ ಸೇವೆಗಳನ್ನು ಬಳಕೆ ಮಾಡುವಂತೆ ತಿಳಿಸಿದೆ. ಇದರಿಂದ ಇಲಾಖೆಗೆ ಎದುರಾಗುತ್ತಿರುವ ಹೆಚ್ಚುವರಿ ಹೊರೆ ಕಡಿಮೆಯಾಗಲಿದೆ ಎಂದು ತಿಳಿಸಿದೆ ಎಂದು
ಹೇಳಿದ್ದಾರೆ.