ಜಿಲ್ಲಾ ಮಾದ್ಯಮ ರತ್ನ ಪ್ರಶಸ್ತಿಗೆ ಸಚೀನ ಇಂಡಿ ಆಯ್ಕೆ

ಜಿಲ್ಲಾ ಮಾದ್ಯಮ ರತ್ನ ಪ್ರಶಸ್ತಿಗೆ ಸಚೀನ ಇಂಡಿ ಆಯ್ಕೆ   Sachin Indy selected for District Media Ratna Award

ಇಂಡಿ   25:  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಜಿಲ್ಲಾ ಘಟಕದ ವತಿಯಿಂದ ನೀಡಲಾಗುವ 2025 ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಲೋಕದರ್ಶನ ದಿನ ಪತ್ರಿಕೆಯ ಇಂಡಿ ತಾಲ್ಲೂಕಿನ ವರದಿಗಾರರಾದ ಸಚೀನ ಎಸ್ ಇಂಡಿ ಅವರನ್ನು ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಜಿಲ್ಲಾ ಅಧ್ಯಕ್ಷರಾದ    ಮಹಮ್ಮದ್ ಯೂಸಿಫ್ ನೇವಾರ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನಾಯಕ ಸೊಂಡೂರ ಹಾಗೂ ಇಂಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಧ್ವನಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್ ಎಂ ಬಿರಾದಾರ ಅವರು ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ಇಂಡಿ ತಾಲೂಕು ಕಾರ್ಯನಿರತ ಪತ್ರಕರ್ತರ  ಧ್ವನಿ ಸಂಘದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ  ಸದಸ್ಯರಾದ ಆನಂದ ಅಗರಖೇಡ ರಾಜು ಶಿಂಧೆ ಉಮೇಶ ಹಿಂಗಣಿ ಯಲಗೊಂಡ ನಾಟಿಕಾರ  ನಿಂಗಪ್ಪ ಶರ್ಮಾ ಸೇರಿದಂತೆ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಕಾರ್ಯಕಾರಿಣಿ ಸದಸ್ಯರಾದ ಅಶೋಕ ನಾಯ್ಕೋಡ ಸೇರಿದಂತೆ ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ. ಇದೆ ದಿನಾಂಕ 27-07-2025 ರಂದು ರವಿವಾರ ವಿಜಯಪೂರ ನಗರದ ಗಾಂಧಿ ಭವನದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಸಚೀನ ಎಸ್ ಇಂಡಿ ಇವರಿಗೆ ಜಿಲ್ಲಾ ಮಾಧ್ಯಮ ರತ್ನ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.