ಶಬರಿಮಲೈ ದೇವಸ್ಥಾನ: ಸುಪ್ರೀಂ ಕೋಟರ್್ ಆದೇಶ ಮರುಪರಿಶೀಲನೆಗೆ ಮನವಿ

ಕಾರವಾರ 03: ಕೇರಳದ ಶಬರಿಮಲೈ ದೇವಸ್ಥಾನದಲ್ಲಿ ಮಹಿಳೆಯರು ದೇವಸ್ಥಾನವನ್ನು ಪ್ರವೇಶಿಸಬಹು ಎಂದು ಸುಪ್ರೀಂ ಕೋಟರ್್ ನೀಡಿರುವ ತೀಪರ್ು ಮರುಪರಿಶೀಲಿಸಿ ಎಂದು ಅಯ್ಯಪ್ಪ ದೇವಸ್ಥಾನದ ಆಡಳಿತ ಮಂಡಳಿ, ಹಿಂದೂ ಸಂಘಟನೆಯ ಕಾರ್ಯಕರ್ತರು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ನಗರದ ಕೋಣೆವಾಡದ ಅಯ್ಯಪ್ಪ ಸನ್ನಿಧಾನದಿಂದ ಮೆರವಣಿಗೆ ಹೊರಟ ಅಯ್ಯಪ್ಪ ಮಾಲಾಧಾರಿಗಳು, ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಪ್ರಮುಖರು, ನಗರದ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಗುರುಸ್ವಾಮಿ ರತ್ನಾಕರ್ ಕೇರಳದ ಶಬರಿಮಲೈ ದೇವಸ್ಥಾನದಲ್ಲಿ ಎಲ್ಲ ವಯಸ್ಸಿನ ಮಹಿಳೆಯರು ದೇವಸ್ಥಾನವನ್ನು ಪ್ರವೇಶಿಸಬಹುದೆಂದು ಸವರ್ೋಚ್ಚ ನ್ಯಾಯಾಲಯವು ತೀಪರ್ು ನೀಡಿದೆ. ಸವರ್ೋಚ್ಚ ನ್ಯಾಯಾಲಯವನ್ನು ಗೌರವಿಸುತ್ತೇವೆ. ಆದರೆ ಈ ತೀಪರ್ಿನಿಂದ ಶಬರಿಮಲೈಯ 1000 ವರ್ಷಗಳ ಪರಂಪರೆಯನ್ನು ಭಂಗಗೊಳಿಸಲಾಗಿದೆ. ಹೀಗಾಗಿ  ಅಯ್ಯಪ್ಪ ಭಕ್ತರ ಭಾವನೆಗಳಿಗೆ ನೋವು ಉಂಟಾಗಿದೆ ಎಂದರು.

ಹದಿನೆಂಟು ಬಂಗಾರದ ಮೆಟ್ಟಿಲುಗಳನ್ನು ಏರಲು ಪ್ರತಿಯೊಬ್ಬ ವೃತಧಾರಿಯು 48 ದಿನದ ವೃತಾಚರಣೆಯ ಮಾಡಿ ಹೋಗಬೇಕು, ಆದ್ದರಿಂದ ಸುಪ್ರೀಂ ಕೋಟರ್್ ನೀಡಿರುವ ತೀರ್ಪನ್ನು ಮರು ಪರಿಶೀಲಿಸಬೇಕು ಎಂದರು.

ನಗರಸಭಾ ಸದಸ್ಯೆ ಮಾಲಾ ಹುಲಸ್ವಾರ್ ಮಾತನಾಡಿ, ಪುರಾಣ ಪ್ರಸಿದ್ಧ ಪಡೆದ ಶಬರಿಮಲೈ ದರ್ಶನದ ವಿಚಾರವಾಗಿ ಸುಪ್ರೀಂ ಕೋಟರ್್ ನೀಡಿರುವ ತೀಪರ್ಿನಿಂದ ಬಹಳ ನೋವಾಗಿದೆ ಆದ ಕಾರಣ ಸುಪ್ರೀಂ ಕೋಟರ್್ ಈ ತೀರ್ಪನ್ನು ಮರು ಪರಿಶೀಲಿಸಬೇಕು ಎಂದು ವಿನಂತಿಸಿದರು.

ಪ್ರತಿಭಟನೆ ವೇಳೆ ಬಿಜೆಪಿಯ ಪ್ರಮುಖರಾದ ಮನೋಜ ಭಟ್ಟ, ನಯನಾ ನೀಲಾವರ, ಕಿಶನ್ ಕಾಂಬ್ಳೆ, ನಾಗೇಶ ಕುರಡೇಕರ, ಸಂದೇಶ ಶೆಟ್ಟಿ, ಅಶೋಕ ಕಾಮತ, ಶಿಲ್ಪಾ ನಾಯ್ಕ ಸೇರಿದಂತೆ ನೂರಾರು ಅಯ್ಯಪ್ಪ ಮಾಲಾಧಾರಿಗಳಿದ್ದರು.