ಆರ್ ಕೈಬಿಡಿ ಹಿ ಚುನಾವಣಾ ಆಯೋಗಕ್ಕೆ ಎಸ್ ಯು ಸಿ ಐ (ಸಿ) ಒತ್ತಾಯ.
SUCI (C) urges the Election Commission to drop R.
ಆರ್ ಕೈಬಿಡಿ ಹಿ ಚುನಾವಣಾ ಆಯೋಗಕ್ಕೆ ಎಸ್ ಯು ಸಿ ಐ (ಸಿ) ಒತ್ತಾಯ.
ಧಾರವಾಡ 02: ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಧಾರವಾಡ ಜಿಲ್ಲಾ ಸಮಿತಿಯಿಂದ ಇಂದು ನಗರದ ವಿವೇಕಾನಂದ ವೃತ್ತದಲ್ಲಿ ಮತಪಟ್ಟಿಯ ವಿಶೇಷ ತೀವೃತಮ ಪರಿಷ್ಕರಣೆ (ಎ???ಆರ್) ವಿರುದ್ಧ ಪ್ರತಿಭಟನೆ ಮಾಡಲಾಯಿತು. ದೇಶದಲ್ಲಿ ಅತ್ಯಂತ ವಿವಾದಕ್ಕೆ ಒಳಗಾದ ಮತ್ತು ದುಡಿಯುವ ಜನರ ಮೂಲಭೂತ ಹಕ್ಕುಗಳಿಗೆ ಸಂಚಕಾರ ತರುತ್ತಿರುವ ಎ???ಆರ್ ಕೈ ಬಿಡುವಂತೆ ಕೇಂದ್ರ ಚುನಾವಣಾ ಆಯೋಗವನ್ನು ಒತ್ತಾಯಿಸಲಾಯಿತು.
ಈ ಸಂಧರ್ಭದಲ್ಲಿ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸೆಕ್ರೆಟರಿಯೆಟ್ ಸದಸ್ಯರಾದ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ದೇಶದಲ್ಲಿ ಅತ್ಯಂತ ವಿವಾದಕ್ಕೆ ಒಳಗಾದಂತಹ ವಿಶೇಷ ತೀವ್ರತಮ ಪರಿಷ್ಕರಣೆ(ಎ???ಆರ್) ಕೋಟ್ಯಾಂತರ ಜನತೆಯಲ್ಲಿ ಆತಂಕ ಮೂಡಿಸಿದೆ. ಮತ ಪಟ್ಟಿಯ ಪರಿಷ್ಕರಣೆಯ ಉದ್ದೇಶ ಬಿಟ್ಟುಹೋದ ಮತದಾರರನ್ನು ಪಟ್ಟಿಯಲ್ಲಿ ಸೇರಿಸಿ ಮತದಾನದ ಹಕ್ಕನ್ನು ಜನತೆಗೆ ನೀಡುವುದು ಆಗಬೇಕೇ ವಿನಃ ಮತದಾನದ ಹಕ್ಕನ್ನು ಕಸಿಯುದಲ್ಲ. ಆದರೆ ಬಿಹಾರದಲ್ಲಿ ನಡೆದ ವಿದ್ಯಮಾನ ಇದಕ್ಕೆ ವಿರುದ್ಧವಾಗಿದೆ. ಬಿಹಾರ ರಾಜ್ಯದಲ್ಲಿ ಇದೇ ನವೆಂಬರ್ ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಇದರ ಪೂರ್ವಭಾವಿಯಾಗಿ ಚುನಾವಣಾ ಆಯೋಗವು ಎ???ಆರ್ ನ ಹೆಸರಿನಲ್ಲಿ ಮತಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಕೈ ಹಾಕಿದೆ. ಈ ಪರಿಷ್ಕರಣೆಯಲ್ಲಿ ಸುಮಾರು 65 ಲಕ್ಷಕ್ಕೂ ಹೆಚ್ಚು ಜನಗಳ ಹೆಸರನ್ನು ಮತ ಪಟ್ಟಿಯಿಂದ ಕೈ ಬಿಟ್ಟಿರುವುದು ಮತ್ತು ಬದುಕಿರುವವರನ್ನು ಮೃತರು ಎಂದು ಘೋಷಣೆ ಮಾಡಿರುವುದು 65 ಲಕ್ಷ ಜನರ ಬದುಕನ್ನು ಅಯೋಮಯಗೊಳಿಸಿದೆ.
ಇದಲ್ಲದೆ ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮತದಾರರ ಚೀಟಿ ಊರ್ಜಿತ ದಾಖಲೆಗಳಲ್ಲ ಎಂದು ಆಯೋಗವು ಆದೇಶ ನೀಡಿದೆ. ಚುನಾವಣಾ ಆಯೋಗವು ತಾನೇ ಫೋಟೋ ಲಗತಿಸಿ ನೀಡಿರುವ ಮತದಾರರ ಗುರುತಿನ ಚೀಟಿಯನ್ನು ಮೂಲಭೂತ ದಾಖಲೆ ಎಂದು ಒಪ್ಪುವುದಿಲ್ಲ ಎಂದಿರುವುದೇ ಬಹುದೊಡ್ಡ ವಿಪರ್ಯಾಸವಾಗಿದೆ. ಪ್ರಪಂಚದ ಬಹುದೊಡ್ಡ ಪ್ರಜಾಪ್ರಭುತ್ವ ದೇಶ ಎಂದು ಬಿಂಬಿಸುವ ಭಾರತ ದೇಶದಲ್ಲಿ ಚುನಾವಣಾ ಆಯೋಗವು ಅಪ್ರಜಾಂತಂತ್ರಿಕವಾಗಿ ಅಮಾನೀಯವಾಗಿ ಈ ದೇಶದ ಪ್ರಜೆಗಳಲ್ಲ ಎಂದು ಮುಗ್ಧ ಜನರನ್ನು ಬಿಂಬಿಸುತ್ತಿರುವುದು ಜನ ವಿರೋಧಿ ನಡೆಯಾಗಿದೆ. ವಿಪರ್ಯಾಸವೆಂದರೆ ವಿರೋಧ ಪಕ್ಷಗಳ ನಾಯಕರು ಮತಗಳ್ಳತನವಾಗಿದೆ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದು, ತಾವು ಅಧಿಕಾರದಲ್ಲಿದ್ದಾಗ ಇದರ ಪಲಾನುಭವಿಗಳೇ ಆಗಿದ್ದಾರೆ. ಚುನಾವಣಾ ಆಯೋಗ ಹಲವು ವರ್ಷಗಳಿಂದ ಒಂದಲ್ಲ ಒಂದು ರೀತಿಯಲ್ಲಿ ಇಂತಹ ಅಕ್ರಮಗಳನ್ನು ನಡೆಸುತ್ತಿರುವುದು ದೇಶದ ಜನತೆಗೆ ಪರಿಚಿತ ವಿಷಯವೇ ಆಗಿದೆ. ಚುನಾವಣೆಯಲ್ಲಿ ಮತಗಳ್ಳತನದಲ್ಲಿ ಇಂದಿನ ಯಾವುದೇ ಬಂಡವಾಳಶಾಹಿ ಪಕ್ಷ ಹೊರತಲ್ಲ ಹಾಗೂ ಬಂಡವಾಳಶಾಹಿ ವ್ಯವಸ್ಥೆ ಕೊಳೆತು ಹೋಗಿರುವ ಈ ಸಂದರ್ಭದಲ್ಲಿ ದುಡಿಯುವ ಜನಗಳ ನೈಜ ಸಮಸ್ಯೆಗಳಿಂದ ಜನತೆಯನ್ನು ವಿಮುಕಗೊಳಿಸುವುದೇ ಇದರ ಹುನ್ನಾರಾಗಿದೆ.” ಎಸ್ ಐ ಆರ್ ಜಾರಿಯಿಂದ ಜನರ ಮತ ಚಲಾಯಿಸುವ ಮೂಲಭೂತ ಹಕ್ಕು ಕಳೆದುಕೊಳ್ಳುವುದು ಅಷ್ಟೇ ಅಲ್ಲದೆ ದುಡಿಯುವ ಜನಗಳು ತಮ್ಮ ಬದುಕಿನ ಎಲ್ಲಾ ಹಕ್ಕುಗಳನ್ನು ಕಳೆದುಕೊಳ್ಳಲಿದ್ದಾರೆ. ಆದ್ದರಿಂದ ಇದರ ವಿರುದ್ಧ ಬಲಿಷ್ಠ ಹೋರಾಟವನ್ನು ಕಟ್ಟಲು ಜನತೆ ಮುಂದೆ ಬರಬೇಕೆಂದು ಕರೆ ನೀಡಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಲಕ್ಷ್ಮಣ ಜಡಗನ್ನವರ ಪ್ರತಿಭಟನೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಇತ್ತೀಚೆಗೆ ಮುಕ್ತಾಯವಾದ ಕೆಲವು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಮತಪಟ್ಟಿಯಲ್ಲಿ ಲಕ್ಷಾಂತರ ನಕಲಿ ಮತದಾರರ ಸೇರೆ್ಡ, ನಕಲಿ ಮತದಾನ, ನಕಲಿ ಮತ್ತು ಅಮಾನ್ಯ ವಿಳಾಸಗಳಿರುವುದು ದೃಢಪಟ್ಟಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಮಂದಿ ವಾಸಿಸಲು ಸಾಧ್ಯವಾಗುವ ಮನೆಯ ವಿಳಾಸದಲ್ಲಿ 80 ಮತದಾರರು ದಾಖಲಾಗಿರುವ, ಒಬ್ಬನೇ ವ್ಯಕ್ತಿ ಹಲವಾರು ಮತಗಟ್ಟೆಗಳ ಪಟ್ಟಿಯಲ್ಲಿ ಇರುವುದು ಇಂತಹ ವಿದ್ಯಾಮಾನಗಳಿಂದ ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಜಗಜ್ಜಾಹಿರುಪಡಿಸಿದೆ. ಇದನ್ನು ಜನತೆ ಅರ್ಥ ಮಾಡಿಕೊಂಡು ದಿನನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳ ವಿರುದ್ಧ ಒಟ್ಟುಗೂಡಿ ಪ್ರತಿಭಟಿಸಬೇಕೆಂದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಭುವನಾ ಬಳ್ಳಾರಿ, ದೀಪಾ ಧಾರವಾಡ, ಶರಣು ಗೋನವಾರ, ಭವಾನಿ ಶಂಕರ ಎಸ್ ಗೌಡ, ಮಧುಲತಾ ಗೌಡರ್ ಸೇರಿದಂತೆ ಪಕ್ಷದ ಸದಸ್ಯರುಗಳು, ಬೆಂಬಲಿಗರು, ಹಿತೈಷಿಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 