ಎಸ್.ಎಸ್.ಎಲ್.ಸಿ ಹಂತ ಪ್ರಮುಖ ಘಟ್ಟ ಹಾಗೂ ಉತ್ತೀರ್ಣತೆ ಮಕ್ಕಲ ಭವಿಷ್ಯದ ದಿಕ್ಸೂಚಿ
SSLC stage is an important milestone and passing it is a compass for the future
ಧಾರವಾಡ 23 : ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಎಸ್.ಎಸ್.ಎಲ್.ಸಿ ಹಂತವು ಅತ್ಯಂತ ಪ್ರಮುಖ ಘಟ್ಟವಾಗಿದೆ. ಕಲಿಕಾ ಗುಣಮಟ್ಟ ಹಾಗೂ ಉತ್ತೀರ್ಣತೆ ಅವರ ಭವಿಷ್ಯದ ದಿಕ್ಸೂಚಿಯಾಗಿದೆ. ಎಂದು ರಾಷ್ಟ್ರೀಯ ಶೀಕ್ಷಕರ ಪೆಡ್ರೆಷನ್ ದ ರಾಷ್ಟ್ರಾ ಅಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು. ಅವರು 2025 ನೇ ಸಾಲಿನ ಖಖಐಅ ಪರೀಕ್ಷೆಯಲ್ಲಿ ಶೇಕಡಾ 100ರಷ್ಟು ಉತ್ತೀರ್ಣತೆ ಸಾಧಿಸಲು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘವು ರಚಿಸಿದ ಸರಳ ಕೈಪಿಡಿ ಬುಡುಗಡೆ ಮಾಡಿ ಮಾತನಾಡಿದರು. ಶಿಕ್ಷಣ ಮಂತ್ರಿಗಳಾದ ಮಧು ಬಂಗಾರ್ಪ ಅವರು ಮತ್ತು ಶಿಕ್ಷಣದ ಪ್ರಧಾನ ಕಾರ್ಯದರ್ಶಿ ರಶ್ಮೀ ಮಹೇಶ ಅವರ ಮಾರ್ಗದರ್ಶನದಲ್ಲಿ ಮಿಷನ್ 40+ ಜಾರಿ ಮಾಡಿದ್ದು ಉತ್ತಮ ಬೆಳವಣಿಗೆ ಆಗಿದೆ ಎಂದರು.ವಾರ್ಷಿಕ ಪರೀಕ್ಷೆಗೆ ಯ ಪಾಠ ಆಧಾರಿತ ಮೌಲ್ಯಾಂಕನ ಕೈಪಿಡಿ, ಏಖಇಂಃ ಯ ಮಾದರಿ ಪ್ರಶ್ನೆ ಪತ್ರಿಕೆಗಳು ಖಖಖಐಅ ಮಕ್ಕಳಿಗೆ ದಿಕ್ಸೂಚಿಯಾಗಿವೆ. ಇದನ್ನು ಅದ್ಯಯನ ಮಾಡಿ ಮಕ್ಕಳಿಗೆ ಸರಳವಾಗಿ ತಿಳಿಯುವಂತೆ ಕಿರು ಹೊತ್ತಿಗೆ ರಚಿಸಲಾಗಿದೆ ಎಂದು ಸಂಘದ ಅಧ್ಯಕ್ಷ ನಾರಾಯಣ ಭಜಂತ್ರಿ ತಿಳಿಸಿದರು. ಮಕ್ಕಳಿಗೆ ಇದು ಉಪಯುಕ್ತ ವಾದ ಕೈಪಿಡಿ ಆಗಿದೆ ಎಂದು ಸಂಪನ್ಮೂಲ ವ್ಯಕ್ತಿ ಡಾ, ಶಿವಾನಂದ ಕವಟಕೊಪ್ಪ ಹೇಳಿದರು.ಕಾರ್ಯದರ್ಶಿ ಬಿ ಜಿ ಬಶೆಟ್ಟಿ, ನಿವೃತ್ತ ನೌಕರರ ಸಹಾಕಾರಿ ಸಂಘದ ಅಧ್ಯಕ್ಷ ಗುರು ತಿಗಡಿ, ಹಂಗರಕಿ ಗ್ರಾಮ ಪಂಚಾಯತದ ಉಪಾಧ್ಯಕ್ಷ ಚನ್ನಬಸು ಚಿತ್ತೂರು, ಪ್ರಾಥಮಿಕ ಶಾಲಾ ಸಹಕಾರಿ ಸಂಘದ ಅಧ್ಯಕ್ಷ ಶಂಕರ ಗಟ್ಟಿ, ರಾಜ್ಯ ಸಂಪನ್ಮೂಲ ವ್ಯಕ್ತಿ ಡಾ, ಶಿವಾನಂದ ಕವಟಕೊಪ್ಪ,, ಕಾಶಪ್ಪ ದೊಡವಾಡ, ರಮೇಶ ತಳವಾರ, ಸಿದ್ಧಲಿಂಗ ಶಿವಶಿಂಪಿ, ಚಂದ್ರು ತಿಗಡಿ, ರಾಜು ಮಾಳವಾಡ, ನಾಗರಾಜ ತಳವಾರ, ಮುಂತಾದವರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 