ಎಸ್‌ಎಸ್‌ಎಲ್‌ಸಿ ಶಿಕ್ಷಣ, ವಿದ್ಯಾರ್ಥಿಗಳ ಪಾಲಿನ ಅಡಿಪಾಯ : ಬಾಬಾಸಾಹೇಬ ಪಾಟೀಲ
SSLC education is the foundation for students: Babasaheb Patil
ನೇಸರಗಿ 02: ಪ್ರಸಕ್ತವಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಇನ್ನು 45 ದಿನ ಹೆಚ್ಚಿನ ಸಮಯ ಓದಿಗೆ ಇದ್ದು, ಗಮನ ಹರಿಸಿ ಹೆಚ್ಚಿನ ಅಂಕ ಪಡೆದು ತಾವು ಓದಿದ ಶಾಲೆಗೆ, ಗ್ರಾಮಕ್ಕೆ, ತಮ್ಮ ಮನೆಗೆ ಹೆಸರು ತರುವ ಹಾಗೆ ತಾವು ಶ್ರಮ ವಹಿಸಿ ಅಭ್ಯಾಸ ಮಾಡಿ ಜೀವನದಲ್ಲಿ ಮುಂದೆ ಬರಬೇಕು ಎಂದು ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು. ಅವರು ರವಿವಾರದಂದು ಇಲ್ಲಿನ ನೇಸರಗಿ- ಮಲ್ಲಾಪೂರ ಗ್ರಾಮದ ಗಾಳೇಶ್ವರ ಶಿಕ್ಷಣ ಸಂಸ್ಥೆಯ ರೇವಣಸಿದ್ದೇಶ್ವರ ಆಂಗ್ಲ ಮಾಧ್ಯಮ ಶಾಲೆಯ 22 ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ನೂತನ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭ ಉದ್ದೇಸಿಸಿ ಮಾತನಾಡಿ ಗ್ರಾಮೀಣ ಮಟ್ಟದಲ್ಲಿ ಎಸ್.ಎಲ್.ಎಲ್.ಸಿ ವರೆಗೆ ಗ್ರಾಮೀಣ ಮಟ್ಟದಲ್ಲಿ ಓದುವ ಅವಕಾಶ ನಿಮಗೆಲ್ಲರಿಗೆ ಇದ್ದು , ಈ ಸಮಯದಲ್ಲಿ ಓದು, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಗ್ರಾಮೀಣ ಕ್ರೀಡೆಗಳಲ್ಲಿ ತಾವು ಪಾಲ್ಗೊಳ್ಳಬೇಕು
ಈ ಒಂದು ಗಾಳೇಶ್ವರ ಮಠದಲ್ಲಿ ಕಳೆದ 22 ವರ್ಷಗಳಿಂದ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಇದಕ್ಕೆ ಕಾರಣ ಮಠದ ಚಿದಾನಂದ ಶ್ರೀಗಳ ಸಹಕಾರ ಹಾಗೂ ಶಿಕ್ಷಕ ಸಿಬ್ಬಂದಿ ಪರಿಶ್ರಮ ಎಂದರು. ಕೆಎಲ್‌ಇ ನಿರ್ದೇಶಕರಾದ ವಾಯ್ ಎಸ್ ಪಾಟೀಲ ಮಾತನಾಡಿ ನಾವು ಬಾಲ್ಯದಲ್ಲಿ ಹೊಲಕ್ಕೆ ಹೋಗುವಾಗ ಈ ಮಠದಲ್ಲಿ ಆಟ ಆಡಿದ್ದೇವೆ, ಕೇವಲ ಮಠ ಅಷ್ಟೇ ಇದ್ದ ಅಂದು, ಇಂದು ಹೆಮ್ಮರವಾಗಿ ಬೆಳೆದು 22 ವರ್ಷಗಳ ಹಿಂದೆ ಆಂಗ್ಲ ಮಾಧ್ಯಮ ಶಾಲೆ ಸ್ಥಾಪನೆ ಮಾಡಿ ಶ್ರೀಗಳು ಹಾಗೂ ಹಿರಿಯರು ಸ್ಥಾಪನೆ ಮಾಡಿ ಇಂದು ಬೃಹತ್ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದರು. ಮಠದ ಕಾರ್ಯಧ್ಯಕ್ಷರಾದ ಚಿದಾನಂದ ಮಹಾಸ್ವಾಮಿಗಳು ಮಾತನಾಡಿ ಈ ಶಾಲೆಯ ಬೆಳವಣಿಗೆಗೆ ಅನೇಕ ಭಕ್ತರು, ಜನಪ್ರತಿನಿಧಿಗಳ ಸಹಾಯ ಸಹಕಾರದಿಂದ ಮಠ ಹಾಗೂ ಶಾಲೆ ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಹೊಂಡುತ್ತಿದ್ದು ಈ ಆಂಗ್ಲ ಮಾಧ್ಯಮ ಶಾಲೆಯ ಸದುಪಯೋಗ ಈ ಭಾಗದ ಜನರು ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಗಾಳೇಶ್ವರ ಶಿಕ್ಷಣ ಸಂಸ್ಥೆಯ ಛೇರಮನ್ನರಾದ ಶಿವನಗೌಡ ಪಾಟೀಲ, ಕೆ ಎಲ್ ಇ ಉಪಾಧ್ಯಕ್ಷರಾದ ಬಸವರಾಜ ತಾಟವಟಿ, ಕೆ ಎಲ್ ಇ ನಿರ್ದೇಶಕರಾದ ವಿಜಯ ಮೆಟಗುಡ,ಕ್ಷೇತ್ರ ಶಿಕ್ಷಣ ಅಧಿಕಾರಿ ಎ ಎನ್ ಪ್ಯಾಟಿ, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಾಯಕ ಪ್ರದ್ಯಾಪಕರಾದ ಡಾ ಶಾಂತಾ ಮಲ್ಲಿಕಾರ್ಜುನ ಪೋರಾಪುರ, ಎಸ್ ಎಮ್ ಗಡೆನ್ನವರ, ವಿಜಯ ಮಹಾಂತೇಶ ಅ ಪಾಟೀಲ, ಡಾ. ಪ್ರಕಾಶ ಹಳ್ಯಾಳ, ಗ್ರಾ ಪಂ ಅಧ್ಯಕ್ಷ ಅಶೋಕ ವಕ್ಕುಂದ, ಸುನೀಲ್ ಮರಕುಂಬಿ, ಕಾರ್ಯದರ್ಶಿ ಶಂಕರಗೌಡ ಗುರನಗೌಡರ, ಆಡಳಿತ ಮಂಡಳಿ ಸದಸ್ಯರಾದ ರುದ್ರಗೌಡ ಪಾಟೀಲ, ಯಲ್ಲಪ್ಪ ಬಂದ್ರಾಮ್, ಚನಗೌಡ ಗೌಡರ, ವೀರಭದ್ರ್ಪ ತಲ್ಲೂರ, ಚನ್ನಬಸಯ್ಯ ಪೂಜೇರಿ, ಚಂದ್ರಗೌಡ ಪಾಟೀಲ, ರವಿ ಹೊನ್ನಯ್ಯನವರ, ದುರಗಪ್ಪ ಚಿಕಬಸನವರ, ಬಸವರಾಜ ಗಡೆನ್ನವರ, ಶಾಲೆ ಮುಕ್ಯೋಪಾಧ್ಯಾಯರಾದ ಶರಣು ಮಾದಾಪೂರಮಠ , ಶಿಕ್ಷಣ ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಎಸ್ ಜಿ ಚಟ್ನಿಸ್ ನಡೆಸಿಕೊಟ್ಟರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 