ಹಿಂದೂ ಸಂಸ್ಕೃತಿಯನ್ನು ಉಳಿಸಿ ಎಸ್‌ಎಸ್‌ಕೆ ಸಮಾಜ ಶ್ರಮಿಸುತ್ತಿದೆ : ಸಂತೋಷ ಚನ್ನಪ್ಪನವರ

ಗದಗ 04:  ಹಿಂದೂ  ಸಮಾಜದ ಉಳಿವಿಗಾಗಿ ಎಸ್‌ಎಸ್‌ಕೆ ಸಮಾಜ ಸದಾ ಹೋರಾಟ ಮಾಡುತ್ತಾ ಬಂದಿದೆ ಎಂದು ದತ್ತಾ ಡೆವಲಪರ್ಸ್‌ನ ಪಾಲುದಾರರಾದ ಸಂತೋಷ ಚನ್ನಪ್ಪನವರ ಅವರು ಹೇಳಿದರು.  

ನಗರದ ಹಳೇ ಸರಾಫ್ ಬಜಾರದ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಬಾಸ್ಕರಸಾ ಪವಾರ ಸಭಾಂಗಣದ ದಸರಾ ದರಬಾರ ವೇದಿಕೆಯಲ್ಲಿ ಜರುಗಿದ  “ನಮ್ಮೂರು ದಸರಾ-24” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು  ಅವರು ಮಾತನಾಡಿ, ಮೈಸೂರು ನಂತರ ಗದುಗಿನಲ್ಲಿ ಎಸ್‌ಎಸ್‌ಕೆ ಸಮಾಜ ದಸರಾ ಮಹೋತ್ಸವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದೆ. ಹಿಂದೂ ಸಮಾಜ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಎಸ್‌ಎಸ್‌ಕೆ ಸಮಾಜ ಸದಾ ಶ್ರಮಿಸುತ್ತಿದೆ ಎಂದು ಹೇಳಿದರು. ಇದಕ್ಕೂ ಮುನ್ನ ಅವರು ಜಗದಂಬಾ ದೇವಿ ಹಾಗೂ ತುಳಜಾ ಭವಾನಿ ದೇವಿಯ ದರ್ಶನ ಪಡೆದರು.  

ದತ್ತಾ ಡೆವಲಪರ್ಸ್‌ನ ಇನ್ನೋರ್ವ ಪಾಲುದಾರರಾದ ರಾಘು ಭಾರಡ ಮಾತನಾಡಿ,  ನವರಾತ್ರಿ ಹಬ್ಬ ಇರುವುದ ರಾಷ್ಟ್ರಧರ್ಮ ಗಟ್ಟಿಗೊಳಿಸಲು ಮತ್ತು ಹಿಂದೂ ಹಬ್ಬಗಳು ಸನಾತನ ಧರ್ಮದ ಗಟ್ಟಿ ಬೇರುಗಳಾಗಿವೆ ಇಂತಹ ಹಬ್ಬಗಳಲ್ಲಿ  ಜ್ಷಾನ, ಯೋಗ, ಭಜನೆ ಹಾಗೂ ಭಗವದ್ಗಿತೆ ಹೇಳಿ ಕೊಡಬೇಕು.  ಧರ್ಮ ಉಳಿಯಲು ಇವುಗಳು ಮುಖ್ಯವಾಗಿವೆ ಎಂದು ಹೇಳಿದರು.  

 ಎಸ್‌.ಎಸ್‌.ಕೆ ಸಮಾಜದ ಗೌರವ ಕಾರ್ಯದರ್ಶಿ ವಿನೋಧ ಶಿದ್ಲಿಂಗ ಪ್ರಾಸ್ತಾವಿಕವಾಗಿ ಮಾತನಾಡಿ, ದತ್ತಾ ಡೆವಲಪರ್ಸ  ಪಾಲುದಾರರು ಸಮಾಜಮುಖಿ ಕೆಲಸ ಮಾಡುತ್ತಿರುವದಲ್ಲದೆ ಈ ಹಿಂದೆ ನಗರದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ಮಾಡಿ ಜನರಿಗೆ ಸಾಕ್ಷಾತ್ ತಿರುಪತಿ ವೆಂಕಟೇಶ್ವರನ ದರ್ಶನ ಮಾಡಿಸಿದ್ದಾರೆ ಎಂದು ಹೇಳಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗದಗ  ಎಸ್‌.ಎಸ್‌.ಕೆ ಸಮಾಜ ಪಂಚ ಕಮೀಟಿ ಅಧ್ಯಕ್ಷ ಫಕೀರಸಾ ಬಾಂಡಗೆ ಅವರು ಮಾತನಾಡಿ, ದಸರಾ ಹಬ್ಬವನ್ನು ಎಸ್‌ಎಸ್‌ಕೆ ಸಮಾಜವು ಅತೀ ವಿಜೃಂಬಣೆಯಿಂದ ಆಚರಿಸಿಕೊಂಡು ಬರುತ್ತಿದೆ. ದತ್ತಾ ಡೆವಲಪರ್ಸ ಅವರು ಸಾಮಾಜಿಕ ಸೇವೆ ಹಾಗೂ ಉದ್ಯಮ ರಾಜ್ಯಾದ್ಯಂತ ವಿಸ್ತರಿಸಲಿ ಎಂದು ಹಾರೈಸಿದರು.  

ವೇದಿಕೆ ಮೇಲೆ  ಪಂಚ ಕಮೀಟಿಯ ಉಪಾಧ್ಯಕ್ಷ ರಾಜು ಬದಿ, ರವಿ ಶಿದ್ಲಿಂಗ, ದಸರಾ ಕಮೀಟಿಯ ಚೇರಮನ್‌ರಾದ ವಿಷ್ಣುಸಾ ಶಿದ್ಲಿಂಗ ಉಪಸ್ಥಿತರಿದ್ದರು.  

ಈ ಸಂದರ್ಭದಲ್ಲಿ ಪಂಚ ಕಮೀಟಿಯ ಸದಸ್ಯರಾದ ಎನ್‌ಆರ್‌.ಖಟವಟೆ, ವಿಶ್ವನಾಥಸಾ ಖಟವಟೆ, ಸುರೇಶಕುಮಾರ ಬದಿ, ಬಲರಾಮ ಬಸವಾ, ಮಾರುತಿ ಪವಾರ,  ಶ್ರೀನಿವಾಸ ಬಾಂಡಗೆ, ಪರಶುರಾಮಸಾ ಬದಿ, ಅನಿಲ್ ಖಟವಟೆ, ಗಣಪತಸಾ ಜಿತೂರಿ, ವಿನೋಧ ಬಾಂಡಗೆ, ಪ್ರಕಾಶ ಬಾಕಳೆ, ಗಂಗಾಧರ ಹಬೀಬ, ಅಂಬಾಸಾ ಖಟವಟೆ, ಸಮಾಜದ  ಮಾಜಿ ಅಧ್ಯಕ್ಷ ಪ್ರಭು ಬುರಬುರೆ, ಸಮಾಜದ ಹಿರಿಯರಾದ ವಾಸುದೇವಸಾ ಖಟವಟೆ,  ರವೀಂದ್ರಸಾ ಭಾರಡ, ವಿಠ್ಠಲ ಬಾಂಡಗೆ,   ವಿಶ್ವನಾಥ ಸೂಳಂಕಿ, ಸಾಗರ ಪವಾರ, ರಾಘವೇಂದ್ರ ಬಾಂಡಗೆ, ಸತೀಶ ದವಳೆ, ಶ್ರೀಕಾಂತ ಬಾಕಳೆ, ಮಾಧು ಬದಿ, ಸುಧೀರ ಕಾಟೀಗರ, ಶ್ರೀಕಾಂತ ಅರಸಿದ್ದಿ, ಶ್ರೀನಿವಾಸ ಬಾಂಡಗೆ, ಉಮಾ ಬೇವಿನಕಟ್ಟಿ, ಸ್ನೇಹಲತಾ ಕಬಾಡಿ, ಕಸ್ತೂರಿಬಾಯಿ ಬಾಂಡಗೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.  

ಈ ಕಾರ್ಯಕ್ರಮದಲ್ಲಿ ಜಿ.ಎನ್‌.ಹಬೀಬ ನಿರೂಪಿಸಿದರು. ಮೋತಿಲಾಲಸಾ ಪೂಜಾರಿ ವಂದಿಸಿದರು.