ದಕ್ಷಿಣ ಕೊರಿಯಾ: 66 ಸಾವು, ಕರೋನಾ ಸೋಂಕಿತರ ಸಂಖ್ಯೆ 7,869 ಕ್ಕೆ ಏರಿಕೆ

 ಸಿಯೋಲ್, ಮಾರ್ಚ್ 12, ದಕ್ಷಿಣ ಕೊರಿಯಾದಲ್ಲಿ  ಮಾರಕ ಕರೋನ ಸೋಂಕಿಗೆ ಈವರೆಗೆ ಒಟ್ಟು 66 ಜನರು ಬಲಿಯಾಗಿದ್ದು, ಸೋಂಕಿತರ  ಸಂಖ್ಯೆ  ಗಣನೀಯವಾಗಿ ಹೆಚ್ಚಾಗುತ್ತಿದೆ.ಕಳದೆ  24 ಗಂಟೆಗಳ ಅವಧಿಯಲ್ಲಿ 114 ಹೊಸ  ದೃ ಡಪಡಿಸಿದ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ ಈಗ 7,869 ಕ್ಕೆ ಏರಿಕೆಯಾಗಿದೆ. ಹೊಸದಾಗಿ  ಐದು ಸಾವಿನ ಪ್ರಕರಣ ವರದಿಯಾಗಿದೆ ಪೂರ್ಣ ಚೇತರಿಸಿಕೊಂಡ ನಂತರ ಇನ್ನೂ 45 ರೋಗಿಗಳನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದ್ದು, ಈವರೆಗೆ  ಆಸ್ಪತ್ರೆಯಿಂದ  ಬಿಡುಗಡೆಯಾದವರ  ಸಂಖ್ಯೆ ಸಹ  333 ಕ್ಕೆ ಏರಿಕೆಯಾಗಿದೆ. ಕಳೆದ ದೆ  ಫೆಬ್ರವರಿ 19 ರಿಂದ ಮಾರ್ಚ್ 11 ರವರೆಗೆ 7,838 ಹೊಸ ಪ್ರಕರಣಗಳು ವರದಿಯಾಗಿವೆ. ಸಿಯೋಲ್ನ ಆಗ್ನೇಯಕ್ಕೆ 300 ಕಿ.ಮೀ ದೂರದಲ್ಲಿರುವ ಡೇಗು ಮತ್ತು ಅದರ ಸುತ್ತಮುತ್ತಲಿನ ಉತ್ತರ ಜಿಯೊಂಗ್ಸಾಂಗ್ ಪ್ರಾಂತ್ಯದಲ್ಲಿ ಸೋಂಕಿನ  ಸಂಖ್ಯೆ ಕ್ರಮವಾಗಿ 5,867 ಮತ್ತು 1,143 ಕ್ಕೆ ಏರಿಕೆಯಾಗಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.