ಎಸ್ ಎಂ ಖೇಡಗಿ ಭೀಮಾತೀರದ ದೈತ್ಯ ರಂಗ ಪ್ರತಿಭೆ: ಸಂತೋಷ ಬಂಡೆ
SM Khedagi is a giant stage talent of Bhimatir: Santhosh Bande
ಎಸ್ ಎಂ ಖೇಡಗಿ ಭೀಮಾತೀರದ ದೈತ್ಯ ರಂಗ ಪ್ರತಿಭೆ: ಸಂತೋಷ ಬಂಡೆ
ಲೋಕದರ್ಶನ ವರದಿ
ಇಂಡಿ 02: ಇಡೀ ಬದುಕೇ ಕಾಗದ ಮತ್ತು ಪೆನ್ನಿನ ನಡುವೆ ಕಳೆದ ಭೀಮಾತೀರದ ರಂಗಭೀಷ್ಮ ಸರ್ದಾರ ಖೇಡಗಿಯವರು ಪ್ರೀತಿ, ಮಾತು, ಚಿಂತನೆ ಹಾಗೂ ರಂಗಸಂಘಟನೆಯ ಕಾಯ ರೂಪವಾಗಿದ್ದಾರೆ. ಸಾಮಾಜಿಕ ಕಾಳಜಿ, ಬಿಗು ನಿಲುವು, ಭವಿಷ್ಯತ್ತಿನ ಪರಿಣಾಮಗಳ ಚಿಂತನೆಗಳಿಂದ ಎಸ್ ಎಂ ಖೇಡಗಿ ಅವರ ನಾಟಕಗಳು ಇಂದಿಗೂ ಅವಿಸ್ಮರಣೀಯವಾಗಿವೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.ಶನಿವಾರದಂದು ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಜಗಲಿ ಕೇಂದ್ರದ ವತಿಯಿಂದ ಹಮ್ಮಿಕೊಂಡ ’ಎಸ್ ಎಂ ಖೇಡಗಿ ಅವರ ರಂಗ ಬದುಕು’ ಕುರಿತ ಆನ್ ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಅವರು ಮಾತನಾಡಿದರು.
ಎಲೆ ಮರೆಯ ಕಾಯಿಯಂತೆ ನಾಟ್ಯಕಲಾ ಸೇವೆಯಲ್ಲಿ ತನ್ನ ಜೀವಮಾನವನ್ನೇ ಸವೆಸಿರುವ ಕನ್ನಡ ನಾಡು ಕಂಡ ಅಪರೂಪದ ಕಲಾತಪಸ್ವಿ ಎಸ್ ಎಂ ಖೇಡಗಿ ಅವರು ರಂಗಭೂಮಿಯ ಭೀಮ. ಅವರ ಸಾಮಾಜಿಕ ನಾಟಕಗಳು ರೂಢಿಗತ ಸಾಮಾಜಿಕ ಚೌಕಟ್ಟಿನವು. ಸಮಕಾಲೀನ ಸಮಾಜದ ಗುಣ ದೋಷಗಳನ್ನು ಹೇಳಿ, ನಿವಾರಿಸುವ ಸೂತ್ರವನ್ನು ನಾಟಕಗಳ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.ಮನುಜನಲ್ಲಿರುವ ದ್ವೇಷ, ಅಸೂಯೆ, ವಿಶ್ವಾಸದ್ರೋಹ, ಅನ್ಯಾಯ, ಅತ್ಯಾಚಾರದಂತಹ ಗುಣಗಳನ್ನು ತೊಳೆದು ಹಾಕಿ ಶಾಂತಿ, ಸೌಹಾರ್ದತೆ, ಭಾವೈಕ್ಯತೆ, ಶ್ರಮಜೀವತ್ವ, ಸಾಂಸಾರಿಕ ಗುಣ, ಪರಂಪರೆ, ಸಂಸ್ಕೃತಿಗಳ ಪ್ರೇಮವನ್ನು ತಮ್ಮ ನಾಟಕಗಳಲ್ಲಿ ಹದವಾಗಿ ಒಡಮೂಡಿಸಿ, ನಾಟಕದ ಮೂಲಕ ಸಮಾಜ ಪರಿವರ್ತನೆ ಸಾಧ್ಯ ಎಂದು ತೋರಿಸಿಕೊಟ್ಟ ಭೀಮಾತೀರದ ಅಪ್ರತಿಮ ಪ್ರತಿಭೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ರಾಘವೇಂದ್ರ ಕುಲಕರ್ಣಿ ಮಾತನಾಡಿ, ಎಸ್ ಎಂ ಖೇಡಗಿಯವರ ನಾಟಕಗಳಲ್ಲಿ ಸ್ತ್ರೀ ಪಾತ್ರ ಕೇಂದ್ರಿತಕ್ಕೂ ಹೆಚ್ಚಿನ ಆದ್ಯತೆ ಇದೆ. ಸರ್ವ ಕಲೆಗಳ ತಾಯಿಯಾದ ನಾಟಕವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಂಡು ನಾಡಿನ ರಂಗಭೂಮಿಯನ್ನು ಶ್ರೀಮಂತಗೊಳಿಸಿದ ಧೀಮಂತರಿವರು ಎಂದು ಹೇಳಿದರು.ನಾಟಕಕಾರ ಎಸ್ ಎಂ ಖೇಡಗಿ, ಸಲೀಮಾ ಖೇಡಗಿ, ಡಾ ಚನ್ನಪ್ಪ ಕಟ್ಟಿ, ದೇವು ಮಾಕೊಂಡ, ಚಿದಂಬರ ಬಂಡಗರ, ಗೀತಯೋಗಿ, ವೈ ಜಿ ಬಿರಾದಾರ, ಸರೋಜನಿ ಮಾವಿನಮರ, ಡಾ ಸಂಗಮೇಶ ಮೇತ್ರಿ, ಸಿದ್ರಾಮಪ್ಪ ಮಾರನೂರ, ಡಾ ಮಲ್ಲಿಕಾರ್ಜುನ ಮೇತ್ರಿ, ಮಲ್ಲಿಕಾರ್ಜುನ ಯರಗುದ್ರಿ, ರಾಚು ಕೊಪ್ಪ, ನಿಂಗಣ್ಣ ಬಿರಾದಾರ, ಡಾ ರಾಜಶ್ರೀ ಮಾರನೂರ, ರವಿ ಅರಳಿ, ಆರ್ ವ್ಹಿ ಪಾಟೀಲ, ಸಂಗನಗೌಡ ಹಚ್ಚಡದ, ಬಸವರಾಜ ಕರಜಗಿ, ಶಂಕರ ಕೊಳೇಕರ, ಸಿಂದಗಿಯ ಕೇಶವ ಬಮ್ಮಜೋಗಿ, ಎಸ್ ಕೆ ಗುಗ್ಗರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.ಸಿ ಆರ್ ಪಿ ಶ್ರೀಧರ ಹಿಪ್ಪರಗಿ ಸ್ವಾಗತಿಸಿ,ಪರಿಚಯಿಸಿದರು. ಶಿಕ್ಷಕಿ ಬಿ ಸಿ ಭಗವಂತಗೌಡರ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 