ಮಾ 12:ಜ್ಯೋತಿರಾದಿತ್ಯ ಸಿಂಧ್ಯಾ ಕಾಂಗ್ರೆಸ್ ತೊರೆದಿರುವುದು ನೋವಿನ ಮತ್ತು ದುರದೃಷ್ಟಕರ ಸಂಗತಿ ಎಂದು ಯುವ ನಾಯಕ, ರಾಜಸ್ಥಾನದ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಹೇಳಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾರ ಪಕ್ಷದಿಂದ ಬೇರೆಯಾಗುವುದನ್ನು ನೋಡುವುದೇ ಬೇಸರದ ವಿಚಾರ, ಪಕ್ಷದೊಳಗೆ ಸಹಭಾಗಿತ್ವದ ವಿಷಯದಲ್ಲಿನ ಸಮಸ್ಯೆ ಶೀಘ್ರವೇ ಬಗೆಹರಿಯಲಿ ಎಂದು ಆಶಿಸುವುದಾಗಿಯೂ ಸಚಿನ್ ಟ್ವೀಟ್ ಮಾಡಿದ್ದಾರೆ.ಮಧ್ಯಪ್ರದೇಶದ ಹಿರಿಯ ನಾಯಕ ದಿಗ್ವಿಜಯ ಸಿಂಗ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಪಶ್ಚಿಮಬಂಗಾಳದ ಕಾಂಗ್ರೆಸ್ ಧುರೀಣ ಅಧೀರ್ ಚೌಧರಿ ಸೇರಿದಂತೆ ಅನೇಕ ನಾಯಕರು ಸಿಂಧಿಯಾ ಅವಕಾಶವಾದಿ ನಡೆಯನ್ನು ಟೀಕಿಸಿದ್ದಾರೆ. ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಅವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಜೊತೆ ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಹೀಗಾಗಿ ಪೈಲಟ್ ಮುಂದಿನ ನಡೆ ನಿಗೂಢವಾಗಿದ್ದು ಎಲ್ಲರ ಗಮನ ಸಚಿನ್ ಅವರ ಮೇಲಿದೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ