ಜರ್ಮನಿಯ ಹನೌನಲ್ಲಿ ಗುಂಡಿನ ದಾಳಿ : ಎಂಟುಸಾವು

ಫ್ರಾಂಕ್ ಫರ್ಟ್, ಫೆ 20, ಪಶ್ಚಿಮ ಜರ್ಮನ್ ನಗರಿ ಹನೌನಲ್ಲಿ ಬುಧವಾರ ರಾತ್ರು ನಡೆದ ಎರಡು ಗುಂಡಿನ ದಾಳಿಗಳಲ್ಲಿ ಎಂಟು ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಹನೌನ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಎರಡು ಗುಂಡಿನ ದಾಳಿ ನಡೆದಿತ್ತು. ಗಾಢ ಬಣ್ಣದ ವಾಹನ ದಾಳಿಯ ಸ್ಥಳದಲ್ಲಿ ಹೊಕ್ಕಿತ್ತು ಎಂದು ಇದಕ್ಕೂ ಮುನ್ನ ಪೊಲೀಸರು ತಿಳಿಸಿದ್ದರು.  ಘಟನೆಗೆ ಕಾರಣರಾದವರ ಪತ್ತೆ ಕಾರ್ಯಾಚರಣೆ ಪ್ರಗತಿಯಲ್ಲಿದೆ. ನಗರದಲ್ಲಿ ಎರಡು ಶಿಶಾ ಬಾರ್ ಗಳ ಬಳಿ ಈ ಘಟನೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.  ಹನೌ, ಫ್ರಾಂಕ್ ಫರ್ಟ್ ನಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿದ್ದು ಸುಮಾರು ಒಂದು ಲಕ್ಷ ಜನಸಂಖ್ಯೆ ಹೊಂದಿದೆ.