ಬೆಂಗಳೂರು, ಫೆ.19, ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿ ವಿಧಾನಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದು ಕೆಲವು ಹೊತ್ತು ಗದ್ದಲದ ವಾತಾವರಣ ನಿಮರ್ಾಣವಾದ ಪ್ರಸಂಗ ನಡೆಯಿತು. ವಿಧಾನಸಭೆಯಲ್ಲಿ ಇಂದು ಬೆಳಗ್ಗೆ ಸಾರ್ವಜನಿಕ ಹಿತಾಸಕ್ತಿಯ ವಿಷಯದಲ್ಲಿ ನಿಯಮ 69ರ ಮೇಲೆ ನಡೆದ ಚಚರ್ೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುವಾಗ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಘಟನೆಯನ್ನು ಪ್ರಸ್ತಾಪಿಸಿ, ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ನನ್ನ ಕಾನೂನು ಜ್ಞಾನದ ಪ್ರಕಾರ ಖಾದರ್ ಮಾಡಿರುವ ಭಾಷಣದಲ್ಲಿ ಅಂತಹ ಯಾವುದೇ ಅಂಶಗಳು ಇಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ಹೇಳಿಕೆ ನೀಡಿದ್ದರು. ಇದನ್ನು ಪ್ರಸ್ತಾಪಿಸಿದ ಯು.ಟಿ.ಖಾದರ್ ತಮ್ಮ ಭಾಷಣದಲ್ಲಿ, ಈಗಾಗಲೇ ದೇಶದಲ್ಲಿ ಬೆಂಕಿ ಹೊತ್ತಿಕೊಂಡಿದೆ.
ರಾಜ್ಯದಲ್ಲಿ ಇದನ್ನು ಜಾರಿಮಾಡಿದರೆ ರಾಜ್ಯದಲ್ಲಿಯೂ ಬೆಂಕಿ ಹೊತ್ತಿಕೊಳ್ಳಲಿದೆ ಎಂದು ಹೇಳಿದ್ದರು. ಅದು ದೇಶದ್ರೋಹ ಅಲ್ಲ. ಅಂತಹ ಅಂಶ ಅವರ ಭಾಷಣದಲ್ಲಿ ಇರಲಿಲ್ಲ. ದೇಶದ್ರೋಹ ಎಂದರೆ ರಾಜ್ಯದ ಹಿತಕ್ಕೆ ವಿರುದ್ಧವಾಗಿ ಜನರನ್ನು ಎತ್ತಿಕಟ್ಟುವ ಪ್ರಚೋದನಾತ್ಮಕ ಭಾಷಣ ಮಾಡಿದಾಗ ಮಾತ್ರ ಅದು ದೇಶದ್ರೋಹವಾಗುತ್ತದೆ. ಇದರ ಬಗ್ಗೆ ಕೇದಾರನಾಥ್ ಸಿಂಗ್ /ಬಿಹಾರ ರಾಜ್ಯ ಪ್ರಕರಣದಲ್ಲಿ ಬಹಳ ಸ್ಪಷ್ಟವಾಗಿ ಸುಪ್ರೀಂಕೋಟರ್್ ಹೇಳಿದೆ ಎಂದು ವಿವರಿಸಿದರು. ಬೆಂಕಿ ಹಚ್ಚುತ್ತೇವೆ ಎಂದು ಖಾದರ್ ಹೇಳಿಲ್ಲ. ಬೆಂಕಿ ಬೀಳುತ್ತದೆ ಎಂದು ಹೇಳಿದ್ದರು. ಇವೆರಡೂ ವಿಭಿನ್ನ ಅರ್ಥವಿದೆ. ಇಲ್ಲಿನ ಮೆನ್ಸಿಯಾ ಮುಖ್ಯ. ಯಾವ ಉದ್ದೇಶದಲ್ಲಿ ಹೇಳಿದ್ದಾರೆ ಎಂಬುದನ್ನು ಇಲ್ಲಿ ಪರಿಗಣಿಸಬೇಕಾಗುತ್ತದೆ ಎಂದು ಹೇಳಿದರು.
ಈ ವೇಳೆ ಸಚಿವ ಜೆ.ಸಿ.ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿ, ಯು.ಟಿ.ಖಾದರ್ ಅವರ ಪ್ರಕರಣ ನ್ಯಾಯಾಲಯದಲ್ಲಿದೆ. ದೇಶದ್ರೋಹ ಹೌದೋ ಅಲ್ಲವೋ ಎಂಬುದನ್ನು ನ್ಯಾಯಾಲಯ ತೀಮರ್ಾನಿಸುತ್ತದೆ. ಇಲ್ಲಿ ಅದರ ಬಗ್ಗೆ ಚಚರ್ೆ ಮಾಡಬಾರದು. ಅದು ಪ್ರಕರಣದ ಮೇಲೆ ಪ್ರಭಾವ ಉಂಟಾಗಲಿದೆ ಎಂದು ಹೇಳಿದರು. ಆಗ ಕಾಂಗ್ರೆಸ್ ಸದಸ್ಯ ಆರ್ವಿ. ದೇಶಪಾಂಡೆ ಮಧ್ಯಪ್ರವೇಶಿಸಿ, ಇಲ್ಲಿ ಮಾತನಾಡಿದರೆ ಅದು ನ್ಯಾಯಾಲಯದ ಮೇಲೆ ಪ್ರಭಾವ ಬೀರುವುದಿಲ್ಲ. ಸಿದ್ದರಾಮಯ್ಯ ಅವರು ಕೆಲವು ಸುಪ್ರೀಂಕೋಟರ್್ ಮತ್ತು ಹೈಕೋಟರ್್ನ ತೀಪುಗಳನ್ನು ಉಲ್ಲೇಖಿಸಿದ್ದಾರೆ ಅಷ್ಟೇ ಎಂದು ಸಮಥರ್ಿಸಿಕೊಂಡರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಸ್ಪೀಕರ್ ಉಭಯ ಕಡೆಯವರನ್ನು ಸಮಾಧಾನ ಪಡಿಸಿ ಸಿದ್ದರಾಮಯ್ಯ ಅವರಿಗೆ ಮಾತನಾಡಲು ಅವಕಾಶ ಕಲ್ಪಿಸಿದರು. ಸಿದ್ದರಾಮಯ್ಯ ಮಾತನಾಡುವಾಗ ಪದೇ ಪದೇ ಆಡಳಿತ-ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇದ್ದವು.