ಸ್ಕಾಟ್ಲಹಮ್, ಮಾ 12, ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ಸೋಂಕು (ಕೋವಿಡ್ – 19) ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಡೆನ್ಮಾರ್ಕ್ ನ ಎಲ್ಲಾ ಶಾಲಾ – ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ 14 ದಿನಗಳ ಕಾಲ ರಜೆ ಘೋಷಿಸಲಾಗಿದೆ.“ಎಲ್ಲಾ ಶಾಲೆ ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು 14 ದಿನಗಳ ಕಾಲ ವಾಪಸ್ ಮನೆಗೆ ಕಳುಹಿಸಲಾಗುವುದು. ಇದು ಪ್ರಮುಖ ಹುದ್ದೆಗಳಲ್ಲಿ ಇರದ ನಾಗರಿಕ ಸೇವಕರಿಗೂ ಅನ್ವಯವಾಗಲಿದೆ” ಎಂದು ಡ್ಯಾನಿಷ್ ಪ್ರಧಾನಿ ಮೆಟ್ಟಿ ಫ್ರೆಡಿಕ್ರಸನ್ ಹೇಳಿದ್ದಾರೆ.ನೂರಕ್ಕೂ ಹೆಚ್ಚು ಜನರನ್ನು ಒಳಗೊಳ್ಳುವ ಎಲ್ಲ ಬಗೆಯ ಸಮಾರಂಭ ನಡೆಸುವುದನ್ನು ಕೂಡ ರದ್ದುಪಡಿಸಲಾಗಿದೆ. ಈವರೆಗೆ ಡೆನ್ಮಾರ್ಕ್ ನಲ್ಲಿ 514 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.