ಹೊಸೂರ ಗ್ರಾಮದಲ್ಲಿ ಎಸ್ಸಿ.ಎಸ್ಟಿ ಕುಂದುಕೊರತೆ ಸಭೆ
SC.ST grievance meeting in Hosur village
ಯರಗಟ್ಟಿ, 17 : ಯವಕರು ದುಷ್ಟರಿಂದ ದೂರವಿದ್ದು ಕಾನೂನುಗಳನ್ನು ಪಾಲಿಸಿ ಹಿರಿಯರಿಗೆ ಗೌರವ ನೀಡಿ ಒಳ್ಳೆಯ ವಿದ್ಯಾಭ್ಯಾಸ ಮಾಡಿದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಮುರಗೋಡ ಠಾಣೆಯ ಸಿಪಿಅಯ್ ಆಯ್.ಎಮ್.ಮಠಪತಿ ಯುವಕರಿಗೆ ತಿಳಿ ಹೇಳಿದರು.
ಸಮೀಪದ ಹೊಸೂರ ಗ್ರಾಮದ ಡಾ. ಅಂಬೇಡ್ಕರ್ ದಲಿತ ಕಾಲೋನಿಯಲ್ಲಿ ನಡೆದ ಎಸ್ಸಿ.ಎಸ್ಟಿ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಇಂದಿನ ಯುವಕರು ಮೋಜು ಮಸ್ತಿಗಾಗಿ ಕಾಲೇಜುಗಳಿಗೆ ಬೈಕ್ ಮೇಲೆ ಹೆಲ್ಮೇಟ್ ಇಲ್ಲದೆ ತೆರಳುವದು ಗುಂಪುಗಾರಿಕೆ, ಪುಂಡರ ಹಾಗೂ ಮಾದಕ ವ್ಯಸನಿಗಳ ಗೆಳೆತನ ಬೇಳೆಸಿಕೊಂಡು ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿರುವದು ರಸ್ತೆಯ ಅಪಘಾತಗಳಲ್ಲಿ ಪ್ರಾಣ ಹಾನಿ, ಅಂಗಾಗಗಳ ಊನ ಮಾಡಿಕೊಂಡು ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಸ್ಮಾರಕವಾಗದೆ ಮಾರಕವಾಗುತ್ತಿರುವದು ಕಳವಳಕಾರಿಯಾಗಿದೆ. ಮಕ್ಕಳನ್ನು ಶಾಲೆ ಕಾಲೇಜುಗಳಿಗೆ ಕಳಿಸುವದಷ್ಟೆ ಪಾಲಕರ ಕಾರ್ಯವಾಗದೆ ಅವರ ಮೇಲೆನಿಗಾ ಇಟ್ಟು ಅವರ ಚಲನವಲನಗಳನ್ನು ಗಮನಿಸಿ ಅವರಿಗೆ ಪಾಲಕರು ಮಾರ್ಗದರ್ಶನ ಮಾಡಬೇಕು ಇಲ್ಲವಾದರೆ ಪ್ರತಿನಿತ್ಯ ಠಾಣೆಗೆ ಬರುವ ಪ್ರಕರಣಗಳಲ್ಲಿ ತಂದೆ ತಾಯಿಯರನ್ನು ಹೊರಹಾಕಿ ಅವರ ವೃದ್ದಾಪ ಜೀವನದಲ್ಲಿ ಮುಳ್ಳಾಗುತಿದ್ದಾರೆ ಅಲ್ಲದೆ ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವದು ಹೆಚ್ಚಾಗುತ್ತಿದೆ ಎಂದರು.
ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಸರ್ಕಾರ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅತಿ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತಿದ್ದು ಆರ್ಥಿಕ ಸಾಹಯ ಪಡೆದುಕೊಂಡು ತಮ್ಮ ಭವಿಷ್ಯ ಕಟ್ಟಿಕೊಳ್ಳಬೇಕು. ಯಾವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣವೇ ಸರ್ವ ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು. ಎಸ್.ಎಸ್.ಎಲ್.ಸಿ. ಪಿಯುಸಿ, ಪದವಿ ಪೂರೈಸಿದ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣದಡಿಗೆ ಗಮನ ಹರಿಸಬೇಕು. ಆದೂ ಸಾಧ್ಯವಾಗದೆ ಇದ್ದಲ್ಲಿ ಸ್ವ ಉದ್ಯೋಗ ಕೈಗೊಳ್ಳಲು ತರಬೇತಿ ಪಡೆದು ಸರ್ಕಾರದ ಸಾಹಯಧನದಲ್ಲಿ ಉದ್ಯಮಿಗಳಾಗಿ ಇತರರಿಗೆ ಉದ್ಯೋಗ ನಿಡುವತ್ತ ಗಮನ ಹರಿಸಬೇಕೆಂದರು.
ಈ ಸಂದರ್ಭದಲ್ಲಿ ದಲಿತ ಕಾಲೋನಿಯ ಜನತೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಅವುಗಳಿಗೆ ಪರಿಹಾರ ಕಂಡುಕೊಂಡರು. ಫುಂಡಲಿಕ ಇಂಗಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯಮಂತ್ರಿ ಪ್ರಶಸ್ತಿ ವಿಜೇತ ಸಿಪಿಆಯ್ ಆಯ್.ಎಮ್. ಮಠಪತಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಮಧುಮತಿ ಜುಮೇತ್ರಿ ಅವರನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಪೋಲಿಸ್ ಸಿಬ್ಬಂದಿಗಳಾದ ಎಫ್.ಎಮ್.ಮದ್ಲಿ, ಸುರೇಶ ಹುಂಬಿ, ಗ್ರಾಪಂ ಉಪಾಧ್ಯಕ್ಷ ಬಸವರಾಜ ಪೆಂಟೇದ, ಗ್ರಾಪಂ ಸದಸ್ಯರಾದ ಅಪ್ಪು ಈಳಿಗೇರ, ಮುಶೆಪ್ಪ ಜಡಿ, ಬಸವ್ವ ಗಾಣಿಗೇರ, ಜಯಶ್ರೀ ಇಂಗಳಗಿ, ಮಡಿವಾಳಪ್ಪ ಕಮತಗಿ, ಮಲ್ಲಿಕಾರ್ಜುನ ಕರಡಿಗುದ್ದಿ, ಸಂಜು ಪಾಟೀಲ, ಸುರೇಶ ಬಾಳೆಕುಂದರಗಿ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ಸಂಜು ಜುಮೇತ್ರಿ, ಅಕ್ಷಯ ಗಡ್ಡಿ, ಹಣಮಂತ ಮಲಮೇತ್ರಿ, ಶಂಕರ ಹಿರುನವರ, ಶೋಭಾ ಮಲಮೇತ್ರಿ, ಸುಧಾ ಹಿರುನವರ, ಮನಿಕಂಠ ಮಲಮೇತ್ರಿ ರಾಮಪ್ಪ ಹಿರೂನವರ, ಶಿವಪ್ಪ ಹಿರೂನವರ, ಸುನಂದಾ ಗಡ್ಡಿ ಸೇರಿದಂತೆ ಇನ್ನಿತರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 