ಎಸ್ಸಿ ಎಸ್ಟಿ, ಇತರೆ ಹಿಂದುಳಿದ ಬಡ ಜನರಿಗೆ ಉತಾರ ನೀಡಬೇಕು: ಡಿಎಸ್‌ಎಸ್ ಮುಖಂಡ ಚಿನ್ನಪ್ಪ ಗಗ್ಗರಿ ಆಗ್ರಹ

ಎಸ್ಸಿ ಎಸ್ಟಿ, ಇತರೆ ಹಿಂದುಳಿದ ಬಡ ಜನರಿಗೆ ಉತಾರ ನೀಡಬೇಕು: ಡಿಎಸ್‌ಎಸ್ ಮುಖಂಡ ಚಿನ್ನಪ್ಪ ಗಗ್ಗರಿ ಆಗ್ರಹ SC, ST, other backward poor people should be given a chance: DSS leader Chinnappa Gaggari demands

ಪಾಲಬಾವಿ 07:  ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ಸರ್ವೇ ನಂಬರ್ 14 ,17, 61, 62, 72, 58 ಮತ್ತು 59 ರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಾಗೂ ಇತರೆ ಹಿಂದುಳಿದ ಬಡಜನರು ಸುಮಾರು 50 ವರ್ಷಗಳ ಕಾಲದ ಹಿಂದಿನಿಂದಲೂ ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದವರಿಗೆ ಕಂಪ್ಯೂಟರ್ ಉತಾರ ನೀಡುವಂತೆ ಕುಡಚಿ ಮತಕ್ಷೇತ್ರದ ಜನಪ್ರಿಯ ಶಾಸಕ ಮಹೀಂದ್ರ ತಮ್ಮಣ್ಣವರ ರವರಿಗೆ ದಲಿತ ಮುಖಂಡ ಚಿನ್ನಪ್ಪ ಗಗ್ಗರಿಯವರ ನೇತೃತ್ವದಲ್ಲಿ ಲಕ್ಕಪ್ಪ ಹೊಸಾಲಿ, ಮಾರುತಿ ಅಜ್ಜಪ್ಪಗೋಳ, ಸೇರಿದಂತೆ ಮಹಿಳೆಯರು, ಗ್ರಾಮಸ್ಥರು ಸೇರಿಕೊಂಡು ಮನವಿ ಸಲ್ಲಿಸಿದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಎಸ್‌ಎಸ್ ಮುಖಂಡ ಚಿನ್ನಪ್ಪ ಗಗ್ಗರಿ, ಹಂದಿಗುಂದ ಗ್ರಾಮದಲ್ಲಿ ಮಸಣ ಮಟ, ಗಾಯರಾಣ,  ಹಾಗೂ ಗೋಮಾಳದಲ್ಲಿ ವಾಸವಿರುವ ಪ.ಜಾ/ಪ.ಪಂ ಹಾಗೂ ಇತರೆ ಹಿಂದೂಳಿದ ಬಡ ಜನರು ಮನೆ, ಪತ್ರಾಸ್, ಸೆಡ್ ಹಾಗೂ ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ . ಅಂತವರಿಗೆ ಗ್ರಾಮ ಪಂಚಾಯತಿಯಿಂದ ಉತಾರ ನೀಡಲು ಕ್ರಮಕೈಗೊಳ್ಳಬೇಕು. ಪ.ಜಾ/ಪ.ಪಂ ಜಾತಿಗೆ ಸೇರಿದ ಸುಮಾರು 1200 ಕ್ಕಿಂತಲೂ ಅಧಿಕ ಮನೆಗಳಿದ್ದು, ಹಾಗೂ ಇತರೆ ಹಿಂದೂಳಿದ ಬಡ ಜನರ 1800  ಕ್ಕಿಂತಲೂ ಅಧಿಕ ಮನೆಗಳಿದ್ದು ಒಟ್ಟು ಸುಮಾರು 3000 ಕ್ಕಿಂತಲೂ ಹೆಚ್ಚಿನ ಮನೆಗಳಿರುತ್ತವೆ.  

ನಾವು ಸುಮಾರು 50 ರಿಂದ 60 ವರ್ಷಗಳ ಅಧಿಕದಿಂದಲೂ ಹಂದಿಗುಂದ ಗ್ರಾಮದ ಸರ್ವೆ ನಂ.14, 17, 61, 62, 72, 58 ಮತ್ತು 59 ರಲ್ಲಿ ವಾಸವಿದ್ದೇವೆ. ಹಾಗೂ ನಾವು ವಾಸವಿದ್ದ ಸಮಯದಿಂದ ಇಲ್ಲಿಯವರೆಗೂ ಸರ್ಕಾರದಿಂದ ನಮಗೆ ನಮ್ಮ ವಾಸ ಸ್ಥಳಗಳದ ಮನೆಗಳು, ಪತ್ರಾಸ್ ಶೇಡ್, ಗುಡಿಸಲಾಗಿರಬಹುದು ಇವುಗಳ ಅಧಿಕೃತವಾಗಿ ನಮ್ಮ ಹೆಸರಿನಲ್ಲಿ ಉತಾರಗಳು ಇರುವುದಿಲ್ಲ. ಇದರಲ್ಲಿ ಶೇಕಡಾ 80ಅ ರಷ್ಟು ಮನೆಗಳನ್ನು ಗ್ರಾಮ ಪಂಚಾಯತಿಯಿಂದ ಬರುವ ವಿವಿಧ ಯೋಜನೆಗಳಲ್ಲಿ ಮಂಜೂರಾಗಿರುವ ಮನೆಗಳಿವೆ ಜೊತೆಗೆ ಆಗಿನ ಸಮಯದಲ್ಲಿ ಆ ಮನೆಗಳ ಜಿಪಿಎಸ್ ಸಹ ಆಗಿರುತ್ತದೆ. ಗ್ರಾಮ ಪಂಚಾಯತ ಹಂದಿಗುಂದ ಕಾರ್ಯಾಲಯದಲ್ಲಿ ಈ ಮನೆಗಳಿಂದ ಮನೆ ಕರ, ನಳದ ಕರ ಹಾಗೂ ಹುಬ್ಬಳ್ಳಿ ವಿದ್ಯುತ್ ಸರಬರಾಜ ನಿಗಮದಿಂದ ಕರೆಂಟ ಬಿಲ್ನ್ನು ಸಹ ಪಾವತಿಸಿದ್ದೇವೆ. ಮನೆ ಮಂಜೂರಾಗಿನಿಂದಲೂ ಎಲ್ಲಾ ರೀತಿಯ ಕರವನ್ನು ಕಟ್ಟಿದರೂ ಸಹ ಈ ಎಲ್ಲ ಮನೆಗಳಿಗೆ ಗ್ರಾಮ ಪಂಚಾಯತಿಯಿಂದ ಕಂಪ್ಯೂಟರ್ ಉತಾರ ನೀಡಿರುವುದಿಲ್ಲ.  

ಅದಕ್ಕಾಗಿ ಶೀಘ್ರವೇ ಗ್ರಾಮ ಪಂಚಾಯಿತಿ ವಿಶೇಷ ಗ್ರಾಮಸಭೆ ಕರೆದು ಗ್ರಾಮಸ್ಥರಿಗೆ ಉತ್ತಾರ್ ನೀಡಬೇಕು ಎಂದರು. ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಪರಗೌಡ ಪಾಟೀಲ, ಹನುಮಂತ ಗಸ್ತಿ, ಚಿನ್ನಪ್ಪ ಗಗ್ಗರಿ, ಮಹಾಲಿಂಗ ಕಾಳೆ, ಉಪೇಂದ್ರ ಹಾದಿಮನಿ, ಬಸವರಾಜ ಮೇತ್ರಿ, ಲಕ್ಕಪ್ಪ ಹೊಸಾಲಿ, ಮಾರುತಿ ಅಜ್ಜಪ್ಪಗೋಳ, ಕಾಶಪ್ಪ ಹೊಸಾಲಿ, ಕಸ್ತೂರಿ ಹೊಸಾಲಿ, ಬಂಗಾರೆವ್ವಾ ಗಡದಿ, ಮಹಾದೇವಿ ದೇವರವರ ಇದ್ದರು.ಬಾಕ್ಸ್‌ ಲೈನ್ ==="ಕುಡಚಿ ಮತಕ್ಷೇತ್ರವು ಸೇರಿದಂತೆ ಬೆಳಗಾವಿ ಜಿಲ್ಲೆ ಹಾಗೂ ರಾಜ್ಯಾದ್ಯಂತ ಸರ್ಕಾರಿ ಗಾಯರಾಣಗಳಲ್ಲಿ ವಾಸವಾಗಿರುವ ಸಾವಿರಾರು ಕುಟುಂಬಗಳಿಗೆ ನಿವೇಶನವಿಲ್ಲ, ಮನೆಗಳ ಹಕ್ಕುಪತ್ರಗಳಿಲ್ಲ, ಪಂಚಾಯತ್ ರಾಜ್ಯ ಇಲಾಖೆಗೆ ಸಂಬಂಧಪಟ್ಟಂತೆ ಕರಪಾವತಿಸುತ್ತಾರೆ. ಈ ಸಮಸ್ಯೆಯು ಸರ್ಕಾರದ ಹಂತದಲ್ಲಿದೆ. ಸರ್ಕಾರವು ಚಿಂತನೆ ಮಾಡುತ್ತಿದೆ ಸದ್ಯದಲ್ಲಿ ಇದಕ್ಕೆಲ್ಲ ಪರಿಹಾರ ಸಿಗುತ್ತದೆ.