ರಷ್ಯಾ; ಶಾಲೆಯೊಂದರಲ್ಲಿ ಗುಂಡಿನ ದಾಳಿ-ಓರ್ವ ಸಾವು

ಬ್ಲಗೋವೇಷನ್ಕ್ಸ್, ರಷ್ಯಾ, ನ 14 :       ರಷ್ಯಾದ ಪೂರ್ವ ನಗರ ಬ್ಲಗೋವೇಷನ್ಕ್ಸ್ನ ಕಾಲೇಜೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಮೃತಪಟ್ಟು, ಮೂರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ.   

ಗಾಯಗೊಂಡವರಲ್ಲಿ ಒಬ್ಬರ ಯುವಕ ಮತ್ತು ಇಬ್ಬರು ಅಪ್ರಾಪ್ತರು ಸೇರಿದ್ದಾರೆ. ಈ ಗುಂಡಿನ ದಾಳಿನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಒಂದು ವಿಡಿಯೋದಲ್ಲಿ ಪೊಲೀಸ್ ವಾಹನ ಕಟ್ಟಡದ ಹೊರಗೆ ನಿಂತಿರುವುದು ಹಾಗೂ ಮತ್ತೊಂದರಲ್ಲಿ ಯುವಕ ನೆಲದ ಮೇಲೆ ಬಿದ್ದಿರುವ ದೃಶ್ಯಗಳಿವೆ.   

ತಕ್ಷಣ  ಆ ಪ್ರದೇಶದಲ್ಲಿ ಜನರನ್ನು ಚದುರಿಸಲಾಗಿದೆ ಎಂದು ಪ್ರಾದೇಶಿಕ ಶಿಕ್ಷಣ ಮತ್ತು ವಿಜ್ಞಾನ ಸಚಿವಾಲಯ ಸ್ಪುಟ್ನಿಕ್ ಗೆ ಮಾಹಿತಿ ನೀಡಿದೆ.