ಸಿರಿಯಾದಲ್ಲಿ ಮಾನವೀಯ ನೆರವು ಕೇಂದ್ರಗಳನ್ನು ಹೆಚ್ಚಿಸಲಿರುವ ರಷ್ಯಾ

ಖಮೇಶ್ಲಿ, ನ 19  :    ಯುದ್ಧ ಪೀಡಿತ ಸಿರಿಯಾ ದೇಶದಲ್ಲಿ ಅಳವಡಿಸಿರುವ ಮಾನವೀಯ ನೆರವು ವಿತರಣಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲು ರಷ್ಯಾ ಮುಂದಾಗಿದೆ.     ರಷ್ಯಾ ರಕ್ಷಣಾ ಸಚಿವಾಲಯದ ಸಿರಿಯಾದ ಪುನರ್ವಸತಿ ಕೇಂದ್ರದ ಮಾಹಿತಿ ಪ್ರಕಾರ, ಇಲ್ಲಿಯವರೆಗೆ ಮೂರು ಹೊಸ ಮಾನವೀಯ ನೆರವು ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.     ಸಿರಿಯಾದಲ್ಲಿ ಮಾನವೀಯ ದುರಂತಗಳಿಗೆ ಗುರಿಯಾದ ಪ್ರದೇಶಗಳಿಗೆ ಇಲಿಯುಶಿನ್ 2-76 ಬಹುಪಯೋಗಿ ವಿಮಾನವನ್ನು ಬಳಸಿಕೊಂಡು ಭೂಮಿ ಮತ್ತು ವಾಯು ಸಾರಿಗೆ ಮೂಲಕ ನೆರವು ಒದಗಿಸುತ್ತಿದೆ.     ರಷ್ಯಾ ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದ್ದು, ಸೇನಾ ಸಾರಿಗೆ ವಿಮಾನವನ್ನು ಬಳಸಿಕೊಂಡು ಸಿರಿಯಾದ ಖಮೇಶ್ಲಿ ಪ್ರಾಂತ್ಯಕ್ಕೆ 15 ಮೆಟ್ರಿಕ್ ಟನ್ ಮಾನವೀಯ ನೆರವಿನ ವಸ್ತುಗಳನ್ನು ಸಾಗಿಸಲಾಗಿದೆ. ಇದನ್ನು ಸಿರಿಯನ್ ಅರಬ್ ರಿಪಬ್ಲಿಕ್ ನ ಆಗ್ನೇಯ ಭಾಗಕ್ಕೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.     ಈ ನೆರವು ಗೋದಿ, ಅಕ್ಕಿ,ಸಕ್ಕರೆ, ಟೀ ಮತ್ತು ಅತಿ ಅಗತ್ಯದ ವಸ್ತುಗಳನ್ನು ಒಳಗೊಮಡಿದ್ದು, ಆರು ಸ್ಥಳೀಯ ಮಾನವೀಯ ನೆರವು ಕೇಂದ್ರಗಳಿಗೆ ರವಾನಿಸಲಾಗುತ್ತಿದೆ.     ಸಿರಿಯಾದಲ್ಲಿ ಕದನ ವಿರಾಮ ಜಾರಿಗೊಳಿಸುವ ಹೊಣೆ ಹೊತ್ತುಕೊಂಡಿರುವ ರಷ್ಯಾ ನಿರಂತರವಾಗಿ ಮಾನವೀಯ ನೆರವನ್ನು ಒದಗಿಸುತ್ತಿದೆ.