ಸರಾಪಿ ಅಂಗಡಿ ಕಳ್ಳನ ಬಂಧಿಸುವಲ್ಲಿ ಗ್ರಾಮೀಣ ಪೊಲೀಸರು ಯಶಸ್ವಿ
Rural police successful in arresting drug shoplifter
20,07,250 ರೂ. ಮೌಲ್ಯದ ಬೆಳ್ಳಿ ಮತ್ತು 150000 ಮೌಲ್ಯದ ಟಾಟಾ ಇಂಡಿಕಾ ಕಾರ್‌ನ್ನು ವಶ
ಬೆಳಗಾವಿ 08: ಬಂಗಾರ ಅಂಗಡಿಯಲ್ಲಿ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದು, ಆತನಿಂದ ಸುಮಾರು 20,07,250 ರೂ. ಮೌಲ್ಯದ ಬೆಳ್ಳಿ ಮತ್ತು 150000 ಮೌಲ್ಯದ ಟಾಟಾ ಇಂಡಿಕಾ ಕಾರ್‌ನ್ನು ವಶಪಡಿಸಿಕೊಂಡಿದ್ದಾರೆ.ತುಮಕೂರ ಕೊರಟಗೆರೆ ಕಾಳಿದಾಸ ಬಡಾವಣೆ, ಹಾಲಿ ಬೆಂಗಳೂರು ಲಗ್ಗೇರೆ ಮಾರ್ಕೇಟ್ ನಿವಾಸಿ ಶ್ರೀನಿವಾಸ ಎನ್ ಉರ್ ಶೀನಾ ನರಸಯ್ಯಾ(37) ಬಂಧಿತ ಆರೋಪಿಯಾಗಿದ್ದಾನೆ.
ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಮಚ್ಛೆ ಗ್ರಾಮದ ವಾಘವಾಡೆ ಕ್ರಾಸ್ ಬಳಿ ಇರುವ ಸಾರಾಫಿ ಅಂಗಡಿಯಲ್ಲಿ 2026 ಜನವರಿ 18ರಂದು ಕಳ್ಳತನ ನಡೆದ ಬಗ್ಗೆ ಮಹೇಶ ಗೋಕುಲ ಕಾಕತಿಕರ ಅವರು ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಬೆಳಗಾವಿ ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು, ಸಹಾಯಕ ಪೊಲೀಸ್ ಆಯುಕ್ತರು, ಬೆಳಗಾವಿ ಗ್ರಾಮೀಣ ಉಪವಿಭಾಗ ಅವರ ಮಾರ್ಗದರ್ಶನದಲ್ಲಿ ಠಾಣೆಯ ಪೊಲೀಸ್ ನೀರೀಕ್ಷಕ ನಾಗನಗೌಡ್ರ ಅವರ ನೇತೃತ್ವದಲ್ಲಿ ಪಿಎಸ್‌ಐ ಸಂತೋಷ ದಳವಾಯಿ, ಲಕ್ಕಪ್ಪ ಜೋಡಟ್ಟಿ, ಮತ್ತು ಸಿಬ್ಬಂದಿ ಜನರ ವಿಶೇಷ ತಂಡಗಳನ್ನು ರಚನೆ ಮಾಡಿ ವಿಶೇಷ ತಂಡದಿಂದ 2026 ಇಪ್ರಿಲ್ 7ರಂದು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆರೋಪಿ ಗೆಳೆಯರೊಂದಿಗೆ ಕೂಡಿಕೊಂಡು ಇದೇ ಅಂಗಡಿಯಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆತನಿಂದ ಸುಮಾರು 20,07,250 ರೂ. ಮೌಲ್ಯದ 8ಕೆಜಿ. 29ಗ್ರಾಂ ಬೆಳ್ಳಿ ಮತ್ತು 150000 ಮೌಲ್ಯದ ಟಾಟಾ ಇಂಡಿಕಾ ಕಾರ್ ನಂ. ಕೆಎ-03/ಎಸಿ-8668 ವಶಪಡಿಸಿಕೊಂಡಿದ್ದಾರೆ.ಕಳ್ಳತನಕ್ಕೆ ಬಳಸಿದ ಒಟ್ಟು 21,57,250 ರೂ. ಮೌಲ್ಯದ ವಸ್ತುಗಳನ್ನು ವವಶಪಡಿಸಿಕೊಳ್ಳಲಾಗಿದೆ. ತನಿಖಾ ತಂಡದಲ್ಲಿ ಬೆಳಗಾವಿ ಪೊಲೀಸ್ ಠಾಣೆಯ ನಾಗನಗೌಡ ಕಟ್ಟಿಮನಿಗೌಡ್ರ, ಪೊಲೀಸ್ ಇನ್ಸ್‌ಪೆಕ್ಟರ್ ಸಂತೋಷ ದಳವಾಯಿ, ಪಿಎಸ್‌ಯ ಲಕ್ಕಪ್ಪ ಜೋಡಟ್ಟಿ, ಮತ್ತು ಸಿಬ್ಬಂದಿಗಳಾದ ಸತೀಶ ನಾಯಕವಾಡ, ಶ್ರೀಕಾಂತ ಉಪ್ಪಾರ, ಮಾರುತಿ, ಕೊಟಬಾಗಿ, ಶಿವಾನಂದ ವರ್ಚಗಲ್ಲ, ಸಣ್ಣಪ್ಪ ಹಂಚಿನಮನಿ, ಬಾಳೇಶ ಪಡನಾಡ, ಆನಂದ ಕೊಟಗಿ, ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ರಮೇಶ ಅಕ್ಕಿ, ಮಹಾದೇವ ಕಾಶಿದ, ದೀಪಕ ದೊಡಗೋಣಿ ತಂಡ ಶ್ಲಾಘನೀಯ ಕೆಲಸ ಮಾಡಿದ್ದು, ಇವರ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು, ಉಪ ಆಯುಕ್ತರು, ಸಹಾಯಕ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 