ಗ್ರಾಮೀಣ ಅಭಿವೃದ್ಧಿ, ಮಹಿಳಾ ಸಭಲಿಕರಣಕ್ಕೆ ಆದ್ಯತೆ: ವಿಜಯಕುಮಾರ

ಗ್ರಾಮೀಣ ಅಭಿವೃದ್ಧಿ, ಮಹಿಳಾ ಸಭಲಿಕರಣಕ್ಕೆ ಆದ್ಯತೆ: ವಿಜಯಕುಮಾರ  Rural development, women empowerment a priority: Vijayakumar

ಬೈಲಹೊಂಗಲ 13: ತಾಲೂಕಿನ ವಕ್ಕುಂದ ಕಾರ್ಯ ಕ್ಷೇತ್ರ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲಿ ಹೊಸಕೇಂದ್ರ ಶ್ರೀ ವಾಲ್ಮೀಕಿ  ಕೇಂದ್ರ ಉದ್ಘಾಟನೆ ಕಾರ್ಯಕ್ರಮ ಜರುಗಿತು. 

ಕಾರ‌್ಯಕ್ರಮವನ್ನು ಅಧ್ಯಕ್ಷತೆ =ವಹಿಸಿದ ವಾಲ್ಮೀಕಿ ದೇವಸ್ಥಾನ ಕಮಿಟಿ ಅಧ್ಯಕ್ಷ ಬಸಪ್ಪ ತಳವಾರ,  ಉದ್ಘಾಟಕ ತಾಲೂಕಾ ಯೋಜನಾಧಿಕಾರಿ   ವಿಜಯಕುಮಾರ, ಮುಖ್ಯ ಅತಿಥಿಗಳಾದ ಬಸಪ್ಪ ಕೋರಿಕೊಪ್ಪ, ತಾಲೂಕು ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶೈಲಾ ಜಕ್ಕಣ್ಣವರ,  ವಲಯದ ಮೇಲ್ವಿಚಾರಕರಾದ ಜಗದೀಶ್ ಇವರ ಸಮ್ಮುಖದಲ್ಲಿ  ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು..                                   

ಶ್ರೀ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಯೋಜನೆಯ ತಾಲೂಕಾ ಯೋಜನಾಧಿಕಾರಿಗಳಾದ ವಿಜಯ ಕುಮಾರ ಮಾತನಾಡಿ ಕಾರ್ಯಕ್ರಮ ಉದ್ದೇಶಿಸಿ ಹೊಸ ಕೇಂದ್ರ ರಚನೆ ಉದ್ದೇಶಗಳ ಕುರಿತು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ನಡೆದು ಬಂದ ದಾರಿ, ಕ್ಷೇತ್ರದಿಂದ ನಡೆಯುವಂತಹ ಅಭಿವೃದ್ಧಿ ಕಾರ್ಯಗಳು, ಸ್ವಸಹಾಯ ಸಂಘಗಳ ಮಹತ್ವ, ಮಾಶಾಸನ ವಿತರಣೆ, ವಾತ್ಸಲ್ಯ ಮನೆ ರಚನೆ, ಜನಮಂಗಳ ಕಾರ್ಯಕ್ರಮ, ಸಮುದಾಯ ಅಭಿವೃದ್ಧಿ ವಿಭಾಗದಿಂದ ನೀಡುವ ಅನುದಾನಗಳ ಬಗ್ಗೆ ಬ್ಯಾಂಕ್ ಆಫ್ ಮಹಾರಾಷ್ಟ್ರದಿಂದ ಸ್ವಸಹಾಯ ಸಂಘದವರಿಗೆ ನೀಡುವ ಪ್ರಗತಿ ನಿಧಿ ಬಗ್ಗೆ  ಮಾಹಿತಿ ನೀಡಿದರು.        

ಅತಿಥಿ  ಬಸಪ್ಪ ತಳವಾರ ಅವರು ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯ ಜಾರಿಗೆ ತಂದಿರುವ ಕಾರ್ಯಕ್ರಮಗಳ ಉಪಯೋಗ ಎಲ್ಲರೂ ಪಡೆದುಕೊಳ್ಳಬೇಕು, ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಹೊಂದುವರೊಂದಿಗೆ ಕುಟುಂಬ ನಿರ್ವಹಣೆಯನ್ನು  ಜಾಣ್ಮೆಯಿಂದ ನಿರ್ವಹಿಸುವುದು ಅಗತ್ಯವಾಗಿದೆ. ಎಲ್ಲರೂ ಅನಾವಶ್ಯಕ ಖರ್ಚು ಮಾಡದೆ ಸ್ವ ಉದ್ಯೋಗ ರೂಪಿಸಿಕೊಂಡು ಸ್ವಾವಲಂಬಿಯಾಗಿ ಜೀವನ ನಡೆಸಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಇಡೀ ಕರ್ನಾಟಕದಾದ್ಯಂತ ವ್ಯಾಪಿಸಿದ್ದು, ಅದೆಷ್ಟೋ ಕುಟುಂಗಳಿಗೆ ದಾರೀದೀಪವಾಗಿದೆ. ತಮ್ಮ ಅವಶ್ಯಕತೆಗೆ ಪೂರಕವಾಗಿ ಸಾಲ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.        

ಕಾರ್ಯಕ್ರಮದ ನಿರೂಪಣೆ ಸೇವಾ ಪ್ರತಿನಿಧಿ ಭಾರತಿ,ಸ್ವಾಗತ ತಾಲೂಕಿನ ಜ್ಞಾನವಿಕಾಸ ಸಮನ್ವೇದಿಕಾರಿ ಶೈಲಾ ಜೆ,ವಂದನೆ   ಸೇವಾ ಪ್ರತಿನಿಧಿಗಳು ರಿಹಾನ,  ಸರ್ವಜ್ಞಾನವಿಕಾಸ ಸಂಘದ ಸದಸ್ಯರ  ಸಮ್ಮುಖದಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.