ಮುಂಬೈ, ಏ 1, ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಬುಧವಾರದ ಆರಂಭಿಕ ವಹಿವಾಟಿನಲ್ಲಿ ಸ್ಥಿರವಾಗಿದ್ದು ಒಂದು ಡಾಲರ್ ಬೆಲೆ 75.55 ರೂ ನಷ್ಟಿದೆ. ಮಂಗಳವಾರದ ವಹಿವಾಟಿನಲ್ಲಿ 6 ಪೈಸೆ ಏರಿಕೆ ಕಂಡಿದ್ದ ರೂಪಾಯಿ ಮೌಲ್ಯದ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮೌಲ್ಯ ಕ್ರಮವಾಗಿ 75.57 ಮತ್ತು 75.51 ರೂ ನಷ್ಟಿತ್ತು. ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಕುಸಿತ ಕಂಡುಬಂದಿದ್ದರೂ ಕೂಡ ರೂಪಾಯಿ ಮೌಲ್ಯ ಸ್ಥಿರತೆ ಕಾಯ್ದುಕೊಂಡಿದೆ.