ನೂರಕ್ಕೂ ಅಧಿಕ ಮುಸ್ಲಿಂ ಮಹಿಳೆಯರನ್ನು ಬಿಜೆಪಿಗೆ ಸೇರಿಸಿಕೊಂಡ ಶಾಸಕಿ ರೂಪಾಲಿ ನಾಯ್ಕ

ನೂರಕ್ಕೂ ಅಧಿಕ ಮುಸ್ಲಿಂ ಮಹಿಳೆಯರನ್ನು ಬಿಜೆಪಿಗೆ ಸೇರಿಸಿಕೊಂಡ ಶಾಸಕಿ ರೂಪಾಲಿ ನಾಯ್ಕ 

ಕಾರವಾರ 26: ಯಲ್ಲಾಪುರ ಉಪಚುನಾವಣಾ ಪ್ರಯುಕ್ತ ರಾಜ್ಯ ಕಮಿಟಿಯಿಂದ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮಹಿಳಾ ಮೋಚರ್ಾ ಉಸ್ತುವಾರಿಯಾಗಿ ನೇಮಕವಾಗಿರುವ ಶಾಸಕಿ  ರೂಪಾಲಿ ಎಸ್. ನಾಯ್ಕ ಮಂಗಳವಾರ ಯಲ್ಲಾಪುರ ನಗರದ ವಿವಿಧೆಡೆ ಸಂಚರಿಸಿ ಮತಯಾಚನೆ ಮಾಡಿದರು. ಸೋಮವಾರ ಸಹ  ಯಲ್ಲಾಪುರ ನಗರದ ವಾರ್ಡ ನಂ. 1, 4, 7 ರ ಕಲ್ಮಠ, ಕಾಳಮ್ಮನಗರ ಹಾಗೂ ತಿಲಕ ಚೌಕಗಳಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯಥರ್ಿ ಶಿವರಾಮ ಹೆಬ್ಬಾರರವರ ಪರವಾಗಿ ಪ್ರಚಾರ ಮಾಡಿದರು. ವಿವಿಧ  ಪಕ್ಷಗಳ ಕಾರ್ಯಕರ್ತರನ್ನು ಬಿಜೆಪಿಗೆ  ಸೇರ್ಪಡೆ ಮಾಡಿಕೊಂಡರು. ಶಾಸಕಿ ರೂಪಾಲಿ ನಾಯ್ಕ  ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಸಿ ಸುಮಾರು ನೂರಕ್ಕೂ ಅಧಿಕ ಮುಸ್ಲಿಂ ಮಹಿಳೆಯರನ್ನು ಭಾರತೀಯ ಜನತಾ ಪಕ್ಷಕ್ಕೆ ಸೇರಿಸಿಕೊಂಡರು.  ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರ ಹಾಗೂ ಬಿ. ಎಸ್. ಯಡಿಯೂರಪ್ಪ ನೇತ್ರತ್ವದ ರಾಜ್ಯ ಸರಕಾರದ ಅಭಿವೃದ್ಧಿಪರ ಯೋಜನೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಿದರು.  ಹಿಂದಿನ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಯಾವುದೇ ರೀತಿಯ ಅಭಿವೃದ್ಧಿಪರ ಕಾರ್ಯಗಳು ನಡೆದಿಲ್ಲ ಎಂದರು. ಯಲ್ಲಾಪುರ ಪಟ್ಟಣ ಪಂಚಾಯತ ಸದಸ್ಯ ಆದಿತ್ಯ ಗುಡಿಗಾರರ ಮನೆಯಲ್ಲಿ ಪ್ರಚಾರಕ್ಕೆಂದು ತೆರಳಿದಾಗ ಗುಡಿಗಾರ ಕುಟುಂಬದವರು ತಮಗೆ ಉಡುಗೊರೆಯಾಗಿ ಬಂದಿದ್ದ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಹಸ್ತಾಕ್ಷರವಿರುವ ಭಾವಚಿತ್ರವನ್ನು ಶಾಸಕರಿಗೆ ನೆನಪಿನ ಕಾಣಿಕೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸದಸ್ಯರಾದ ಆದಿತ್ಯ ಗುಡಿಗಾರ,  ಶ್ಯಾಮಲಿ ಪಾಟನಕರ,  ನಮಿತಾ ಬಿಡಿಕರ,  ಕಲ್ಪನಾ ನಾಯ್ಕ, ಮಾಜಿ ಸದಸ್ಯ ಗಜು ನಾಯ್ಕ  ಶಾಸಕರಿಗೆ ಪ್ರಚಾರದಲ್ಲಿ ಜೊತೆಯಾದರು.