ಡಿಸೆಂಬರ್ 22 ರವಿವಾರರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2024 ರಲ್ಲಿ ಪಾಲ್ಗೊಳ್ಳಲು ವಿದೇಶಗಳಿಂದ ಓಟಗಾರರು ಆಗಮ
ವಿಜಯಪುರ 19: ನಗರದಲ್ಲಿ ಡಿಸೆಂಬರ್ 22 ರವಿವಾರರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2024 ರಲ್ಲಿ ಪಾಲ್ಗೊಳ್ಳಲು ವಿದೇಶಗಳಿಂದ ಓಟಗಾರರು ಆಗಮಿಸುತ್ತಿದ್ದಾರೆ. ವಿಜಯಪುರ ತಾಲೂಕಿನ ಹೊನಗನಹಳ್ಳಿ ಮೂಲದ ಮತ್ತು ಈಗ ಜರ್ಮನಿಯಲ್ಲಿ ಉದ್ಯೋಗಿಯಾಗಿರುವ ವಿರೇಶ ಬಿರಾದಾರ ಹಾಗೂ ಬಬಲೇಶ್ವರ ಮೂಲದ ಹಾಗೂ ಈಗ ಅಮೇರಿಕಾದ ಟೆಕ್ಸಾಸ್ ನಲ್ಲಿ ಸಾಫ್ಟವೇರ್ ಎಂಜನಿಯರ್ ಆಗಿರುವ ವಿನಯಕುಮಾರ ಜಂಗಮಶೆಟ್ಟಿ ಈ ಬಾರಿಯ ಓಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿರೇಶ ಬಿರಾದಾರ ಜರ್ಮನಿಯಲ್ಲಿ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದು, ಈಗಾಗಲೇ ವಿಪ್ರೊ, ಟಾಟಾ ಮ್ಯಾರಥಾನ್ ಮತ್ತು ಜರ್ಮನಿಯಲ್ಲಿ ನಡೆದ ಅನೇಕ ಮ್ಯಾರಥಾನ್ ಗಳಲ್ಲಿ ಓಡಿದ್ದಾರೆ. ಈ ಬಾರಿ ವಿಜಯಪುರದಲ್ಲಿ ನಡೆಯಲಿರುವ ಮ್ಯಾರಥಾನ್ ನಲ್ಲಿ 10 ಕಿ.ಮೀ ರನ್ ನಲ್ಲಿ ಓಡಲಿದ್ದಾರೆ. ಬಬಲೇಶ್ವರ ಮೂಲದ ವಿನಯಕುಮಾರ ಜಂಗಮಶೆಟ್ಟಿ ಅಮೇರಿಕಾದ ಟೆಕ್ಸಾಸ್ ನಲ್ಲಿ ಸಾಫ್ಟವೇರ್ ಎಂಜನಿಯರ್ ಆಗಿದ್ದು, ವಿಜಯಪುರದಲ್ಲಿ ನಡೆಯಲಿರುವ ಹೆರಿಟೇಜ್ ರನ್ ನಲ್ಲಿ 21 ಕಿ.ಮೀ ವಿಭಾಗದಲ್ಲಿ ಓಡಲಿದ್ದಾರೆ. ಅಲ್ಲದೇ, ಅವರು ಈಗಾಗಲೇ ಅನೇಕ ಮ್ಯಾರಥಾನ್ ಗಳಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ. ವಿದೇಶಗಳಿಂದ ಆಗಮಿಸಿ ಈ ಓಟದಲ್ಲಿ ಪಾಲ್ಗೊಳ್ಳುತ್ತಿರುವ ವಿರೇಶ ಬಿರಾದಾರ, ವಿನಯಕುಮಾರ ಜಂಗಮಶೆಟ್ಟಿ ಇತರ ಓಟಗಾರರಿಗೆ ಸ್ಪೂರ್ತಿ ನೀಡುತ್ತಿದ್ದಾರೆ.