ಕರಾವಳಿ ಉತ್ಸವದಲ್ಲಿ ಬಣ್ಣಬಣ್ಣದ ಅಪರೂಪದ ಫಿಶ್ ಅಕ್ವೇರಿಯಂಗೆ ಚಾಲನೆ

ಕಾರವಾರ: ಇದೇ ಮೊದಲ  ಕರಾವಳಿ  ಉತ್ಸವ 2018 ರಲ್ಲಿ ಅಪರೂಪದ ಮೀನುಗಳ ಲೋಕ ಅನಾವರಣಗೊಂಡಿದ್ದು, ನೇತ್ರಾಣಿ ದ್ವೀಪದ  ಹವಳದ ದಿಬ್ಬಗಳಲ್ಲಿ  ಕಾಣ ಸಿಗುವ ಮೀನುಗಳ ದರ್ಶನ ಭಾಗ್ಯ ಕರಾವಳಿ ಉತ್ಸವಕ್ಕೆ ಆಗಮಿಸಿದ ಪ್ರವಾಸಿಗರಿಗೆ ದಕ್ಕಿತು. ಸ್ಥಳೀಯರು ಸೇರಿದಂತೆ ಜಿಲ್ಲೆಯ ವಿವಿಧ ಭಾಗದಿಂದ ಆಗಮಿಸಿದ ಜನರು ಉತ್ಸಾಹದಿಂದ ಆಧುನಿಕ ಫಿಶ್ ಅಕ್ವೇರಿಯಂ ನೋಡಿ ಖುಷಿಪಟ್ಟರು. 

ಮತ್ಸಮೇಳಕ್ಕೆ  ಇಲ್ಲಿಯ  ಐಎನ್ಎಸ್ ಕದಂಬ ನೌಕಾನೆಲೆ ಮುಖ್ಯಸ್ಥರಾದ ವೈಯ್ಸ್ ಅಡ್ಮಿರಲ್ ಕೆ.ಜೆ.ಕುಮಾರ ಅವರು ಮೀನುಮರಿಯೊಂದನ್ನು ಫಿಶ್ ಪಾಟ್ಗೆ ಬಿಡುವ ಮೂಲಕ  ಮತ್ಸ್ಯಮೇಳಕ್ಕೆ ಚಾಲನೆ ನೀಡಿದರು. ಇವರೊಂದಿಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸಹ ಫಿಶ್ ಮರಿಯನ್ನು ಅಕ್ವೇರಿಯಂ ಪಾಟ್ಗೆ ಬಿಟ್ಟರು.  ಜಿಲ್ಲೆಯ ಕರಾವಳಿ ಪ್ರದೇಶಗಳಲ್ಲಿ ಮೀನುಗಾರಿಕೆ ಪ್ರಮುಖ ಕಸುಬಾಗಿರುವದರಿಂದ ಮೀನುಗಾರಿಕೆ ಇಲಾಖೆಯು ಪ್ರವಾಸಿಗರಿಗೆ ಮತ್ಸ್ಯಲೋಕವನ್ನು ಪ್ರದಶರ್ಿಸಬೇಕೆಂಬ ಉದ್ದೇಶದಿಂದ ಕಾರವಾರ ಕಡಲತೀರದ ಯುದ್ದ-ನೌಕೆ ಆವರಣದಲ್ಲಿ ಮತ್ಸ್ಯಮೇಳವನ್ನು ಆಯೋಜಿಸಿದ್ದು ಮೇಳದಲ್ಲಿ 60ಕ್ಕೂ ಹೆಚ್ಚು ಅಕ್ವೇರಿಯಮ್ ಮತ್ತು 80ಕ್ಕೂ ಹೆಚ್ಚಿನ ತಳಿಯ ಮೀನುಗಳು ಕಂಡುಬರುತ್ತಿವೆ. 

    ಮೇಳದಲ್ಲಿ ಸ್ಟಾಕೋಪೆಟ್ಸ ಟನಲ್ ಅಕ್ವೇರಿಯಮ್ ಮಾದರಿ, ತೆಲುವ ಕಲ್ಲುಗಳ, ಪ್ಲಾಂಟೇಡ್, ಪ್ಲೇನ್ ಮತ್ತು ಟ್ರೋಪಿಕಲ್ ಅಕ್ವೇರಿಯವಮ್ಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು ರೈತರಿಗೆ ಮೀನು, ಸಿಗಡಿ ಕೃಷಿ ಬಗ್ಗೆ ಒಲವು ತೋರುವಂತೆ ಮಾಡಲು ಮೀನುಗಾರಿಕೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಮಳಿಗೆಗಳನ್ನು ತೆರೆಯಲಾಗಿದೆ. ಅಲ್ಲದೇ ಮಕ್ಕಳು ಕೂಡಾ ಮೀನು ತಳಿಗಗಳ ಬಗ್ಗೆ ತಿಳಿದುಕೊಳ್ಳಲಿ ಎಂಬ ಉದ್ದೇಶದಿಂದ ಪಿಕ್ ಎಂಡ್ ಸ್ಪೀಕ್ ಸ್ಪಧರ್ೇ ಆಯೋಜಿಸಿ ಬಹುಮಾನ ನೀಡಲಾಗುತ್ತಿದೆ. 

ಇಲಾಖೆಯಿಂದಲೆ ಮೇಳಕ್ಕೆ ಸಂಪೂರ್ಣ ಅನುಧಾನ : ಕರಾವಳಿ ಉತ್ಸವದಲ್ಲಿ ಮತ್ಸ್ಯಮೇಳಕ್ಕೆ ಮೀನುಗಾರಿಕೆ ಇಲಾಖೆಯೇ ಮೇಳಕ್ಕೆ ಸಂಪೂರ್ಣ ಅನುದಾನ ನೀಡಿದ್ದು ಮುಂಬರುವ ದಿನಗಳಲ್ಲಿ ಬೃಹತ ಪ್ರಮಾಣದ ಮತ್ಸ್ಯ ಮೇಳ ಆಯೋಜಿಸುವ ಚಿಂತನೆ ಇದೆ ಎಂದು ಜಿಲ್ಲಾ ಮೀನುಗಾರಿಕಾ ಇಲಾಖೆ ಉಪನಿದರ್ೇಶಕರು ಇದೇ ವೇಳೆ ವಿವರಿಸಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ಅಡಿಸನಲ್ ಎಸ್ಪಿ ಗೋಪಾಲ ಬ್ಯಾಕೋಡ, ಜಿಲ್ಲಾ ಜಿಲ್ಲಾ ಮೀನುಗಾರಿಕಾ ಇಲಾಖೆ ಉಪನಿದರ್ೇಕ ನಾಗರಾಜ ಪಿ. ಸಹಾಯಕ ನಿದರ್ೇಶಕ ವೆಂಕಟರಾಮ ಹೆಗಡೆ ಮತ್ತು ಇತರರು ಉಪಸ್ಥಿತರಿದ್ದರು.